ಸರಕಾರಿ ಶಾಸಕರ ಮಾದರಿ ಶಾಲೆ ಗುರ್ಲಹೊಸೂರನಲ್ಲಿ ಪ್ರತಿಭಾ ಕಾರಂಜಿ…
ಸವದತ್ತಿ: ತಾಲೂಕಿನ ಗುರ್ಲಹೊಸೂರ ಮತ್ತು ಕರೀಕಟ್ಟಿ ಸಮೂಹ ಸಂಪನ್ಮೂಲ ಕೇಂದ್ರಗಳ ಸಮೂಹ ಸಂಪನ್ಮೂಲ ಕೇಂದ್ರಗಳ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳನ್ನು ಸರಕಾರಿ ಶಾಸಕರ ಮಾದರಿ ಶಾಲೆ ಗುರ್ಲಹೊಸೂರ ಇಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷರಾಗಿ ಶಾಲೆಯ ಪದವೀಧರ ಪ್ರಧಾನ ಗುರುಗಳಾದ ಮಂಜುನಾಥ ಕಮ್ಮಾರ ,ಉದ್ಘಾಟಕರಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಿನ ಅಧ್ಯಕ್ಷರಾದ ಕಿರಣ ಕುರಿ, ಮುಖ್ಯ ಅತಿಥಿಗಳಾಗಿ ಶಿಕ್ಷಣ ಸಂಯೋಜಕರಾದ ಸುಧೀರ ವಾಘೇರಿ ಹಾಗೂ ಅತಿಥಿಗಳಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಿನ ಸಹಕಾರ್ಯದರ್ಶಿಯಾದ ಶ್ರೀಮತಿ ಪಿ ಎ ಹಲಕಿ,ನಿರ್ದೇಶಕರಾದ ಪ್ರಶಾಂತ ಹಂಪಣ್ಣವರ ಹಾಗೂ ಅಬ್ಬಾರ ಸರ್ ಮತ್ತು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಾಜು ಭಜಂತ್ರಿ ,ವಿವಿಧ ಶಾಲೆಗಳ ಪ್ರಧಾನ ಗುರುಗಳಾದ ಲಮಾಣಿ,ಕಂಪಲಿ ಹಾಗೂ ಗುರ್ಲಹೊಸೂರ ಮತ್ತು ಕರೀಕಟ್ಟಿ ಸಮೂಹ ಸಂಪನ್ಮೂಲ ಕೇಂದ್ರಗಳ ವ್ಯಾಪ್ತಿಯ ಸರಕಾರಿ ,ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಶಾಲೆಗಳ ಪ್ರಧಾನ ಗುರುಗಳು ,ಶಿಕ್ಷಕ ,ಶಿಕ್ಷಕಿಯರು ಮತ್ತು ಗುರ್ಲಹೊಸೂರ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ರಾಮಚಂದ್ರಪ್ಪ ಮತ್ತು ಕರೀಕಟ್ಟಿ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಪಿ. ಸಿ.ಪರೀಟ ಉಪಸ್ಥಿತರಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಕಿರಣ ಕುರಿ ಮಾತನಾಡಿ “ನಿರ್ಣಾಯಕರು ನೈಜ ಪ್ರತಿಭೆಗಳನ್ನು ಮುಂದಿನ ಹಂತಕ್ಕೆ ಕಳುಹಿಸುವ ಕಾರ್ಯ ಮಾಡಬೇಕೆಂದು” ತಿಳಿಸಿದರು . ಮುಖ್ಯ ಅತಿಥಿಗಳಾದ ಶಿಕ್ಷಣ ಸಂಯೋಜಕ ಸುಧೀರ ವಾಘೇರಿ ಮಾತನಾಡಿ “ಪ್ರತಿಭಾ ಕಾರಂಜಿಯಲ್ಲಿ ಅನುಸರಿಸಬೇಕಾದ ನಿಯಮಗಳ ಬಗ್ಗೆ” ತಿಳಿಸಿದರು .ಸಭೆಯ ಅಧ್ಯಕ್ಷರಾದ ಎಮ್ ಬಿ ಕಮ್ಮಾರ ಮಾತನಾಡಿ “ಇಲಾಖೆಯ ಮಹತ್ವದ ಕಾರ್ಯಕ್ರಮಗಳಲ್ಲಿ ಒಂದಾದ ಪ್ರತಿಭಾ ಕಾರಂಜಿಯು ಮಕ್ಕಳ ಪ್ರತಿಭೆಯನ್ನು ಹೊರತರುವಲ್ಲಿ ಮಹತ್ವದ್ದಾಗಿದ್ದು ಇದರ ಅನುಷ್ಠಾನ ನಿಯಮಾನುಸಾರ ಆಗಬೇಕೆಂದು” ತಿಳಿಸಿದರು.
ಗುರ್ಲಹೊಸೂರ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ರಾಮಚಂದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು ಶಿಕ್ಷಕರಾದ ಪಿ ಎಸ್ ಸಿಂಧೆ ಕಾರ್ಯಕ್ರಮ ನಿರೂಪಿಸಿದರು.ಕರೀಕಟ್ಟಿ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಪಿ. ಸಿ. ಪರೀಟ ವಂದಿಸಿದರು.