ಶಾಲಾ ಶಿಕ್ಷಣ ಇಲಾಖೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಿರಹಟ್ಟಿ ಸಮುದಾಯ ಹಾಗೂ ಅಕ್ಷರ ಫೌಂಡೇಶನ ಮತ್ತು ಗ್ರಾಮ ಪಂಚಾಯತ್ ಅಡರಕಟ್ಟಿ ಇವರ ಸಂಯುಕ್ತ ಆಶಯದಲ್ಲಿ ಅಡರಕಟ್ಟಿ ಗ್ರಾಮ ಪಂಚಾಯತಿ ಮಟ್ಟದ ಶಾಲಾ ಮಕ್ಕಳ ಗಣಿತ ಸ್ಪರ್ಧೆ ಕಾರ್ಯಕ್ರಮ ಸರಕಾರಿ ಮಾದರಿ ಪ್ರಾಥಮಿಕ ಅಡರಕಟ್ಟಿ ಶಾಲೆಯಲ್ಲಿ ನಡೆಯಿತು..
ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಪ್ರೇಮಕ್ಕ ಮಾನಪ್ಪ ಲಮಾಣಿ ಇವರು ವಹಿಸಿದ್ದರು ಪ್ರಾಸ್ತಾವಿಕ ವಾಗಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕಿಯಾರದ ಶ್ರೀಮತಿ ಎಸ್ ಹೆಚ್ ಉಮಾಚಗಿ ಮೇಡಮ್ ಇವರು ಮಾತನಾಡಿ ತಾವೆಲ್ಲರೂ ಸ್ಪರ್ಧಾತ್ಮಕ ಮನೋಭಾವನೆಯಿಂದ ಧೈರ್ಯವಾಗಿ ಪರೀಕ್ಷೆ ಬರೆಯಿರಿ ಗಣಿತ ಕಬ್ಬಿಣ ಕಡಲೆಯಲ್ಲ ಪ್ರಾರಂಭಿಕ ಹಂತದಿಂದ ತಯಾರಿ ಮಾಡಿಕೊಂಡಿರೆ ಅದು ಸುಲಭ ಎಂದರು, ಉದ್ಘಾಟಣೆ ನೆರವೇರಿಸಿದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಚಂದ್ರು ನೇಕಾರ ಮಾತನಾಡಿ ಮಕ್ಕಳು ಖುಷಿಯಿಂದ ಪರೀಕ್ಷೆಯಲ್ಲಿ ಪಾಲ್ಗೊಳ್ಳಿ ಯಾವುದೇ ಭಯ ಬೇಡ ಮಕ್ಕಳ ಸ್ಪರ್ಧೆ ಇಲ್ಲದ ಜೀವನ ಪದರಿಲ್ಲದ ಹೂವಿನಂತೆ ಪರೀಕ್ಷೆ ಹಬ್ಬದ ರೀತಿಯಲ್ಲಿ ಆಚರಿಸಬೇಕು ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಿಕೊಳ್ಳಬೇಕು ಅಂಕಗಳ ಹಿಂದೆ ನಾವು ಹೋಗಬಾರದು ಅಂಕಗಳು ನಮ್ಮ ಹಿಂದೆ ಬರಬೇಕು ಆರನೇ ತರಗತಿಯ ಮಕ್ಕಳಿಗೆ ಶುಭವಾಗಲಿ ಭಾಗವಹಿಸಿದ ಮಕ್ಕಳೆಲ್ಲರೂ ಚೆನ್ನಾಗಿ ಪರೀಕ್ಷೆ ಬರೆಯಲಿ ಎಂದರು ಮುಖ್ಯ ಅತಿಥಿಯಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಎಂ ಎಸ್ ಹಿರೇಮಠ ಹಾಗೂ ಅತಿಥಿಗಳಾಗಿ ಶ್ರೀಮತಿ ಕೊಟ್ರಮ್ಮ ಪಿ ಪಿ ಸುಗ್ನಳ್ಳಿ ಶ್ರೀಮತಿ ಎಂ ವಾಯ್ ನೀಲನಾಯ್ಕರ ಇದ್ದರು ಕಾರ್ಯಕ್ರಮವನ್ನು ಶ್ರೀ ಡಿ ಡಿ ಲಮಾಣಿ ನಿರೂಪಿಸಿದರು..