ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನಿಡೀದ ಸಿ.ಎಸ್.ಷಡಕ್ಷರಿ..
ವೇತನ ಆಯೋಗದ ಜಾರಿ ಈ ಕ್ಷಣದ ಅಪಡೆಟ್ ಸುದ್ದಿ..
ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು ಮತ್ತೊಂದು ಭರ್ಜರಿ ಸಿಹಿಸುದ್ದಿ ನೀಡಿದ್ದು, ಶೀಘ್ರವೇ DA & HRA ಹಾಗೂ ಇತರೆ ಭತ್ಯೆಗಳ ಆದೇಶ ಪ್ರಕಟಿಸಲಿದೆ.
ಈ ಕುರಿತು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಮಾಹಿತಿ ಹಂಚಿಕೊಂಡಿದ್ದು, ಈಗಾಗಲೇ ರಾಜ್ಯ 7ನೇ ವೇತನ ಆಯೋಗದ fitment ಆದೇಶವನ್ನು ಸರ್ಕಾರ ಹೊರಡಿಸಿದ್ದು, DA & HRA ಹಾಗೂ ಇತರೆ ಭತ್ಯೆಗಳ ಆದೇಶವನ್ನು ಇನ್ನೆರಡು ದಿನಗಳಲ್ಲಿ ಆಗಲಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಫಿಟ್ ಮೆಂಟ್ ಮಾಹಿತಿಗಳು HRMS ನಲ್ಲಿ upload ಮಾಡುವ ಕಾರ್ಯ ಆಗಿದ್ದು, ಇನ್ನೆರಡು ದಿನಗಳಲ್ಲಿ DA & HRA ಹಾಗೂ ಇತರೆ ಭತ್ಯೆಗಳ ಆದೇಶ ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಮತ್ತೊಂದು ಭರ್ಜರಿ ಸಿಹಿಸುದ್ದಿ ಸಿಕ್ಕಂತಾಗಿದೆ.