ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯಲ್ಲಾಪುರದ ಪ್ರೌಢಶಾಲೆಯಲ್ಲಿ ಕಲೋತ್ಸವ- ಮಾನವೀಯ ಸಂಬಂಧಗಳಿಗೆ ನೆಲೆ ನೀಡುತ್ತದೆ-ಬಿ ಇ ಓ ನಾಣಕೀ ನಾಯಕ
ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಹೊರಹೊಮ್ಮಲು ಅವಕಾಶ
ನೀಡಿದಾಗ ಮಾತ್ರ ಅವರಲ್ಲಿ ಆತ್ಮಸ್ಥೆರ್ಯ ಇಮ್ಮಡಿಗೊಂಡು
ಸಾಧನೆ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ನಾಣಕೀ ನಾಯಕ ಅವರು ಹೇಳಿದರು.
ಸರಕಾರಿ ಪ್ರೌಢಶಾಲೆ ಯಲ್ಲಾಪುರದಲ್ಲಿ ಹಮ್ಮಿಕೊಂಡಿದ್ದ ಫು ಬಡ್ನಿ, ಬಟ್ಟೂರ ಮತ್ತು ದೊಡ್ಡೂರ ಕ್ಲಸ್ಟರ್ ಮಟ್ಟದ ಕಲೋತ್ಸವ ಕಾರ್ಯಕ್ರಮದಲ್ಲಿ
ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಎಡುವುತ್ತಿದ್ದು,
ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ರೀತಿ-ನೀತಿಗಳು ಮತ್ತು ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ಮಕ್ಕಳಲ್ಲಿ ಈ ಗುಣಗಳನ್ನು ಬೆಳೆಸುವ ಪಠ್ಯಕ್ರಮ ರೂಪುಗೊಳ್ಳಬೇಕಾಗಿದೆ ಎಂದರು.
ಕಲೋತ್ಸವ ಕಾರ್ಯಕ್ರಮ ದ ನೋಡಲ್ ಅಧಿಕಾರಿಗಳಾದ ಶ್ರೀ ಈಶ್ವರ ಮೇಡ್ಲೇರಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅನಾವರಣ ಹಾಗೂ ಉತ್ತೇಜನ ನೀಡುವುದು ಕಲೋತ್ಸವ ಕಾರ್ಯಕ್ರಮ ಆಯೋಜನೆಯ ಪ್ರಮುಖ ಆಶಯವಾಗಿದೆ. ಶಿಕ್ಷಣ ಮಕ್ಕಳ ವಿದ್ಯಾರ್ಜನೆಗೆ ಮಾತ್ರ ಸೀಮಿತವಾಗಿರದೆ ಅವರಲ್ಲಿನ ಪ್ರತಿಭೆ ಹೊರಹಾಕಿ, ನೈತಿಕವಾಗಿ ವಿಕಾಸ ಹೊಂದಲು ಸಹಾಯ ಮಾಡುವ ಮಹತ್ತರ ಕಾರ್ಯ ಎಂದು ಅವರು ತಿಳಿಸಿದರು.
ಪರೀಕ್ಷೆ ಮತ್ತು ಅಂಕಕ್ಕಾಗಿ ಮಾತ್ರ ಅಧ್ಯಯನ ಸೀಮಿತವಾಗಿದ್ದು, ವಿದ್ಯಾರ್ಥಿಗಳು ಆ ಮಿತಿಯನ್ನು ದಾಟಿ ಜ್ಞಾನಕ್ಕಾಗಿ ಓದು ಎಂಬ ನಿಟ್ಟಿನಲ್ಲಿ ಬೆಳೆಯಬೇಕು ಎಂದು ಶಾಲೆಯ ಪ್ರಧಾನ ಗುರುಗಳಾದ ಶ್ರೀ B N ಗಾಯಕವಾಡ ತಿಳಿಸಿದರು.
ಜೊತೆಗೆ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಈ ಮೂರು ಕ್ಲಸ್ಟರಿನ 8 ಪ್ರೌಢಶಾಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ಕಲೋತ್ಸವ ಕಾರ್ಯಕ್ರಮದಲ್ಲಿ ವಿಜೇತರಾದ ಮಕ್ಕಳಿಗೆ ಸಿ ಆರ್ ಪಿ ಗಿರೀಶ್ ನೇಕಾರ, ಶಿವಾನಂದ ಅಸುಂಡಿ ಮತ್ತು ನವೀನ ಅಂಗಡಿ ಬಹುಮಾನ ವಿತರಣೆ ಮಾಡಿದರು.
ಇದೇ ಸಂದರ್ಭದಲ್ಲಿ ಬಿಇಒ ಎಚ್ ನಾಣಕೀ ನಾಯಕ, ಪ್ರೌಢಶಾಲೆ ಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀ ಮಂಜಣ್ಣ ಅಂಗಡಿ, ಶ್ರೀ ಎಮ್ ಬಿ ಹೊಸಮನಿ,ಈಶ್ವರ ಮೇಡ್ಲೇರಿ, ಎಚ್ ಎಮ್ ಗುತ್ತಲ,ಎಸ್ ಡಿ ಲಮಾಣಿ, ಶ್ರೀ ವಿ ಎಚ್ ದೀಪಾಳಿ,ಸಿ ಆರ್ ಪಿ ಗಳಾದ ಶ್ರೀ ಗಿರೀಶ್ ನೇಕಾರ, ಶಿವಾನಂದ ಅಸುಂಡಿ,ನವೀನ ಅಂಗಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ನಾಮನಿರ್ದೇಶಿತ ಉಪಾಧ್ಯಕ್ಷರಾದ ಶ್ರೀ ಎಮ್ ಎಸ್ ಹಿರೇಮಠ , ಶ್ರೀ ಎಸ್ ಬಿ ಲಕ್ಷ್ಮೇಶ್ವರ,ಎಸ್ ಎಮ್ ಮಲ್ಲಣ್ಣವರ, ಮಾಂತಗೌಡ್ರ ಪಾಟೀಲ,ಫಕ್ಕೀರಗೌಡ್ರ ಭರಮಗೌಡ್ರ,ಫಕ್ಕೀರೇಶ ಕಟಗಿ,ಶಿವಪುತ್ರಪ್ಪ ಲಮಾಣಿ,ಶಂಕ್ರಪ್ಪ ಲಮಾಣಿ,ರಾಮಚಂದ್ರಪ್ಪ ಲಮಾಣಿ,ಶಿವಪುತ್ರಪ್ಪ ಲಮಾಣಿ, ನಿವೃತ್ತ ಶಿಕ್ಷಕರಾದ ಶ್ರೀ ಎನ್ ಎಸ್ ಬೀರಬ್ಬಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಾಲಾವತಿಯಿಂದ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶ್ರೀ ಪಿ ಆರ್ ನಡುವಿನಹಳ್ಳಿ,ಶ್ರೀ ಎನ್ ಎನ್ ಶಿಗ್ಲಿ ಹಾಗೂ ಶ್ರೀಮತಿ ಪ್ರೇಮಕ್ಕ ಅಂಗಡಿ ಯವರಿಗೆ ಸನ್ಮಾನಿಸಲಾಯಿತು.
ಕಲೋತ್ಸವ ಕಾರ್ಯಕ್ರಮದಲ್ಲಿ ಯಲ್ಲಾಪುರ ಗ್ರಾಮದ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸಿಬ್ಬಂದಿ ವರ್ಗ,ಸಂಬಂಧಿಸಿದ ಶಾಲೆಯ ಮಕ್ಕಳು ಮತ್ತು ನಿರ್ಣಾಯಕರು ಹಾಜರಿದ್ದರು.
ಶ್ರೀ ಎಮ್ ಎಚ್ ದಿಂಡವಾಡ ಸ್ವಾಗತಿಸಿದರು, ಎಸ್ ಸಿ ಹಾವೇರಿ ವಂದಿಸಿದರು. ಶ್ರೀ ಸಂಗಮೇಶ ಅಂಗಡಿ ನಿರೂಪಿಸಿದರು.