ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶ್ರೀ ಗುರು ದಿಂಗಾಲೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಲೆಹೊಸೂರು ಕಬಡ್ಡಿ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ
23/09/2024ರಂದು ಶಿರಹಟ್ಟಿ ತಾಲೂಕ ಮಟ್ಟದ ಕ್ರೀಡಾಕೂಟ ಜರುಗಿತು. ಕ್ರೀಡಾಕೂಟದಲ್ಲಿ ಶ್ರೀ ಗುರು ದಿಂಗಾಲೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಾಲೆಹೊಸೂರಿನ ಮಕ್ಕಳು ಬಾಲಕರ ಕಬಡ್ಡಿ ವಿಭಾಗದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹಾಗೂ ಬಾಲಕಿಯರ ಚಕ್ರ ಎಸೆತ ವಿಭಾಗದಲ್ಲಿ ಕಾವೇರಿ ವಗ್ಗಣ್ಣನವರ್ ತೃತೀಯ ಸ್ಥಾನ ಗಳಿಸಿಕೊಂಡಿದ್ದಾಳೆ.
ಉತ್ತಮ ಸಾಧನೆ ತೋರಿದ ಮಕ್ಕಳಿಗೆ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಲಿಂಬಯ್ಯಸ್ವಾಮಿ ಮಾದಾಪುರಮಠ, ಸೂರಣಗಿ ಸಿಆರ್ಪಿ ಶ್ರೀ ಎಲ್ ಎಫ್ ಮಠದ,ಪ್ರಧಾನ ಗುರುಗಳಾದ ಶ್ರೀ ಮಹಮ್ಮದ್ ದಾದುನವರ , ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಎಚ್ ಎಸ್ ಪಾಟೀಲ್ ಅಭಿನಂದನೆ ಸಲ್ಲಿಸಿದ್ದಾರೆ.
ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ಎನ್ ಬಿ ಕಾಗನೂರ , ಶ್ರೀ ಯಲ್ಲಪ್ಪ ಬಾಲಣ್ಣನವರ, ಕುಮಾರಿ ರಾಧಾ ಶೇರೆಗಾರ,ಶ್ರೀ ಬಸವರಾಜ ಪೆದ್ದರ ,ಶ್ರೀ ಗಣೇಶ್ ದೇವರಮನಿ ,ಕುಮಾರಿ ಯಲ್ಲಮ್ಮ ಗೂಳಣ್ಣವರ ಹಾಗೂ ಸಂತೋಷ ವ್ಯಕ್ತಪಡಿಸಿದ್ದಾರೆ.