ದಿ.12 ರಂದು ಹುಬ್ಬಳ್ಳಿಯಲ್ಲಿ ಬೆಳಗಾವಿ ವಿಭಾಗ ಮಟ್ಟದ ನಿವೃತ್ತ ನೌಕರರ ಬೃಹತ್ ಸಭೆ
ಏಳನೇ ವೇತನ ಆಯೋಗದಲ್ಲಿ ನಿವೃತ್ತ ನೌಕರರಿಗೆ ಅನ್ಯಾಯ
ಸಂಘಟಿತರಾಗುತ್ತಿರುವ ನಿವೃತ್ತ ನೌಕರರು
ದಿನಾಂಕ..12-9-2024 ರಂದು ರವಿವಾರ ಮುಂ.11-00 ಗಂ.ಗೆ ಹುಬ್ಬಳ್ಳಿ ನಗರದಲ್ಲಿರುವ ಶ್ರೀ ಸಿದ್ಧಾರೂಢರ ಮಠದ ಆವರಣದಲ್ಲಿರುವ ಶ್ರೀ ನಿರಂಜನ ಸಭಾ ಭವನದಲ್ಲಿ ಕರ್ನಾಟಕ ನಿವೃತ್ತ ನೌಕರರ ವೇದಿಕೆ ಅಡಿಯಲ್ಲಿ ದಿನಾಂಕ..01-7-2022 ರಿಂದ 31-7-2024 ರ ಅವಧಿಯಲ್ಲಿ ನಿವೃತ್ತರಾದ ನೌಕರರ ವಿಭಾಗ ಮಟ್ಟದ ಬೃಹತ್ ಸಭೆಯನ್ನು ಆಯೋಜಿಸಲಾಗಿದೆ.ಈ ಸಭೆಯಲ್ಲಿ ಆಗಷ್ಟ ತಿಂಗಳಿಂದ ಆರ್ಥಿಕ ಸೌಲಭ್ಯದೊಂದಿಗೆ ಜಾರಿಯಾಗಿರುವ ಏಳನೇ ವೇತನ ಆಯೋಗದಲ್ಲಿ ನಿವೃತ್ತ ನೌಕರರಿಗೆ ಆರ್ಥಿಕ ಸೌಲಭ್ಯದಲ್ಲಿ ಅನ್ಯಾಯವಾಗುತ್ತಿರುವ ಕುರಿತು ಹಾಗೂ ಮುಂದಿನ ನಡೆ ಕುರಿತು ಆರ್ಥಿಕ ಸೌಲಭ್ಯ ಪಡೆದುಕೊಳ್ಳುವ ನಿಟ್ಟಿನಲ್ಲಿ ಹಾಗೂ ಸರ್ಕಾರಕ್ಕೆ ಪ್ರಸ್ತಾವನೆ ಸಿದ್ಧಪಡಿಸುವ ದಿಸೆಯಲ್ಲಿ ಸುದೀರ್ಘವಾಗಿ ಚರ್ಸಿಸಲಾಗುವುದು.ಸದರ ಸಭೆಗೆ ದಿ.1-7-2024 ರಿಂದ 31-7-2024 ರ ಅವಧಿಯಲ್ಲಿ ನಿವೃತ್ತರಾದ ಎಲ್ಲ ಇಲಾಖೆಯ ಬೆಳಗಾವಿ ಉತ್ತರ ಕನ್ನಡ ವಿಜಯಪುರ ಬಾಗಲಕೋಟೆ ಹಾವೇರಿ ಗದಗ ಧಾರವಾಡ ಹಾಗೂ ಚಿಕ್ಕೋಡಿ ಶಿರಸಿ ಶೈಕ್ಷಣಿಕ ಜಿಲ್ಲೆಗಳ ನೌಕರರು ಆಗಮಿಸಿ ಸಲಹೆ ಸೂಚನೆ ನೀಡಬೇಕೆಂದು ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಸಂಸ್ಥಾಪಕ ರಾಜ್ಯ ಸಂಚಾಲಕರಾದ ಅಶೋಕ.ಎಮ್.ಸಜ್ಜನ .ಗುರು ತಿಗಡಿ.ಎಸ್.ಜಿ.ಬಿಸೆರೊಟ್ಟಿ.ಶಂಕರಯ್ಯ ಸುಬ್ಬಾಪುರ ಮಠ ವಿಜಯ ಅಣಜಿ ಇವರುಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ವಿನ ಮಾಹಿತಿಗಾಗಿ ಅಶೋಕ.ಎಮ್.ಸಜ್ಜನ.ಹುಬ್ಬಳ್ಳಿ. 9036124574 ಇವರನ್ನು ಸಂಪರ್ಕಿಸಲು ಕೋರಿದ್ದಾರೆ.