ನಿವೃತ್ತ ನೌಕರರ ಸಭೆ ತಿಳುವಳಿಕೆ ಪತ್ರ
*******************************
ಮಾನ್ಯರೆ,
ದಿ:20/08/2024 ರಂದು ಪೂರ್ವಾಹ್ನ 10.15 ಗಂಟೆಗೆ,ದಿ: 01/07/22 ರಿಂದ
ದಿ:31/07/24 ರಲ್ಲಿ ನಿವೃತ್ತರಾದ,ಜಿಲ್ಲೆಯ ಎಲ್ಲಾ ಇಲಾಖೆಗಳ ಮತ್ತು ಅನುದಾನಿತ ಸಂಸ್ಥೆಗಳ ನೌಕರರ , ಎರಡು ನೌಕರರ ಸಂಘಗಳ ಪದಾಧಿಕಾರಿಗಳ ಹಾಗೂ ಸಮಸ್ತ ನಿವೃತ್ತ ನೌಕರರ ಧಾರವಾಡ ಜಿಲ್ಲಾ ಮಟ್ಟದ ಸಭೆಯನ್ನು ಧಾರವಾಡ ಜಿಲ್ಲಾ ನಿವೃತ್ತ ಸಂಘ ರಿ.ಧಾರವಾಡ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ ಜಿಲ್ಲಾ ಘಟಕ ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ನಿವೃತ್ತ ನೌಕರರ ಭವನ ಧಾರವಾಡ ( ಸರಕಾರಿ ನೌಕರರ ಸಂಘದ ಆವರಣ) ದಲ್ಲಿ ಸಭೆ ಕರೆಯಲಾಗಿದೆ.
ಈ ಸಭೆಯಲ್ಲಿ
ಶ್ರೀವ್ಹಿ.ಬಿ.ಮತ್ತೂರ.ಜಿಲ್ಲಾಧ್ಯಕ್ಷರು.
ಧಾರವಾಡ ಜಿಲ್ಲಾ ನಿವೃತ್ತರ ಸಂಘ ಧಾರವಾಡ ಇವರು ಅಧ್ಯಕ್ಷತೆ ವಹಿಸುವರು
ಶ್ರ್ರೀಎಸ್.ಬಿ.ಪಾಟೀಲ.ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಿ ಜಿಲ್ಲಾ ಘಟಕ ಧಾರವಾಡ ಇವರು ಗೌರವ ಉಪಸ್ಥಿತಿ ವಹಿಸುವರು.
ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ರಾಜ್ಯ ಸಂಚಾಲಕರುಗಳಾದ ಶ್ರೀ ಅಶೋಕ.ಎಮ್.ಸಜ್ಜನ.ಶ್ತೀ ಗುರು ತಿಗಡಿ ಶ್ರೀ*ಶ್ರೀ ಶಂಕ್ರಯ್ಯ ಸುಬ್ಬಾಪೂರಮಠ, ಶ್ರೀ ಎಸ್.ಜಿ.ಬಿಸೆರೊಟ್ಟಿ.ಇವರುಗಳು ಉಪಸ್ಥಿತರಿರುವರು
.
ಕಾರಣ ತಾವುಗಳೆಲ್ಲರೂ ಸಕಾಲದಲ್ಲಿ ಆಗಮಿಸಿ ಚರ್ಚೆ ಯಲ್ಲಿ ಭಾಗವಹಿಸಿ, ಈ ಹಿಂದೆ ದಿ.11-8-2022 ರಂದು ದಾವಣಗೆರೆಯಲ್ಲಿ ನಡೆದ ರಾಜ್ಯ ಮಟ್ಟದ ಸಮಾಲೋಚನಾ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ, ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಉಸ್ತುವಾರಿ 7 ನೇ ವೇತನ ಆಯೋಗದ ವರದಿಯಿಂದಾದ ನಷ್ಟವನ್ನು ಸರಿಪಡಿಸಿಕೊಡುವಂತೆ ಮನವಿಯನ್ನು ಸಲ್ಲಿಸೋಣ.ಈ ಸಭೆಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ನಮ್ಮ ಒಗ್ಗಟ್ಟನ್ನು ಹಾಗೂ ಸಂಖ್ಯಾಬಲವನ್ನು ತೋರಿಸಲು ಎಲ್ಲರ ಸಹಕಾರ ಕೋರುತ್ತೇವೆ.
ವಂದನೆಗಳೊಂದಿಗೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ
ರಾಜ್ಯ ಸಂಚಾಲಕರು
ಶ್ರೀಅಶೋಕ.ಎಮ್.ಸಜ್ಜನ.
ಹುಬ್ಬಳ್ಳಿ9036124574
ಶ್ರೀ ಗುರು ತಿಗಡಿ ಧಾರವಾಡ9886649378
ಶ್ರೀಎಸ್.ಜಿ.ಬಿಸೆರೊಟ್ಟಿ.
ಕುಂದಗೋಳ9449355776
ಶ್ರೀಶಂಕ್ರಯ್ಯ ಸುಬ್ಬಾಪೂರಮಠ ಧಾರವಾಡ9449024510