ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಹಾಗೂ ಸೂರಣಗಿ ಕ್ಲಸ್ಟರ ಪ್ರೌಢಶಾಲೆಗಳ ಕಲೋತ್ಸವ ಕಾರ್ಯಕ್ರಮ
ದಿನಾಂಕ 19/9/2024 ರಂದು ಶಿಗ್ಲಿ ಹಾಗೂ ಸೂರಣಗಿ ಕ್ಲಸ್ಟರ್ ಮಟ್ಟದ ಕಲೋತ್ಸವ ಶ್ರೀ N.R ಗಂಗಾವತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶಿಗ್ಲಿ ಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಶಂಕರ .ಎಂ ರಾಗಿ ನಿವೃತ್ತ ಪೊಲೀಸ್ ಅಧೀಕ್ಷಕರು ಲೋಕಾಯುಕ್ತ ಇಲಾಖೆ ಧಾರವಾಡ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ನಾರಾಯಣಪ್ಪ ಬ ಹರವಿ ಅಧ್ಯಕ್ಷರು ನವಚೇತನ ವಿದ್ಯಾ ಸಂಸ್ಥೆ ವಹಿಸಿಕೊಂಡಿದ್ದರು. ಮುಖ್ಯ ಅಥಿತಿಗಳಾಗಿ ಆಗಮಿಸಿದ ಶ್ರೀ H. N ನಾಯಕ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿರಹಟ್ಟಿ ಕಲೋತ್ಸವ ಕುರಿತು ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು..smt ಜ್ಯೋತಿ ಗಾಯಕವಾಡ crp ಶಿಗ್ಲಿ ಪ್ರಾಸ್ತವಿಕ ನುಡಿಗಳನ್ನಾಡಿದರು.ಕಾರ್ಯಕ್ರಮದಲ್ಲಿ ಅಶೋಕ್ ಶಿರಹಟ್ಟಿ ಉಪಾಧ್ಯಕ್ಷರು, ಶ್ರೀ ಸುಭಾಸ ಹುಲಗೂರ ಕಾರ್ಯದರ್ಶಿಗಳು, ಶ್ರೀ R. H ಗದಗ ಪ್ರಧಾನ ಗುರುಗಳು ಪ್ರೌಢ ಶಾಲೆ.. ಶ್ರೀ R. A ಜನಿವಾರದ ಪ್ರಧಾನ ಗುರುಗಳು ಪ್ರಾಥಮಿಕ ಶಾಲೆ, ಶಾಲಾ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಡಾ P. D ತೋಟದ, ಶ್ರೀ ಸೂಗಿರಪ್ಪ ಬೆಳವಗಿ, ಶ್ರೀ ಬಾಲಚಂದ್ರ ಜನಿವಾರದ, ಶ್ರೀ ಬಸವರಾಜ ಹಂಜಿ, ಶ್ರೀ ಸುರೇಶ ಭಂಡಾರಿ, ಶ್ರೀ ಆನಂದ ಕಮತಗಿ.. BRP ಗಳಾದ ಶ್ರೀ ಈಶ್ವರ್ ಮೆಡ್ಲೆರಿ, ಶ್ರೀ B. M ಯರಗುಪ್ಪಿ, CRP ಗಳಾದ ಶ್ರೀ L. F ಮಠದ ಶ್ರೀ ಸತೀಶ್ ಭೋಮಲೆ ಪ್ರಶಸ್ತಿ ಪ್ರಧಾನ ಮಾಡಿದರು.ಮತ್ತು ಶ್ರೀ L. S ಅರಳಿಹಳ್ಳಿ ಅಧ್ಯಕ್ಷರು ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘ, ಶ್ರೀ S. B ಅಣ್ಣಿಗೇರಿ ಶ್ರೀ B. B ಬಳಿಗಾರ ಮತ್ತು ಶಿಗ್ಲಿ ಹಾಗೂ ಸೂರಣಗಿ ಕ್ಲಸ್ಟರ್ ನ ಪ್ರಧಾನಗುರುಗಳು ಹಾಗೂ ಮಾರ್ಗದರ್ಶಿ ಶಿಕ್ಸಕರು ಉಪಸ್ಥಿತರಿದ್ದರು.. ಎರಡು ಕ್ಲಸ್ಟರ ನ ಹತ್ತು ಪ್ರೌಢ ಶಾಲೆಗಳ ಮಕ್ಕಳು ಭಾಗವಹಿಸಿದ್ದರು..