ಮಕ್ಕಳ ಹಾಲಿನ ಪೌಡರ ಕಳ್ಳತನ!!ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಮುಖ್ಯ ಶಿಕ್ಷಕ…
ಮೈಸೂರು: ಶಾಲಾ ಮುಖ್ಯ ಶಿಕ್ಷಕನೇ ಮಕ್ಕಳಿಗೆ ಕೊಡುವ ಹಾಲಿನ ಪೌಡರ್ ಕಳ್ಳತನ ಮಾಡಿರುವ ಘಟನೆ ಎಚ್.ಡಿ ಕೋಟೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಗಣೇಶ್ ಈ ನೀಚ ಕೃತ್ಯವೆಸಗಿದ್ದಾನೆ. ಸಾರ್ವಜನಿಕರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ.
ಸರ್ಕಾರ ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು ಈ ಹಾಲಿನ ಪೌಡರ್ ನೀಡಲಾಗುತ್ತದೆ. ಆದರೆ ಬಿಇಒ ಕಚೇರಿ ಹತ್ತಿರದಲ್ಲೇ ಇದ್ದರೂ ಶಾಲಾ ಮುಖ್ಯ ಶಿಕ್ಷಕ ಹಾಲಿನ ಪೌಡರ್ ಕದ್ದಿದ್ದಾನೆ. 1 ಕೆ.ಜಿ ತೂಕದ 10 ಪ್ಯಾಕೆಟ್ ಗಳ ಕದ್ದೊಯ್ಯುವಾಗ ಸಾರ್ವಜನಿಕರಿಗೆ ಸಿಕ್ಕಿಬಿದ್ದಿದ್ದಾನೆ.
ಮುಖ್ಯ ಶಿಕ್ಷಕನನ್ನು ಹಿಡಿದು ಬಿಇಒಗೆ ಸಾರ್ವಜನಿಕರು ಮಾಹಿತಿ ನೀಡಿದರೂ ಸಮಯಕ್ಕೆ ಅಣುಗುಣವಾಗಿ ಅಧಿಕಾರಿಗಳು ಬಂದಿಲ್ಲ. ಪಟ್ಟಣದಲ್ಲೇ ಈ ಪರಿಸ್ಥಿತಿ ಆದರೆ, ಗ್ರಾಮೀಣ ಭಾಗದ ಶಾಲೆಗಳ ಗತಿ ಏನು ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಬಳಿಕ ತಡವಾಗಿ ಬಿಆರ್ಸಿ ಕೃಷ್ಣಯ್ಯ ಸ್ಥಳಕ್ಕಾಗಮಿಸಿದ್ದಾರೆ. ಕೃತ್ಯವೆಸಗಿದ ಶಿಕ್ಷಕನ ಮೇಲೆ ಶಿಸ್ತು ಕ್ರಮಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ.