ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ಲಕ್ಷ್ಮೇಶ್ವರ ಕಾಯಕಯೋಗಿ ನುಲಿಯ ಚಂದಯ್ಯ ಜಯಂತಿ ಆಚರಣೆ.
ಕಲ್ಯಾಣ ರಾಜ್ಯದ ಹೊರವಲಯದ ಕೆರೆಯ ಹಿನ್ನೀರ ದಡದಲ್ಲಿ ಬೆಳೆದ ಸೊಗಸಾದ ಹುಲ್ಲು ತಂದು ಹಗ್ಗ ಹೊಸೆದು ಮಾರಿ ಬಂದ ಹಣದಿಂದ ಜಂಗಮ ದಾಸೋಹ ನಡೆಸುತ್ತಿದ್ದ ಒಬ್ಬ ಕಾಯಕಯೋಗಿ ನುಲಿಯ ಚಂದಯ್ಯ ಎಂದು ಶಾಲೆಯ ಪ್ರಧಾನ ಗುರುಗಳಾದ ಬಸವರಾಜ ಕುಂಬಾರ ಹೇಳಿದರು. ಬಿಜಾಪುರ ಜಿಲ್ಲೆಯ ಶಿವಣಗಿ ಈತನ ಹುಟ್ಟೂರು ಕಾಲ 1960 ಶೂನ್ಯ ಸಂಪಾದನೆ ಮತ್ತು ಪುರಾಣಗಳಲ್ಲಿ ಈತನ ಕಾಯಕ ನಿಷ್ಠೆಯ ಕಥೆ ವರ್ಣಿತವಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕಿಯರಾದ ಎಚ್ ಡಿ ನಿಂಗರೆಡ್ಡಿ ಸ್ವಪ್ನ ಕಾಳೆ ಲಕ್ಷ್ಮಿ ಹತ್ತಿ ಕಟ್ಟಿ ಅಕ್ಷತಾ ಕಾಟೇಗಾರ್ ಆರ್ ಕೆ ಉಪನಾಳ ಉಪಸ್ಥಿತರಿದ್ದರು