ಕಲಬುರಗಿ ಜಿಲ್ಲಾ ಸರಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷರು ಆಗಿ ಶ್ರೀಮತಿ. ನಂದಿನಿ ಸುರೇಂದ್ರ ಸನಬಾಳ್ ಆಯ್ಕೆ
ಕಲಬುರಗಿ:ಮೂಲತಃ ಬೀದರ ಜಿಲ್ಲೆಯ ಶ್ರೀ. ಪುಟ್ಟರಾಜ ಹಾಗೂ ಶ್ರೀಮತಿ. ರಾಜೇಶ್ವರಿ ಶಂಭುಶಂಕರ್ ಹುಮನಾಬಾದ ಶಿಕ್ಷಕ ದಂಪತಿಯ ಹಿರಿಯ ಮಗಳಾಗಿ ಜನಿಸಿದ ನಂದಿನಿ ಸನಬಾಳ್ ಕಲಬುರಗಿ ಜಿಲ್ಲೆಯ ಶ್ರೀ ಸುರೇಂದ್ರ ಸನಬಾಳ್ ಅವರೊಂದಿಗೆ ತನ್ನ ವೈವಾಹಿಕ ಜೀವನ ಪ್ರಾರಂಭಿಸಿದ ಇವರು ವೃತ್ತಿ ಯಲ್ಲಿ ಶಿಕ್ಷಕಿ ಯಾಗಿದ್ದು,ಚಿಕ್ಕ ವಯಸ್ಸಿನಲ್ಲಿಯೇ ವಿವಿಧ ಕ್ಷೇತ್ರದಲ್ಲಿ ತನ್ನದೇ ಕಾರ್ಯ ವೈಖರಿಯಿಂದ ಗುರುತಿಸಿಕೊಂಡಿದ್ದು, ಸಂಘಟನೆಯ ಚತುರೆ ಆದ ಇವರು ವಿವಿಧ ಸಂಘಟನೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಮಕ್ಕಳು ಮತ್ತು ಮಹಿಳೆಯರ ಬಗ್ಗೆ ಇವರಿಗಿರುವ ವಿಶೇಷ ಕಾಳಜಿ ಹಾಗೂ ದಿಟ್ಟ ಹೋರಾಟಗಾರರು ಆಗಿದ್ದ ಇವರನ್ನು ಗುರುತಿಸಿ ಕಲಬುರಗಿ ಜಿಲ್ಲಾ ಸರಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷರು ಆಗಿ ಆಯ್ಕೆ ಮಾಡಿ ಶ್ರೀಮತಿ. ರಮಾ ರಾಜ್ಯಾಧ್ಯಕ್ಷರು ಹಾಗೂ ಶ್ರೀಮತಿ. ಶೈಲಜಾ ವಿ ಗೌಡ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಆದೇಶ ಹೊರಡಿಸಿ ಅಭಿನಂದಿಸಿದ್ದಾರೆ.