ಜೈನ್ ಸಮಾಜದ ಮುಖಂಡ
ಬಾಬೂರಾವ್ ಪಾಟೀಲ ನಿಧನ
ಧಾರವಾಡ : ದಿಗಂಬರ ಜೈನ್ ಸಮಾಜದ ಮುಖಂಡ, ಧಾರವಾಡ ವರ್ತಕರ ಸಂಘದ ಮಾಜಿ ನಿರ್ದೇಶಕ ಬಾಬೂರಾವ್ ಪಾರೀಸಪ್ಪ ಪಾಟೀಲ(83) ರವಿವಾರ ನಿಧನರಾದರು. ನಗರದ ಮದಿಹಾಳ ನಿವಾಸಿಯಾಗಿದ್ದ ಇವರು, ಮೂಲತಃ ತಾಲೂಕಿನ ಅಮ್ಮಿನಬಾವಿ ಗ್ರಾಮದವರು. ಪತ್ನಿ, ಓರ್ವ ಪುತ್ರ, 4 ಜನ ಪುತ್ರಿಯರನ್ನು ಅಗಲಿದ್ದಾರೆ. ನವಗ್ರಹ ತೀರ್ಥ ಕ್ಷೇತ್ರ ಹಾಗೂ ಅಮ್ಮಿನಬಾವಿ ಜೈನಮಠದ ಶ್ರೀಧರ್ಮಸೇನ್ ಭಟ್ಟಾರಕ ಸ್ವಾಮೀಜಿ ಬಾಬೂರಾವ್ ಅಗಲಿಕೆಗೆ ತೀವ್ರ ಶೋಕ ವ್ಯಕ್ತಪಡಿಸಿ, ದಿವಂಗತರ ಸಮಾಜ ಸೇವೆಯನ್ನು ಸ್ಮರಿಸಿದ್ದಾರೆ.