ಮಾನ್ಯರೇ, ದಿನಾಂಕ 1/7/2022 ರಿಂದ 31/7/2024ರ (ಕಳೆದ 25 ತಿಂಗಳ)ಅವಧಿಯಲ್ಲಿ ನಿವೃತ್ತರಾದ ಬಹುತೇಕ ನಾವುಗಳು 1986,1988 ಬ್ಯಾಚ್ ನ ಸಿ ಮತ್ತು ಡಿ ವೃಂದದಲ್ಲಿ ಅಂದರೆ ಡಿ ಗ್ರೂಪ್ ನೌಕರರು,ದ್ವಿತೀಯ ದರ್ಜೆ ಸಹಾಯಕರು,ಪ್ರಥಮ ದರ್ಜೆ ಸಹಾಯಕರು, ಪ್ರಾಥಮಿಕ, ಮಧ್ಯಮ,ಪ್ರೌಡ ಶಾಲಾ ಶಿಕ್ಷಕರು, ಆರಕ್ಷಕರು, ಆರೋಗ್ಯ ಇಲಾಖಾ ನೌಕರರು, ಕೃಷಿ,ತೋಟಗಾರಿಕೆ ಇಲಾಖೆ ಸಿಬ್ಬಂದಿಗಳು, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ವರ್ಗ ಹೀಗೆ ಅತೀ ಕಡಿಮೆ ವೇತನ ಶ್ರೇಣಿಯಲ್ಲಿ ಕೆಲಸಕ್ಕೆ ಸೇರಿದ ಗ್ರಾಮೀಣ ಪ್ರದೇಶದಲ್ಲಿ ಓದಿದ ಬಡವ, ಅತೀ ಬಡವ, ಮದ್ಯಮ ವರ್ಗದ ಕುಟುಂಬ, ತುಂಬು ಸಂಸಾರಗಳ ಬಳಗದಲ್ಲಿ ಜನ್ಮ ತಾಳಿದ, ದುಡಿಮೆ ಪೂರ್ತ ಒಡಹುಟ್ಟಿದ ಅಕ್ಕ-ತಂಗಿಯರ ಜೀವನ ನಿರ್ವಾವಣೆ, ಮದುವೆ, ಇತ್ಯಾದಿಗಳಲ್ಲಿ ನಮ್ಮ ದುಡಿಮೆ ವಿನಿಯೋಗ ಮಾಡಿಕೊಂಡು ಬಹುತೇಕ ಮಂದಿ ಒಂದು ಮನೆ ಕಟ್ಟಿಕೊಳ್ಳಲು ಆಗದೆ ನಿವೃತ್ತಿ ಹೊಂದಿರುತ್ತವೆ, ನಾವುಗಳು ಏಳನೇ ವೇತನ ಆಯೋಗ ನಮಗೆ ಅನ್ವಯವಾಗುತ್ತದೆ, ಆದರಿಂದಲಾದರು ನಮ್ಮ ಮಕ್ಕಳ ವಿದ್ಯಾಭ್ಯಾಸ,ಮದುವೆ ವೆಚ್ಚ, ಮನೆ ಕಟ್ಟಿ ಕೊಳ್ಳುವಿಕೆ,ಇತ್ಯಾದಿ ಖರ್ಚು ವೆಚ್ಚಗಳನ್ನು ಸ್ವಲ್ಪವಾದರೂ ಸರಿದೂಗಿಸುವ ಅತ್ಯಂತ ಆಶಾಭಾವನೆಯನ್ನು ಹೊಂದಿದವರಾಗಿದ್ದೆವು, ಆದರೆ ಸರ್ಕಾರದ ನಮ್ಮದಲ್ಲದ ಕಾರಣದ ನಿಲುವಿನಿಂದ ನಮ್ಮಗಳಿಗೆ ಬರಸಿಡಿಲು ಬಡಿದಂತಾಗಿ, ನಮ್ಮ ಮುಂದಿನ ಜೀವನ ಪರಿಸ್ಥಿತಿ ಹೇಗೆ ಎಂಬ ಪ್ರಶ್ನೆ ಉದ್ಭವವಾಗಿದೆ. ಬಹುತೇಕ ನಾವುಗಳು ಈ ಮೇಲೆ ಹೇಳಿದಂತೆ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಕನಿಷ್ಠ ಮಟ್ಟದ ಸೌಲಭ್ಯ ಹೊಂಡದ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಸರ್ಕಾರಿ ಕೆಲಸಕ್ಕೆ ಸೇರಿ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಲವಾರು ಬದಲಾವಣೆಗಳ ಅಂದರೆ ಕಾಯ್ದೆ,ಕಾನೂನುಗಳ ಬದಲಾವಣೆ, ತಾಂತ್ರಿಕವಾಗಿ ಸರ್ಕಾರದ ಕೆಲಸಗಳನ್ನು ನಿರ್ವವಿಸಿ, ಸರ್ಕಾರದ ಕೆಲಸಗಳು ಆದಷ್ಟು ಸುಸೂತ್ರವಾಗಿ ನಡೆಯಲು 80-90ರ ದಶಕದಲ್ಲಿ ಸರ್ಕಾರಿ ಹುದ್ದೆಗೆ ಸೇರಿದ ನಮ್ಮಗಳ ಕೊಡುಗೆ ಅಪಾರವಾಗಿದೆ. ಸರ್ಕಾರ ನಮ್ಮಗಳ ಈ ಸರ್ಕಾರಿ ಸೇವೆಯನ್ನು ತಮ್ಮ ಯಾವುದೇ ಮಾನದಂಡ ದಿಂದ ವೈಜ್ಞಾನಿಕವಾಗಿ ಪರಿಶೀಲನೆ ಮಾಡಿ, ನಮ್ಮಗಳನ್ನು ಸರ್ಕಾರ ಯಾವುದೇ ಕಾರಣಕ್ಕೂ ನಿರ್ಲಕ್ಷ ಮಾಡುವುದು ತರವಲ್ಲ, ದಯಮಾಡಿ ಸರ್ಕಾರದ ವಿವಿಧ ಇಲಾಖೆಗಳ ಈಗಿನ ಬದ್ರ ಬುನಾದಿಯ ಸುಸ್ಥಿತಿಗೆ ಕಾರಣವಾದ ನಮ್ಮಗಳಿಗೆ ಏಳನೇ ಆಯೋಗದ ಆರ್ಥಿಕ ಸೌಲಭ್ಯಗಳನ್ನು ನಮಗೆ ದಯಮಾಡಿ ಕೊಡಿ, ನಾವುಗಳು ನಮ್ಮ ಕುಟುಂಬದವರು ಎಲ್ಲರೂ ನಿಮಗೆ ಸದಾ ಚಿರಸ್ಮರಣೀಯರಾಗಿರುತ್ತೇವೆ. ಮಾನ್ಯ ಎರಡು ಸಂಘದ ಅಧ್ಯಕ್ಷರುಗಳು ಈ ದಿನ ಅಭಿನಂದನಾ ಸಮಾರಂಭದಲ್ಲಿ ಮಾನ್ಯ ಮುಖ್ಯ ಮಂತ್ರಿ, ಉಪ ಮುಖ್ಯ ಮಂತ್ರಿಗಳವರಿಗೆ ಮನವರಿಕೆ ಮಾಡಿಕೊಡಿ.