ಮಕ್ಕಳಿಗೆ ಬೋಧನೆ ಮಾಡುವುದು ಸಂತೋಷದ ಕ್ಷಣ
ಮಲ್ಲಿಕಾರ್ಜುನ ಹೆಗ್ಗನ್ನವರ
ಸವದತ್ತಿ : “ ಮನುಷ್ಯನ ಪ್ರಗತಿ ವಿಕಾಸಕ್ಕೆ ಶಿಕ್ಷಣ ಮೂಲಭೂತ ಅಗತ್ಯತೆಗಳಲ್ಲೊಂದು.ಶಿಕ್ಷಕ ವೃತ್ತಿ ಬಹಳ ಅಮೂಲ್ಯವಾದದ್ದು ನನಗೆ ಬೋಧಿಸುವುದೆಂದರೆ ಬಹಳ ಸಂತೋಷ. ಮಕ್ಕಳ ಮಟ್ಟಕ್ಕಿಳಿದು ಬೋಧಿಸುವ ಜೊತೆಗೆ ಪರಿಣಾಮಕಾರಿ ಬೋಧನೆ ಮಕ್ಕಳ ಮೇಲೆ ಪರಿಣಾಮಕಾರಿಯಾಗುತ್ತದೆ.ನಾನು ಶಿಕ್ಷಕನಾಗಿ,ಸಂಪನ್ಮೂಲ ವ್ಯಕ್ತಿಯಾಗಿ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದರಿಂದಲೇ ತಹಶೀಲ್ದಾರ್ ಹುದ್ದೆಗೆ ಬರಲು ಅನುಕೂಲವಾಯಿತು.ಇಂದಿಗೂ ಮಕ್ಕಳಿಗೆ ಬೋಧನೆ ಮಾಡುವುದೆಂದರೆ ನನಗೆ ಇಷ್ಟ. ಶಿಕ್ಷಕರು ಮಕ್ಕಳಿಗೆ ಉತ್ತಮ ಬೋಧಕರಾಗಿ ಕಾರ್ಯ ಮಾಡಿದರೆ ಮಕ್ಕಳಲ್ಲಿ ಉತ್ತಮ ಶಿಕ್ಷಕನಾಗಿ ಗುರುತಿಸಿಕೊಳ್ಳಬಹುದು”ಎಂದು ಸವದತ್ತಿಯ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಕರೆ ನೀಡಿದರು.
ಅವರು ಪಟ್ಟಣದ ನಿಕ್ಕಂ ಕಲ್ಯಾಣ ಮಂಟಪದಲ್ಲಿ ಜರುಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ತಮ್ಮ ತಹಶೀಲ್ದಾರ ಹುದ್ದೆಗೆ ಬರುವ ಪೂರ್ವದಲ್ಲಿ ಶಿಕ್ಷಕರಾಗಿದ್ದ ದಿನಗಳನ್ನು ನೆನೆಯುತ್ತ ಶಿಕ್ಷಕರ ಉತ್ತಮ ಬೋಧಕರಾಗಲು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ವಿಶ್ವಾಸ ವೈದ್ಯ.ಅತಿಥಿಗಳಾಗಿ ಪುರಸಭೆ ಅಧ್ಯಕ್ಷೆ ಚಿನ್ನವ್ವ ಹುಚ್ಚಣ್ಣವರ.ಉಪಾಧ್ಯಕ್ಷರಾದ ದಾವಲಬಿ.ಸನದಿ.ಎ.ಪಿ.ಎಂ.ಸಿ ಅಧ್ಯಕ್ಷರಾದ ಚಂದ್ರಶೇಖರ ಪೂಜೇರ(ಜಂಬ್ರಿ).ಉಪಾಧ್ಯಕ್ಷರಾದ ಮಾರುತಿ ಬಸಳೀಗುಂದಿ.ಯರಗಟ್ಟಿ ಎ.ಪಿ.ಎಂ.ಸಿ ಅಧ್ಯಕ್ಷರಾದ ನೀಲಕಂಠ ಶಿವಬಸನ್ನವರ.ಉಪಾಧ್ಯಕ್ಷರಾದ ಬಸವರಾಜ ಅರಿಬೆಂಚಿ.ದಿವ್ಯ ಸಾನಿಧ್ಯವನ್ನು ಮ.ಘ.ಚ.ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು.ಪರಸಗಡ ತಾಲೂಕು ಸಹಕಾರಿ ಪತ್ತಿನ ಸಂಘದ ಅಧ್ಯಕ್ಷರಾದ ಮನೋಹರ ಚೀಲದ.ಶಿಕ್ಷಕರ ಸಂಘದ ಅಧ್ಯಕ್ಷರಾದ ಕಿರಣ ಕುರಿ.ಶಿಕ್ಷಕರ ಸಂಘದ ಜಿಲ್ಲಾ ಸಂಘಟನೆಯ ಪದಾಧಿಕಾರಿಯಾದ ಮಲ್ಲಿಕಾರ್ಜುನ ಸಿದ್ದನಗೌಡರ.ಯರಗಟ್ಟಿ ತಹಶೀಲ್ದಾರರಾದ ಎಂ.ಎನ್.ಮಠದ,ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಆನಂದ ಬಡಕುಂದ್ರಿ.ಪುರಸಭೆ ಆಡಳಿತಾಧಿಕಾರಿಗಳಾದ ಸಂಗಮೇಶ.ಪುರಸಭೆ ಸದಸ್ಯರಾದ ಈರಣ್ಣ ಪ್ರಭುನವರ.ಯಲ್ಲಪ್ಪ ರುದ್ರಾಕ್ಷಿ.ಅರ್ಜುನ ಅಮೋಗಿ.ಮುಖ್ಯಾಪಾಧ್ಯಾಯರ ಸಂಘದ ಅಧ್ಯಕ್ಷರಾದ ಎಂ.ಆರ್.ಪಾಟೀಲ.ದೈಹಿಕ ಶಿಕ್ಷಣಾಧಿಕಾರಿಗಳ ಸಂಘದ ಮೋಹನ ಕಾಮನ್ನವರ.ಪ್ರೌಢಶಾಲಾ ಶಿಕ್ಷಕರ ಸಂಘದ ಕಾಜಗಾರ.ಕೃಷಿ ಇಲಾಖೆಯ ಸಹನಿದೇರ್ಶಕರಾದ ಪಾಟೀಲ.ಸಮಾಜ ಕಲ್ಯಾಣ ಇಲಾಖೆಯ ಕುಲಕರ್ಣಿ,ಹಿಂದುಳಿದ ವರ್ಗಗಳ ಇಲಾಖೆಯ ರತ್ನಾ ಕದಂ.ಗ್ಯಾರಂಟಿ ಯೋಜನೆಯ ಶಿವು ರಾಠೋಡ.ನೌಕರರ ಸಂಘದ ಅಧ್ಯಕ್ಷರಾದ ಆನಂದ ಮೂಗಬಸವ.ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷರಾದ ಸಿಂಗಾರಗೊಪ್ಪ.ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿ.ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ .ಮೈತ್ರಾದೇವಿ ವಸ್ತ್ರದ.ಗಿರೀಶ ಮುನವಳ್ಳಿ. ನಿವೃತ್ತ ಗುರು ಮಾತೆ ಬಾಗೀರಥಿಬಾಯಿ. ಹಿರೇಮಠ ಉಗರಗೋಳ ಎನ್.ಜಿ.ಓದ ಕಲ್ಲಪ್ಪನ್ನ ಬೋರನ್ನವರ,.ಸೇರಿದಂತೆ ವಿವಿಧ ಸಂಘಟನೆಗಳ ಮುಖ್ಯಸ್ಥರು ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾಧಾಕೃಷ್ಣನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಶ್ರೇಯಾ ಕಟ್ಟಿ ವಿದ್ಯಾರ್ಥಿನಿಯ ಭರತನಾಟ್ಯದ ಮೂಲಕ ಕಲೋತ್ಸವ ಉದ್ಘಾಟನೆ ಜರುಗಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಶ್ರಾಂತ ಸಹ ನಿರ್ದೇಶಕರಾದ ಎಂ.ಎಂ.ಸಿಂಧೂರ “ಶಿಕ್ಷಕ.ಮಕ್ಕಳು.ಕಲಿಕೆ ಕುರಿತು ಮಾತನಾಡುತ್ತ ವೃತ್ತಿ ಬದ್ಧತೆಯ ಮಹತ್ವವನ್ನು ತಿಳಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡುತ್ತ ವಿಜ್ಞಾನ ಯುಗದಲ್ಲಿ ತಂತ್ರಜ್ಞಾನ ಆಧಾರಿತ ಕಲಿಕೆಯಲ್ಲಿ ಎಲ್ಲ ಶಿಕ್ಷಕರು ತಮ್ಮನ್ನು ತೊಡಗಿಸಿಕೊಳ್ಳುವ ಕುರಿತು ತಿಳಿಸಿದರು.ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಸವದತ್ತಿ ಮೂಲಿಮಠದ ಮ.ಘ.ಚ.ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು” ಅನ್ನಕೊಟ್ಟ ರೈತನಿಗೆ,ದೇಶ ಕಾಯುವ ಸೈನಿಕರಿಗೆ ಮಕ್ಕಳಿಗೆ ವಿದ್ಯೆ ನೀಡುವ ಗುರುಗಳಿಗೆ ಗೌರವ ನೀಡುವ ನಾವುಗಳು ಗುರುಗಳಲ್ಲಿ ಅಧ್ಯಾತ್ಮ ಗುರು ಲೌಕಿಕ ಗುರುವಿನ ಮಹತ್ವ ತಿಳಿಸುತ್ತ ನೀತಿಯಿಲ್ಲದ ಶಿಕ್ಷಣ.ಭೀತಿಯಿಲ್ಲದ ಶಾಸನ.ಸೀಮಾತೀತ ಸ್ವಾತಂತ್ರ ಮಿತಿಯಿಲ್ಲದ ಜೀವನದಿಂದಾಗಿ ಬದುಕು ದುಸ್ತರವಾಗಿದೆ ಎಂಬುದನ್ನು ತಿಳಿಸಿ ಜೀವನದಲ್ಲಿ ಎಲ್ಲವೂ ಇತಿಮಿತಿಯೊಳಗಿರಬೇಕು ಎಂಬುದನ್ನು ಮಾರ್ಮಿಕವಾಗಿ ನುಡಿದರು. ಶಾಸಕ ವಿಶ್ವಾಸ ವೈದ್ಯ ಮಾತನಾಡಿ ಈಗಾಗಲೇ ವಿವೇಕ ಯೋಜನೆಯಡಿಯಲ್ಲಿ ಬೋಧನಾ ಕೊಠಡಿಗಳನ್ನು ಮಂಜೂರಿ ಮಾಡಿದ್ದು ಶಾಲಾ ರಿಪೇರಿಗಾಗಿ ಅನುದಾನ ಮಂಜೂರಾತಿ ಪ್ರಗತಿಯಲ್ಲಿದ್ದು ತಾವು ಯಾವತ್ತೂ ಶಿಕ್ಷಕರ ಪರವಾಗಿರುವುದಾಗಿ ತಿಳಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಯರಗಟ್ಟಿಯ ಸುಂದರ.ಸತ್ತೀಗೇರಿ.ಮುಕ್ತಾ ಪಶುಪತಿಮಠ ಸಂಗಡಿಗರಿಂದ ಪ್ರಾರ್ಥನಾ ಗೀತೆ ನಾಡಗೀತೆ ಜರುಗಿದವು.ತಾಲೂಕ ಮಟ್ಟದ ಉತ್ತಮ ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ತಾಲೂಕಿನ ಎಲ್ಲ ಸಿ.ಆರ್.ಪಿ ಹಾಗೂ ಬಿ.ಆರ್.ಪಿ. ಸಮನ್ವಯ ಶಿಕ್ಷಣ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ಎಂ.ಎಸ್.ಕೋಳಿ ಕಾರ್ಯಕ್ರಮ ನಿರೂಪಿಸಿದರು. ಎಂ.ಎಂ.ಸಿಂಧೂರ ಅವರ ಕುರಿತು ಸಮೂಹ ಸಂಪನ್ಮೂಲ ವ್ಯಕ್ತಿ ಕುಶಾಲ್ ಮುದ್ದಾಪುರ ಕವನ ವಾಚಿಸಿದರು.ಡಾ,ಬಿ.ಐ.ಚಿನಗುಡಿ ಭಿನ್ನವತ್ತಳೆ ಓದಿದರು. ಮೈತ್ರಾದೇವಿ ವಸ್ತ್ರದ ವಂದಿಸಿದರು.