ಸ್ತ್ರೀ ಶಕ್ತಿ ಯ ಔಚಿತ್ಯ
ಗುರುವಾರ ಬೆಂಗಳೂರಿನ ಕೊಂಡಜ್ಜಿ ಸಭಾಂಗಣದಲ್ಲಿ “ದೇಶದ ಪ್ರಗಯಲ್ಲಿ ಸರಕಾರಿ ಮಹಿಳಾ ನೌಕರರ ಕೊಡುಗೆಗಳು ” ಎಂಬ ವಿಷಯದ ಕುರಿತು ರಾಜ್ಯ ಮಟ್ಟದ ಬೃಹತ್ ಸಮಾವೇಶ ನಡೆಯಿತ್ತಿದ್ದು, ಮಹಿಳೆಯರ ಕೊಡುಗೆಗಳ ಬಗ್ಗೆ ಉಪನ್ಯಾಸ ನಡೆಯುತ್ತಿದ್ದು. ರಾಜ್ಯದಲ್ಲಿ ವಿವಿಧ ಕ್ಷೆತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ,ಅತ್ಯುತ್ತಮ ಶಾಲೆಗಳಿಗೆ ಹಾಗೂ ವಿಶೇಷ ಸಾಹಿತಿಗಳಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯುತ್ತಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಭಾಗವಹಿಸುತ್ತಿದ್ದಾರೆ.
ಹೆಣ್ಣಿಲ್ಲದ ಮನೆ,ಹೆಂಡತಿ ಇಲ್ಲದ ಗಂಡ, ದೇವರು ಇಲ್ಲದ ದೇವಸ್ಥಾನ ಇದು ಊಹಿಸಲು ಸಾಧ್ಯವೆ. ?
ನೀವು ವಿದ್ಯಾರ್ಥಿನಿಯರು ಇಲ್ಲದ ತರಗತಿಯ ಕೋಣೆ,ಹುಡುಗಿಯರು ಇಲ್ಲದ ಕಾಲೇಜು,ಮಹಿಳೆಯರು ಇಲ್ಲದ ಸಭೆ ಸಮಾರಂಭಗಳಿಗೆ ಹೋಗಿದ್ದೀರಾ? ಎಷ್ಟೆ ಸಂಭ್ರಮ ಸಡಗರ ಇದ್ದರೂ ಅಲ್ಲಿ ಮಹಿಳೆ ಇಲ್ಲದಿದ್ದರೆ ಆ ಸಮಾರಂಭಕ್ಕೆ ಶೋಭೆ ಬರೋದಿಲ್ಲ.
ಮನೆಯಿಂದ ತಾಯಿ, ಸಹೋದರಿಯರು, ಗೆಳತಿ, ಹೆಂಡತಿ ಹೀಗೆ ನಾನಾ ಸಂಬಂಧಗಳ ರೂಪದಲ್ಲಿ ಹೆಣ್ಣು ಪುರುಷನೊಂದಿಗೆ ಇದ್ದು ಅರ್ಥಪೂರ್ಣ ಜೀವನ ರೂಪಿಸುವಲ್ಲಿ ಕಾರಣಿಕರ್ತಳು ಆಗಿದ್ದಾಳೆ. ಹೆಣ್ಣಿನ ಮಮತೆ, ಸಹಕಾರ, ಸಹಾಯ, ಪ್ರೀತಿ, ಕುಟುಂಬದ ಬಗ್ಗೆ ಅವಳಿಗಿರುವ ಉತ್ಸಾಹ ನೋಡಿದಾಗ ಹೆಣ್ಣು ಕೂಡ ಅಷ್ಟೆ ಮುಖ್ಯ ಎನ್ನುವುದು ನಿಜ ಅಲ್ಲವೆ.
ಒಂದು ದಿನ ಅಮ್ಮ ಊರಿಗೆ ಸಭೆ ಸಮಾರಂಭಕ್ಕೆ ಹೋದಾಗ ಮನೆಯ ಸ್ಥಿತಿ ಅಲ್ಲೋಲ್ಲ ಕಲ್ಲೋಲ್ಲ ಆಗಿ ಬಿಡುತ್ತೆ. ಸಮಯದೊಂದಿಗೆ ಸಮಯ ಪ್ರಜ್ಞೆಯಿಂದ ಎಲ್ಲವೂ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುವಲ್ಲಿ ಕುಟುಂಬದ ಸಂಪೂರ್ಣ ಜವಾಬ್ದಾರಿ ಹೆಣ್ಣಿನ ಮೇಲೆ ಇರುತ್ತದೆ.
ಆದಿ ಅನಾದಿ ಕಾಲದಿಂದಲೂ ಮಹಿಳೆಯರು ಪುರುಷರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ತನ್ನ ಜವಾಬ್ದಾರಿಯನ್ನು ಕರ್ತವ್ಯ ಎನ್ನುವ ಉದಾಸೀನ ಭಾವದಿಂದ ಎಲೆಮರೆ ಕಾಯಿಯಂತೆ ಸಮಾಜದಲ್ಲಿ ಪುರುಷರಿಗೆ ಅವಕಾಶ ಕೊಟ್ಟಿದ್ದು ಭಾರತೀಯ ಮಹಿಳಿಯರಿಗೆ ಪುರುಷರ ಬಗ್ಗೆ ಇರುವ ಗೌರವ ಅಭಿಮಾನ ಹೊರತು ನಾವು ಅಬಲೆ ಎನ್ನುವ ಕಾರಣಕ್ಕೆ ಅಲ್ಲ.ಯಾವತ್ತಿಗೂ ಹೆಣ್ಣು
ಭೋಗದ ವಸ್ತು ಅಲ್ಲ, ಅದಾಮ ನಿಗೆ ಈವ್ ಜೊತೆಯಾದಾಗ ತಾನೇ ಪ್ರಪಂಚ ಬೆಳೆಯಿತು.
ಋಗ್ವೇದ ಕಾಲದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಇಲ್ಲದಿದ್ದರೂ, 6 ನೇಯ ಶತಮಾನದಲ್ಲಿ ಹೊಸ ಧರ್ಮಗಳ ಉದಯದ ನಂತರ ಮಹಿಳೆಯರಿಗೆ ಸಮಾನತೆ ನೀಡಿದ್ದರೂ ಕೂಡ ಅನೇಕ ದುಷ್ಟ ಪದ್ಧತಿಗಳಿಗೆ ಬಲಿಯಾಗಿ ನಲುಗಿದರು,ಋಗ್ವೇದ ಕಾಲದಲ್ಲಿ ಸ್ತ್ರೀಯರಿಗೆ ಅವಕಾಶ ಸಿಗದಿದ್ದರೂ,6 ನೇಯ ಶತಮಾನದಲ್ಲಿ ಹೊಸ ಧರ್ಮಗಳ ಉದಯ ಹಾಗೂ ಸ್ತ್ರೀಗೆ ಸ್ಥಾನಮಾನ ಸಮಾನತೆ ಸಿಕ್ಕಿತು.12 ನೇಯ ಶತಮಾನದಲ್ಲಿ ಅಕ್ಕಮಹಾದೇವಿಯಂತಹ ಅನೇಕ ಶಿವಶರಣೆಯರು ಸಮಾಜದ ಒಳಿತಿಗಾಗಿ ವಚನಗಳು ರಚಿಸಿ ಅನುಭವ ಮಂಟಪದಲ್ಲಿ ಪುರುಷರೊಂದಿಗೆ ಕೈಜೋಡಿಸಿದ್ದು,19 ನೇ ಶತಮಾನದಲ್ಲಿ ರಾಜಾರಾಮ್ ಮೋಹನರಾಯ, ಜ್ಯೋತಿಬಾ ಬಾ ಫುಲೇ, ಸಾವಿತ್ರಿಬಾಯಿ ಫುಲೇ ಬಾಲ್ಯ ವಿವಾಹ, ಸತಿಸಹಗಮನ ಪದ್ಧತಿ, ದೇವದಾಸಿ ಹೀಗೆ ದುಷ್ಟ ಪದ್ಧತಿಗಳ ವಿರುದ್ಧ ಹೋರಾಡಿ ಮಹಿಳಾ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟ ಶ್ರೇಯಸ್ಸು ಮಾತೇ ಸಾವಿತ್ರಿಬಾಯಿ ಫುಲೆ ಗೆ ಸಲ್ಲುತ್ತದೆ.
, ಭಾರತ ದೇಶದ ಸ್ವತಂತ್ರ ಹೋರಾಟದಲ್ಲಿ ಅನೇಕ ಮಹಿಳೆಯರು ಭಾಗವಹಿಸಿ ಪುರುಷರಿಗೆ ಪ್ರೋತ್ಸಾಹ, ಧೈರ್ಯ ತುಂಬಿ ತನ್ನ ವೀರ ಪುತ್ರರ ಮರಣ ನೋಡಿಯೂ ಧೃತಿಗೆಡದೆ ಹೋರಾಡಿದವರಲ್ಲಿ ನಮ್ಮ ಕನ್ನಡ ಮಣ್ಣಿನ ಬೆಳ್ಳಾರಿ ಸಿದ್ದಮ್ಮ, ಯಶೋಧರ ದಾನಪ್ಪ, ಸುನಂದಮ್ಮ್, ಬೆಳವಡಿ ಮಲ್ಲಮ್ಮ, ಕಿತ್ತೂರು ರಾಣಿ ಚನ್ನಮ್ಮ, ಅಬ್ಬಕ್ಕ, ರಜಿಯಾ ಸುಲ್ತಾನ್ ಅನೇಕ ವೀರ ಮಹಿಳಿಯರು ಇದ್ದರು.
ಜಗತ್ತಿನಲ್ಲಿ ಮಾತೃ ಪ್ರಧಾನ್ ಧರ್ಮ ಎಂದಾದರೆ ಅದುವೆ ಬೌದ್ಧ ಧರ್ಮ ಸ್ತ್ರೀಯರಿಗೆ ಮಹತ್ವ ಕೊಟ್ಟಿದ್ದು ಡಾ. ಬಾಬಾ ಸಾಹೇಬರ ಕೊಡುಗೆ ಮರೆಯಲು ಸಾಧ್ಯವೆ. ?
ಇವತ್ತು ಅಡುಗೆ ಮನೆಯಿಂದ ಗಗನಯಾನದವರೆಗೂ ಪುರುಷರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ತನ್ನದೆ ಛಾಪು ಮೂಡಿಸಿದ್ದು ಎಲ್ಲಾ ರಂಗಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಈಗ ಸರಕಾರಿ ನೌಕರರ ಕೊಡುಗೆಯಲ್ಲಿ ಮಹಿಳಾ ಮಣಿಗಳು ಮುಂಚೂಣಿಯಲ್ಲಿದ್ದಾರೆ.
ವಿಶೇಷವೆಂದರೆ ಯಾವ ಕ್ಷೇತ್ರಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆಯೋ ಅಲ್ಲಿ ಪ್ರಗತಿ ಯಶಸ್ಸು ಕಾಣುತ್ತಿದ್ದೇವೆ. ಭಾರತ ದೇಶದ ಪ್ರಗತಿ ನಾಗಲೋಟದಲ್ಲಿ ಮುಂದುವರಿದಿದ್ದು, ಅದಕ್ಕೆ ಪುರುಷರೊಂದಿಗೆ ಮಹಿಳೆಯರೂ ಕಾರಣಿಕರ್ತರಾಗಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿಂದ ಹಿಡಿದು ಸರಕಾರದ ಮುಖ್ಯ ಕಾರ್ಯದರ್ಶಿಯಾಗಿ, ದೇಶದ ವಿತ್ತ ಸಚೆವೆಯಾಗಿ, ದೇಶ ಕಾಯುವ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಂದ್ರಯಾನ ಯಶಸ್ಸಿನ ಹಿಂದೆ 70% ಮಹಿಳಾ ವಿಜ್ಞಾನಿ ಗಳು ಶ್ರಮಿಸಿದ್ದಾರೆ.
“ಮಾತೆ ಜೀಜಾಬಾಯಿ ಕೊಡುಗೆ ಛತ್ರಪತಿ ಶಿವಾಜಿ ಮಹಾರಾಜ್”
“ಪುತಲೀಬಾಯಿಯ ಸಹಧರ್ಮಿಣಿ ಯಾಗಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ”
“ಭೀಮಬಾಯಿಯ ಕೊಡುಗೆ ಸಂವಿಧಾನ ಶಿಲ್ಪಿ ಸಮಾನತೆಯ ಹರಿಕಾರ ವಿಶ್ವ ರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ” ಹೀಗೆ ಅನೇಕ ಮಹಾನ್ ಪುರುಷರಿಗೆ ತಾಯಿ, ಹೆಂಡತಿ ಸಹೋದರಿಯಾಗಿ ಸಂಸ್ಕೃತಿ, ಆಚಾರ ವಿಚಾರ,ಮಾರ್ಗದರ್ಶನ ನೀಡಿದ್ದು, ನೀಡುತ್ತಿರುವುದು.ಸ್ತ್ರೀ ಶಕ್ತಿ ಯ ಪ್ರತೀಕವಲ್ಲವೇ. ಇತ್ತೀಚೆಗೆ ಅತ್ಯಾಚಾರ ಅನಾಚಾರದ ಪ್ರಕರಣಗಳು ಹೆಚ್ಚು ಹೆಚ್ಚು ಜರುಗುತ್ತಿವೆ.ನಮ್ಮ ರಕ್ಷಣೆ ನಿಮ್ಮ ಜವಾಬ್ದಾರಿ ಅಲ್ಲವೆ? ಇಷ್ಟೆಲ್ಲ ತಿಳುವಳಿಕೆ ಇದ್ದರೂ ಕೆಲವು ದುಷ್ಟರ ಅಟ್ಟಹಾಸಕ್ಕೆ ಕೊನೆಯಲ್ಲಿ. ? ಆದರೂ ನಾವು ಧೈರ್ಯಗುಂದದೆ
ನಮ್ಮ ರಕ್ಷಣೆಗೆ ನಾವು ಸಿದ್ದರಿದ್ದೇವೆ.ಹೀಗಾಗಿ ಸಂಘಟನೆ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಮಹಿಳಾ ಸಂಘಟನೆ ಮಹಿಳೆಯರು ಮುಂದಿನ ದಿನಗಳಲ್ಲಿ ಏನನ್ನು ಮಾಡಲು ಸಾಧ್ಯತೆ ಇದೆ ಎಂದು ಒಬ್ಬರಿಗೊಬ್ಬರು ಸೇರಿ ಚರ್ಚಿಸಲು ಮಹಿಳಾ ಸಂಘಟನೆ ಒಂದು ವೈಶಿಷ್ಟ್ಯ ಪೂರ್ಣ ಕಾರ್ಯ ಜರುಗಿಸುತ್ತಿರುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಿ ಸ್ತ್ರೀ ಯರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟದಲ್ಲಿ ಪಾಲ್ಗೊಳ್ಳಲು ಒಂದು ವೇದಿಕೆ ರೂಪಿಸುವ ಅಗತ್ಯವಿದೆ..
ಲೇಖಕರು
ಶ್ರೀಮತಿ. ನಂದಿನಿ ಸನಬಾಳ್ ಶಿಕ್ಷಕರು ಪಾಳಾ ಕಲಬುರಗಿ