ವಿದ್ಯಾರ್ಥಿಗಳ ವ್ಯಕ್ತಿತ್ವದ ಅಭಿವೃದ್ಧಿಗೆ ಪ್ರತಿಭಾ ಕಾರಂಜಿ ಸಹಾಯವಾಗುತ್ತದೆ
ಮನೋಹರ ಚೀಲದ
ಯರಗಟ್ಟಿ: “ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನ ಹೊರತರುವಲ್ಲಿ ಪ್ರತಿಭಾ ಕಾರಂಜಿ ಸಹಾಯಕ
ವಿದ್ಯಾರ್ಥಿಗಳ ಕಲಿಕೆಗೆ ಹಾಗೂ ಹೊಸದಾದ ಜೀವನ ಕೌಶಲ್ಯವನ್ನು ಹೊಂದಲು ಇದು ವೇದಿಕೆಯಾಗಿದೆ.
ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸಿ ಹೊರತರಲು ಶಿಕ್ಷಕರಿಗೆ ಅವಕಾಶವನ್ನು ನೀಡುತ್ತದೆ.” ಎಂದು ಪರಸಗಡ ಪ್ರಾಥಮಿಕ ಶಾಲಾ ಶಿಕ್ಷಕ/ಶಿಕ್ಷಕಿಯರ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷರಾದ ಮನೋಹರ ಚೀಲದ ಅಭಿಪ್ರಾಯ ಪಟ್ಟರು.
ಅವರು ಯರಗಟ್ಟಿ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಜರುಗಿದ 2024 -25 ನೆಯ ಶೈಕ್ಷಣಿಕ ವರ್ಷದ ಯರಗಟ್ಟಿ ಸಮೂಹ ಸಂಪನ್ಮೂಲ ಕೇಂದ್ರ ವ್ಯಾಪ್ತಿಯ ಪ್ರತಿಭಾ ಕಾರಂಜಿ ಕುರಿತು ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಶಿಕ್ಷಣ ಸಂಯೋಜಕರಾದ ಅರ್ಜುನ ಕಾಮನ್ನವರ ಮಾತನಾಡಿ “ನೆಲಮೂಲ ಸಂಸ್ಕೃತಿಯ ನೆಲೆಗಟ್ಟನ್ನು ಪ್ರತಿಭಾ ಕಾರಂಜಿ ಕಾರ್ಯ ಕ್ರಮಗಳಲ್ಲಿ ಕಾಣಬಹುದು” ಎಂದರು.
ಸಮೂಹ ಸಂಪನ್ಮೂಲ ವ್ಯಕ್ತಿ ವಸಂತ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿ “ಶಾಲೆಯಿಂದ ರಾಜ್ಯ ಮಟ್ಟದವರೆಗೆ ವಿಧ್ಯಾರ್ಥಿಗಳು ವೈಯಕ್ತಿಕವಾಗಿ ಹಾಗೂ ಗುಂಪು ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ.ಮಕ್ಕಳ ಪ್ರತಿಭೆ ತೋರಿಸುವ ವೇದಿಕೆ ಪ್ರತಿಭಾ ಕಾರಂಜಿ ಎಂದು ತಿಳಿಸಿದರು. ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ವೈ ಬಿ. ಕಡಕೋಳ ಮಾತನಾಡಿ “ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.ನಿರ್ಣಾಯಕರ ನಿಷ್ಪಕ್ಷಪಾತ ನಿರ್ಣಯ ಮಕ್ಕಳ ಪ್ರತಿಭೆಗೆ ಅವಕಾಶ ನೀಡುವ ವೇದಿಕೆ ಪ್ರತಿಭಾ ಕಾರಂಜಿ” ಎಂದು ಹೇಳಿದರು.
ಮುಖ್ಯೋಪಾಧ್ಯಾಯ ಎ. ಎ. ಮಕ್ತುಂನವರ. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಜಿತಕುಮಾರ ದೇಸಾಯಿ.ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಮನೋಹರ ಚೀಲದ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಸಹ ಕಾರ್ಯ ದರ್ಶಿಗಳಾದ ಶಿವಾನಂದ ಮಿಕಲಿ.ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಾಮ ನಿರ್ದೇಶನ ಹೊಂದಿದ ಗುರುಮಾತೆಯರಾದ ಎಂ. ಎಚ್ ಮಾಕನ್ನವರ. ಕಸ್ತೂರಿ ಚಂದರಗಿ.ಎಸ್ ಎಸ್ ಹಂಪಿಹೊಳಿ. ಎಸ್ ಎಸ್ ಹೊಸಮನಿ. ಆರ್ ಬಿ ಅಂಗಡಿ. ಎಸ್ ವ್ಹಿ ಗಣಾಚಾರಿ.ಎಸ್.ಎ.ಪೂಜಾರಿ.ಎಂ.ಎಸ್ ಅತ್ತಾರ.ಆರ್ ಕೆ ಹುಣಸೀಕಟ್ಟಿ. ಬಿ ಬಿ ನಿರ್ವಾಣಿ.ಸೌಮ್ಯ ದಾಸರಡ್ಡಿ.ನಾಗಮ್ಮ ಕುರಿ. ಜಯಶ್ರೀ ವ್ಹಿ ಬಡಕಪ್ಪನವರ. ಮೊದಲಾದವರು ಉಪಸ್ಥಿತರಿದ್ದರು. ಎಸ್. ಡಿ. ಎಂ. ಸಿಯ ಸಕ್ಕೂಬಾಯಿ ಕುಂಬಾರ. ನಾಗವೇಣಿ ಬಡಿಗೇರ. ರೇಷ್ಮಾ ಬಾಗಿಲದಾರ. ದೀಪಾ ಕಂಬಾರ. ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರುಗಳು ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಎಸ್ ಬಿ ಮಿಕಲಿ ಸ್ವಾಗತಿಸಿದರು. ಬಿ ಬಿ ಅಣ್ಣೀಗೇರಿ ನಿರೂಪಿಸಿದರು. ಶ್ರೀ ಮತಿ ಬಿ ಐ ಹಲಗಲಿಯವರ ನೇತೃತ್ವದಲ್ಲಿ ಸ್ವಾಗತ ಪರ ಜನಪದ ಗೀತೆಯ ನೃತ್ಯ ಗಾಯನ ಕಾರ್ಯಕ್ರಮ ಪ್ರಾರಂಭದಲ್ಲಿ ಜರುಗಿತು.ಬಿ ಎಂ ಹಾದಿಮನಿ ವಂದಿಸಿದರು