ವಿಶ್ವದಲ್ಲಿ ಪ್ರಜಾಪ್ರಭುತ್ವದ ರಕ್ಷಣೆ ಮತ್ತು ಬೆಳವಣಿಗೆಗಾಗಿ, ಜನಜಾಗೃತಿಯ ಅಭಿಯಾನವಾಗಿ, ಮಾನವ ಸರಪಳಿ ಒಂದು ಅದ್ಭುತ ಪರಿಕಲ್ಪನೆ
ಮೋಹನ ದಂಡಿನ
ಯರಗಟ್ಟಿ: ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ, ಬಹುದೊಡ್ಡ ಸಂವಿಧಾನ, ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಸಂಸದೀಯ ಪ್ರಜಾಪ್ರಭುತ್ವದ ಗಣರಾಜ್ಯಗಳ ಒಕ್ಕೂಟ
ನಮ್ಮ ಈ ಭಾರತ. ಪ್ರಜಾಪ್ರಭುತ್ವ ಎಂದರೆ ಭಾರತ, ಭಾರತ ಪ್ರಜಾಪ್ರಭುತ್ವ”ಎಂದು ಸವದತ್ತಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಗಳಾದ ಮೋಹನ್ ದಂಡಿನ ತಿಳಿಸಿದರು. ಅವರು ಯರಗಟ್ಟಿ ಯಲ್ಲಿ ಜರುಗಿದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಮಾನವ ಸರಪಳಿ ಕಾರ್ಯ ಕ್ರಮ ಉದ್ದೇಶಿಸಿ ಮಾತನಾಡಿದರು.
ಚಿಕ್ಕೋಡಿ ಲೋಕಸಭಾ ಸಂಸದರಾದ ಪ್ರಿಯಾಂಕಾ, ಸತೀಶ್,ಜಾರಕಿಹೊಳಿ. ಶಾಸಕರಾದ ವಿಶ್ವಾಸ ವೈದ್ಯ ಮಾನವ ಸರಪಳಿಯ ಕಾರ್ಯ ಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮನೋಹರ ಚೀಲದ ಸಂವಿಧಾನ ಪೀಠಿಕೆ ಓದಿದರು. ಶಿಕ್ಷಣ ಸಂಯೋಜಕರಾದ ಅರ್ಜುನ ಕಾಮನ್ನವರ ಸ್ವಾಗತಿಸಿದರು. ವೈ, ಬಿ, ಕಡಕೋಳ. ದುರಗಪ್ಪ ಭಜಂತ್ರಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಮೈತ್ರಾದೇವಿ ವಸ್ತ್ರದ. ಗಿರೀಶ ಮುನವಳ್ಳಿ. ಶಿಕ್ಷಕರಾದ ಆರ್ ಆರ್ ದೇವರಡ್ಡಿ. ಡಾ. ಬಿ, ಐ, ಚಿನಗುಡಿ. ಶಿವಾನಂದ ಮಿಕಲಿ.ಯರಗಟ್ಟಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಡಿ, ಎನ್,ತಹಶೀಲ್ದಾರ್ ತಾಲೂಕಾ ದಂಡಾಧಿಕಾರಿ ಎಂ, ಎನ್, ಮಠದ ಯರಗಟ್ಟಿ ಸಮೂಹ ಸಂಪನ್ಮೂಲ ವ್ಯಕ್ತಿ ವ್ಹಿ,ಎಸ್, ಬಡಿಗೇರ. ಸತ್ತಿಗೇರಿ ಸಮೂಹ ಸಂಪನ್ಮೂಲ ವ್ಯಕ್ತಿ ಬಿ, ಎಸ್ ಸಿದ್ದಬಸನ್ನವರ. ಅರಣ್ಯ ಅಧಿಕಾರಿ ತೊರಗಲ್. ಬಿ ಬಿ ಅಣ್ಣಿಗೇರಿ ಸೇರಿದಂತೆ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು. ಶಿಕ್ಷಣ ಸಂಯೋಜಕರಾದ ಸುಧೀರ್ ವಾಗೇರಿ ಕಾರ್ಯ ಕ್ರಮ ನಿರೂಪಿಸಿದರು. ಶಿವಾನಂದ ಮಿಕಲಿ ವಂದಿಸಿದರು. ಎಲ್ಲಾ ಶಾಲೆಗಳ ಪ್ರಧಾನ ಗುರುಗಳು ಸಹ ಶಿಕ್ಷಕರು ಶಿಕ್ಷಕಿಯರು ವಿದ್ಯಾರ್ಥಿಗಳು ವಿವಿಧ ಇಲಾಖೆಗಳ ನೌಕರರು ಮಾನವ ಸರಪಳಿ ಯಲ್ಲಿ ಪಾಲ್ಗೊಂಡಿದ್ದರು