ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ದೊಡ್ಡೂರ ತಾಂಡಾ ಶಾಲೆಯಲ್ಲಿ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ.
ಲಕ್ಷ್ಮೇಶ್ವರ ಸಮೀಪದ ದೊಡ್ಡೂರ ತಾಂಡಾ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪ್ರಕಾಶ ವಾಲಿ ವಕೀಲರು ಲಕ್ಷ್ಮೇಶ್ವರ ಹಾಗೂ ನಾಗರಾಜ ಭಜನಪ್ಪ ಲಮಾಣಿ ಇವರು ಕಲಿಕಾ ಸಾಮಗ್ರಿ ವಿವರಿಸಿದ್ದಾರೆ.
ತಂತ್ರಜ್ಞಾನದ ಕಾಲದಲ್ಲಿ ಸರಕಾರಿ ಶಾಲಾ ಮಕ್ಕಳಿಗೆ ಕಲಿಕೆಯನ್ನು ಸುಲಭಗೊಳಿಸಲು ಇದೆ ಶಾಲೆಯ ಹಳೆ ವಿದ್ಯಾರ್ಥಿ ನಾಗರಾಜ ಭಜನಪ್ಪ ಲಮಾಣಿ ಇವರು 32 ಇಂಚಿನ ಸ್ಮಾರ್ಟ್ ಟಿವಿ ಯನ್ನು ದೇಣಿಗೆ ನೀಡಿದರು. ಸ್ವಾತಂತ್ರ್ಯ ದಿನಾಚರಣೆ ಅಂತಹ ಕಾರ್ಯಕ್ರಮಗಳನ್ನು ಅರ್ಥಗರ್ಭಿತವಾಗಿ ಆಚರಿಸಲು ಮೈಕ್ ಸೆಟ್ ಅನ್ನು ಪ್ರಕಾಶ ವಾಲಿ ವಕೀಲರು ಲಕ್ಷ್ಮೇಶ್ವರ ಇವರು ದೇಣಿಗೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳಿಗಿಂತ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದು ಪ್ರತಿ ಪೋಷಕರು ಸರಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ದಾಖಲಿಸಬೇಕೆಂದು ಮೈಕ್ ಸೆಟ್ ದೇಣಿಗೆ ನೀಡಿದ ಪ್ರಕಾಶ ವಾಲಿ ತಿಳಿಸಿದರು.
ಟೋಪಣ್ಣ ಲಮಾಣಿ ಮಾತನಾಡಿ ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಮಾಡುತ್ತಿದ್ದು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಾಯ ಸಹಕಾರ ನೀಡಲು ತಿಳಿಸಿದರು ಮತ್ತು ತಮ್ಮೂರ ಶಾಲೆಗೆ ದೇಣಿಗೆ ನೀಡಿದ ಮಹನೀಯರನ್ನು ಅಭಿನಂದಿಸಿ ಈ ರೀತಿ ಮಾದರಿಯಾಗಲು ತಿಳಿಸಿದರು.
ಇದೆ ಸಂದರ್ಭದಲ್ಲಿ ಶಿವಾನಂದ ಅಸುಂಡಿ ಸಿ ಆರ್ ಪಿ ದೊಡ್ಡೂರ ಮಾತನಾಡಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಸಮುದಾಯದ ಸಹಭಾಗಿತ್ವ ಅವಶ್ಯಕತೆ ಇದ್ದು ಸರಕಾರದ ಜೊತೆ ಕೈ ಜೋಡಿಸುವ ” ನನ್ನ ಶಾಲೆ ನನ್ನ ಕೊಡುಗೆ ” ಕಾರ್ಯಕ್ರಮದ ಭಾಗವಾಗಿ ದೊಡ್ಡೂರ ತಾಂಡಾ ಶಾಲೆಯ ಹಳೆ ವಿದ್ಯಾರ್ಥಿಗಳ ಕೊಡುಗೆ ಅನನ್ಯವಾದುದು ಎಂದು ಅಭಿಪ್ರಾಯ ಪಟ್ಟರು.
ಶಾಲಾ ಶಿಕ್ಷಕಿ ಪ್ರೇಮಾ ಅಂಗಡಿ ಶಾಲೆಗೆ ದೇಣಿಗೆ ನೀಡಿದ ಮಹನೀಯರನ್ನು ಅಭಿನಂದಿಸಿದರು.
ಈ ಕಾರ್ಯಕ್ರಮದಲ್ಲಿ ಎಸ್ ಡಿ ಎಮ್ ಸಿ ಅದ್ಯಕ್ಷ ಅಶೋಕ ದೊಡಮನಿ,ಮಾನಪ್ಪ ಲಮಾಣಿ, ದೇವಪ್ಪ ಲಮಾಣಿ, ಹನುಮಂತಪ್ಪ ಲಮಾಣಿ, ವಿನೋದ ಲಮಾಣಿ, ಪ್ರಧಾನ ಗುರುಗಳಾದ ಶಿವಾನಂದ ಅಸುಂಡಿ, ಶಿಕ್ಷಕಿ ಪ್ರೇಮಾ ಅಂಗಡಿ, ಭಜನಪ್ಪ ಲಮಾಣಿ, ಪರಮೇಶ ದೊಡಮನಿ, ಶಂಕ್ರಪ್ಪ ಲಮಾಣಿ,ರಾಮಣ್ಣ ಲಮಾಣಿ, ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.