ಸಿಎಮ್ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು…
ಶಿಕ್ಷಕರಿಗೆ ನೀಡಿದ ಭರವಸೆ ಕೇವಲ ಭರಸವಸೆಯಾಗಿ ಉಳಿದಿದೆ..ಕೂಡಲೇ ದಿನಾಂಕ ನಿಗದಿ ಮಾಡಿ…
ವಿಷಯ: ಶಾಲಾ ಶಿಕ್ಷಕರು ಫ್ರೀಡಂ ಪಾರ್ಕ್ನಲ್ಲಿ ದಿನಾಂಕ:12-08-2024ರಂದು ನಡೆಸಿದ ಹೋರಾಟದ ದಿನದಂದು ತಾವು ನೀಡಿದ ಭರವಸೆಯಂತೆ ತಮ್ಮ ನೇತೃತ್ವದಲ್ಲಿ ಸಭೆ ನಡೆಸಲು ದಿನಾಂಕವನ್ನು ನಿಗದಿಪಡಿಸುವ ಕುರಿತು.
ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುಸುವುದೇನೆಂದರೆ, ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಾಗಿರುವ ಅನ್ಯಾಯದಿಂದ ದಿನಾಂಕ: 12-08-2024ರಂದು ಫ್ರೀಡಂ ಪಾರ್ಕ್ನಲ್ಲಿ 50 ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರು ಒಂದು ದಿನದ ದೊಡ್ಡ ಮಟ್ಟದ ಹೋರಾಟವನ್ನು ದಾಖಲಿಸಿದ್ದು, ಸದರಿ ಮಾಹಿತಿಯನ್ನು ಪಡೆದು ತಾವು ಸಂಘಟನೆಯ ಪದಾಧಿಕಾರಿಗಳನ್ನು ಕಛೇರಿಗೆ ಆಹ್ವಾನಿಸಿ, ಮಾನ್ಯ ಶಿಕ್ಷಣ ಸಚಿವರಾದ ಸನ್ಮಾನ್ಯ ಶ್ರೀ ಮಧು ಬಂಗಾರಪ್ಪ ರವರನ್ನು ಫ್ರೀಡಂ ಪಾರ್ಕ್ಗೆ ಕಳುಹಿಸಿ ಮನವಿ ಸ್ವೀಕರಿಸಲು ತಿಳಿಸಿ, ಮೂರಾಲ್ಕು ದಿನಗಳಲ್ಲಿ ಸಭೆಯನ್ನು ನಿಗದಿಪಡಿಸಿ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದ್ದೀರಿ.
ಆದರೆ ಇಲ್ಲಿಯವರೆಗೂ ಸಭೆಯ ದಿನಾಂಕ ನಿಗದಿಯಾಗಿರುವುದಿಲ್ಲ, ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆ ಇರುವುದರಿಂದ ಶಿಕ್ಷಕರ ದಿನಾಚರಣೆಯ ಒಳಗಾಗಿ ತಮ್ಮ ನೇತೃತ್ವದಲ್ಲಿ ಸಭೆಯನ್ನು ನಡೆಸಿ ಸೂಕ್ತ ಪರಿಹಾರಕ್ಕಾಗಿ ಶಿಕ್ಷಕರು ಒತ್ತಾಯಿಸುತ್ತಿದ್ದು, ಮಾನ್ಯರವರು ತಕ್ಷಣ ಸಭೆ ನಡೆಸಿ ಶಿಕ್ಷಕರ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಅವರು ತಿಳಿಸಿದ್ದಾರೆ…
ಇಂದು ಚಿಕ್ಕೋಡಿ ಜಿಲ್ಲೆಯ ವಿವಿಧ ತಾಲೂಕ ಘಟಕಗಳ ಕಾರ್ಯಕ್ರಮಕ್ಕೆ ಆಗಮಿಸಿದ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ತಕ್ಷಣ ಸೂಕ್ತ ದಿನಾಂಕವನ್ನು ನಿಗದಿಗೊಳಿಸುವಂತೆ ಮಾನ್ಯ ಮುಖ್ಯಮಂತ್ರಿಗಳಲ್ಲಿ ವಿನಂತಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ್ ಜಾರಕಿಹೊಳಿ ಅವರನ್ನು ಕೂಡ ಭೇಟಿ ಮಾಡಲಾಯಿತು.
ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾಧ್ಯಕ್ಷರಾದ ಎಸ್. ಎಮ್. ಲೋಕನ್ನವರ, ಬಾಗಲಕೋಟ್ ಜಿಲ್ಲಾ ಬಸವರಾಜ್ ಬಾಗೇನ್ನವರ, ಚಿಕ್ಕೋಡಿ ಗೌರವಾಧ್ಯಕ್ಷರಾದ ಜಿ.ಎಮ್. ಹಿರೇಮಠ ರವರು, ವಿಠಲ ವಾಲಿಕಾರ, ರವಿ ಪದರಾರವರು ಚಿಕ್ಕೋಡಿ ಜಿಲ್ಲಾ ಸಂಘಟನೆ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.