ಪೌಷ್ಟಿಕ ಆಹಾರ :
ನಗು ಫೌಂಡೇಶನ್ ಮತ್ತು ಡಚ್ ವಿವ್ಯೂ ಕಂಪನಿಯ ಸಹಯೋಗದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಆರು ಶಾಲೆಗಳ ನೂರೈವತ್ತು ಮಕ್ಕಳಿಗೆ ಆರು ವಾರಗಳ ಕಾಲ ಅತ್ಯುತ್ತಮ ಗುಣಮಟ್ಟದ ಪೌಷ್ಟಿಕ ಆಹಾರವನ್ನು ನೀಡಲಾಯಿತು. ಈ ಯೋಜನೆಯ ಅನುಷ್ಠಾನಕ್ಕಾಗಿ ಫೌಂಡೇಶನ್ ರವರು ಇಲ್ಲಿಯವರೆಗೆ 18,000 ರೂಪಾಯಿ ಖರ್ಚು ಮಾಡಿದ್ದಾರೆ.
ವಾರಕ್ಕೆ ನಾಲ್ಕು ದಿನಗಳಂತೆ ಪ್ರತಿ ದಿನವೂ ಕೂಡ ವಿಶೇಷ ಪೌಷ್ಟಿಕ ಆಹಾರವಾದ ತೆಂಗಿನ ಕಾಯಿ ಲಾಡು, ಶೇಂಗಾ ಲಾಡು, ಸಿರಿ ಧಾನ್ಯಗಳ ಲಾಡು, ಗೋಡಂಬಿ ಬಿಸ್ಕೆಟ್ , ಹೆಸರು ಕಾಳು,ಕಡ್ಲೆ ಕಾಳು,ಹಸಿರು ಬಟಾಣಿ ಕಾಳು ಮತ್ತು ಬಾಳೆಹಣ್ಣು ನೀಡಿದ್ದಾರೆ .ಇದರ ಲಾಭವನ್ನು ಹೇರೂರು ಶಾಲೆಯ 50 ಮಕ್ಕಳು, ಹೆದ್ಸೆ ಶಾಲೆಯ 29 ಮಕ್ಕಳು, ಎಲೆಮಡಲು ಶಾಲೆಯ 21 ಮಕ್ಕಳು, ಮೇದಕ್ಕಿ ಶಾಲೆಯ 8 ಮಕ್ಕಳು, ತಲಮಕ್ಕಿ ಶಾಲೆಯ 21ಮಕ್ಕಳು (ನರ್ಸರಿ ) ಮತ್ತು ಸುಂಕದಗದ್ದೆ ಶಾಲೆಯ 21 ಮಕ್ಕಳು ಪಡೆದಿದ್ದಾರೆ.
ಬಡ ಮಕ್ಕಳ ಅಪೌಷ್ಟಿಕತೆಯನ್ನು ನಿವಾರಿಸಲು ಶ್ರಮಿಸಿದ ನಗು ಫೌಂಡೇಶನ್ ಪ್ರವರ್ತಕರಾದ ಶ್ರೀಮತಿ ದೀಪ್ತಿ ಮೇಡಂರವರಿಗೆ ಹಾಗೂ ಡಚ್ ವಿವ್ಯೂ ಕಂಪನಿಗೆ ಎಲ್ಲ ಶಾಲೆಗಳ ಪರವಾಗಿ ಅನಂತ ಪ್ರಣಾಮಗಳು.
ಕೃತಜ್ಞತೆ ಸಲ್ಲಿಸುವ ಶಾಲೆಗಳು.
ಮುಖ್ಯಗುರುಗಳು ಮತ್ತು ಎಸ್ ಡಿ ಎಂ ಸಿ.
ಸುಂಕದಗದ್ದೆ
ಮುಖ್ಯಗುರುಗಳು ಮತ್ತು ಎಸ್ ಡಿ ಎಂ ಸಿ.
ಮೇದಕ್ಕಿ
ಮುಖ್ಯಗುರುಗಳು ಮತ್ತು ಎಸ್ ಡಿ ಎಂ ಸಿ.
ಹೇರೂರು.
ಮುಖ್ಯಗುರುಗಳು ಮತ್ತು ಎಸ್ ಡಿ ಎಂ ಸಿ.
ಎಲೆಮಡಲು
ಮುಖ್ಯಗುರುಗಳು ಮತ್ತು ಎಸ್ ಡಿ ಎಂ ಸಿ.
ಹೆದ್ಸೆ
ಮುಖ್ಯಗುರುಗಳು ಮತ್ತು ಎಸ್ ಡಿ ಎಂ ಸಿ.
ತಲಮಕ್ಕಿ.
ವಿಶೇಷ ಅಭಿನಂದನೆ..
ಚೌಡ್ಲಾಪುರ ಸೂರಿ. (ಸಿ ಆರ್ ಸುರೇಶ ).
ಶಿಕ್ಷಕರು ಸುಂಕದಗದ್ದೆ.