ಸರ್ಕಾರಿ ಶಾಲೆಯ ಮಕ್ಕಳಿಗೆ ಗುಡ್ ನ್ಯೂಸ್!!
ವಾರದ ಆರು ದಿನಗಳಲ್ಲಿ ಮೊಟ್ಟೆ ವಿತರಣೆಗೆ ಚಾಲನೆ…
ಗದಗ:
ಜಿಲ್ಲೆಯ ಲಕ್ಷ್ಮೇಶ್ವರ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ಲಕ್ಷ್ಮೇಶ್ವರದಲ್ಲಿ ಇಂದು ಪಿ ಎಂ ಶಕ್ತಿ ಪೋಶನ್ ಅಭಿಯಾನ್ ಕಾರ್ಯಕ್ರಮದ ಅಡಿಯಲ್ಲಿ ಅಜೀಜ್ ಪ್ರೇಮ್ ಜಿ ಫೌಂಡೇಶನ್ ಸಹಕಾರದೊಂದಿಗೆ ವಾರದ ಆರು ದಿನಗಳಲ್ಲಿ ಪೂರಕ ಪೋಷಕಾಂಶ ಗಳಾದ ಮೊಟ್ಟೆ ಶೇಂಗಾ ಚಕ್ಕಿ ಹಾಗೂ ಬಾಳೆಹಣ್ಣುಗಳನ್ನು ವಿತರಿಸಲಾಯಿತು.
ಎಸ್ ಡಿ ಎಮ್ ಸಿ ಯ ಅಧ್ಯಕ್ಷರಾದ ಮಲ್ಲೇಶಪ್ಪ ಬಸಾಪುರ ಬಿ ಆರ್ ಪಿ ಯ ಸಂಪನ್ಮೂಲ ವ್ಯಕ್ತಿಗಳಾದ ಈಶ್ವರ್ ಮೆಡ್ಲೇರಿ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಈ ಒಂದು ಮಹತ್ವಕಾಂಕ್ಷೆ ಯೋಜನೆ ಮಕ್ಕಳಲ್ಲಿರುವ ಅಶಕ್ತತೆಯನ್ನು ಹೋಗಲಾಡಿಸಿ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಪ್ರಧಾನ ಗುರುಗಳಾದ ಬಿಎಮ್ ಕುಂಬಾರ್ ಮಾತನಾಡಿ, ಈ ಒಂದು ಯೋಜನೆಯಿಂದ ಮಕ್ಕಳ ಹಾಜರಾತಿ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದರು ಎಸ್ ಡಿ ಎಮ್ ಸಿ ಯ ಅಧ್ಯಕ್ಷರಾದ ಮಲ್ಲೇಶಪ್ಪ ಬಸಾಪುರ ಮಾತನಾಡಿ ಮಕ್ಕಳ ಆರೋಗ್ಯದ ಕಡೆಗೆ ನಾವೆಲ್ಲರೂ ಹೆಚ್ಚು ಗಮನ ವಹಿಸಬೇಕು ಎಂದು ಹೇಳಿದರು ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಮುದ್ದು ಮಕ್ಕಳು ಉಪಸ್ಥಿತರಿದ್ದರು.