ಮಾನ್ಯ ಶ್ರೀ ಸಿ.ಎಸ್.ಷಡಕ್ಷರಿಯವರು
ರಾಜ್ಯಾಧ್ಯಕ್ಷರು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಿ.ರಾಜ್ಯ ಘಟಕ ಬೆಂಗಳೂರು
ಮಾನ್ಯರೇ,
ತಾವುಗಳು ನಮ್ಮ ಮನವಿಗೆ ಓಗೊಟ್ಟು ಸರ್ಕಾರಕ್ಕೆ ರಾಜ್ಯ ಸಂಘಗಳಿಂದ ಪತ್ರ ಬರೆದು ಪರಿಶೀಲಿಸಿ ಪರಿಗಣಿಸುವಂತೆ ವಿನಂತಿಸಿರುವುದು ಹರ್ಷದಾಯಕ ವಿಷಯವಾಗಿದೆ. ನಾವುಗಳು ಮುಂದುವರೆದು ಈಗ ತಮ್ಮಲಿ ನೆನಪಿಸುವುದು ಏನೆಂದರೆ, ತಾವುಗಳು ನಾಳೆ.ದಿ.17-8-2024 ರಂದು ಹಮ್ಮಿಕೊಂಡಿರುವ ಸಭೆಯಲ್ಲಿ ನಮ್ಮಗಳ ನ್ಯಾಯೋಚಿತ ಬೇಡಿಕೆ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಿ ಕೊಡಬೇಕು, ತಾವುಗಳು ಸಹ ಸರ್ಕಾರದ ಈ ಧೋರಣೆ ಮನಗಂಡು ಮುಂದಿನ ದಿನಗಳಲ್ಲಿ ಸೇವೆಯಲ್ಲಿರುವ ನಿಮ್ಮಗಳಿಗೂ ಇದೇ ಪರಿಸ್ಥಿತಿ ಬಂದೇ ಬರುತ್ತದೆ, ದಯಮಾಡಿ ಇದಕ್ಕೆ ಅವಕಾಶ ಮಾಡಿಕೊಡಬೇಡಿ, ಯಾವುದೇ ಕಾರಣವಿಲ್ಲದೆ 30-40 ವರ್ಷ ಸೇವೆ ಸಲ್ಲಿಸಿ, ನಿವೃತ್ತಿ ಹತ್ತಿರದ 4-5 ವರ್ಷ ಎಲ್ಲಾ ನಿವೃತ್ತ ನೌಕರರು recruitment ಇಲ್ಲದ ಕಾರಣ ಎರಡು ಮೂರು ಅಧಿಕ ಕಾರ್ಯಗಳ ಹೊಣೆ ಹೊತ್ತು ದುಡಿದ್ದಿದ್ದೇವೆ.
ಸೇವೆಯಲ್ಲಿರುವ ನೀವುಗಳು ಸಹ ಈಗಲೂ ಅದನ್ನೇ ಮಾಡುತ್ತಿದ್ದೀರಿ, ದಯಮಾಡಿ ಈಗಾಲೇ ಸರ್ಕಾರದ ಈ ವರ್ತನೆಗಳಿಗೆ ಅವಕಾಶ ಕೊಡಬೇಡಿ. ನಮ್ಮಗಳ ಪರವಾಗಿ ಸಭೆಯಲ್ಲಿ ಪ್ರಥಮ ಆದ್ಯತೆ ಮೇಲೆ ದ್ವನಿ ಎತ್ತಿ, ಪಟ್ಟು ಬಿಡದೆ ನಮ್ಮಗಳ ಬೇಡಿಕೆ ನ್ಯಾಯೋಚಿತ ಕೊಡಲೇಬೇಕಾದ ಸೌಲಭ್ಯಗಳ ಬಗ್ಗೆ ಒತ್ತಾಯ ಮಾಡಿ, ಇದು ಮುಂದಿನ ದಿನಗಳಲ್ಲಿ ನಿಮಗೂ ಕ್ಷೇಮ. ಮಾನ್ಯ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರ ಪ್ರೆಸ್ ಮೀಟ್ ನಲ್ಲಿ ನಮ್ಮಗಳ ಬಗ್ಗೆ ಯಾವುದೇ ವಿಚಾರ ಪ್ರಸ್ತಾಪಿಸದೆ ಇರುವುದನ್ನು ನೋಡಿದರೆ ನಮ್ಮ ಬಗ್ಗೆ ಬೇಡಿಕೆ ಪ್ರಸ್ತಾಪಿಸದಿರುವುದು ನಮ್ಮೆಲ್ಲರಿಗೂ ಅತೀವ ಬೇಸರ ಮೂಡಿಸಿದೆ. ದಯಮಾಡಿ ನಮ್ಮೆಲ್ಲರಿಗೂ ಏಳನೇ ವೇತನ ಆಯೋಗದಂತೆ ನಿವೃತ್ತಿ ನಂತರದ ಆರ್ಥಿಕ ಸೌಲಭ್ಯ ನೀಡಲು ತಾವುಗಳು ಮುಖ್ಯ ಮಂತ್ರಿಗಳಿಗೆ ಒತ್ತಾಯಿಸಿ ಆಗ್ರಹಿಸಬೇಕೆಂದು ಈ ಮೂಲಕ ನಾಡಿನ ಸಮಸ್ತ ನಿವೃತ್ತ ನೌಕರ ಬಾಂಧವರು ವಿನಂತಿಸಿಕೊಳ್ಳುತ್ತಿದ್ದೇವೆ.
ಗೌರವಾನ್ವಿತ ವಂದನೆಗಳೊಂದಿಗೆ.