ಸುಪಾರಿ ಕಿಲ್ಲರ್ಸ್ಗಳಿಂದ ಸರ್ಕಾರಿ ಶಾಲೆಯ ಶಿಕ್ಷಕಿಯ ಬರ್ಬರ್ ಹತ್ಯೆ!!!
ರಾಜ್ಯದಲ್ಲಿ ನಡೆಯಿತು ಘನಘೋರ ಕೃತ್ಯ!!
ಕೋಲಾರ (ಆ.14): ಶಿಕ್ಷಕಿಯ ಕುತ್ತಿಗೆ ಕುಯ್ದು ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ನಗರದ ಮುತ್ಯಾಲಪೇಟೆ ಬಡಾವಣೆಯಲ್ಲಿ ನಡೆದಿದೆ. ದಿವ್ಯಶ್ರೀ (43) ಕೊಲೆಯಾದ ಶಿಕ್ಷಕಿ. ಮೂವರು ಹಂತಕರಿಂದ ಈ ಕೃತ್ಯ ನಡೆದಿದ್ದು, ಸುಪಾರಿ ಕಿಲ್ಲರ್ಸ್ನಿಂದ ಕೊಲೆ ಆಗಿರುವ ಅನುಮಾನ ವ್ಯಕ್ತವಾಗಿದೆ.
ಸುಮಾರು ದಿನಗಳ ಕಾಲ ಶಿಕ್ಷಕಿಯ ಚಲನವಲನ ಗಮನಿಸಿ ಕೊಲೆಯಾಗಿದೆ ಎಂದು ತಿಳಿದುಬಂದಿದೆ. ಮನೆಯಲ್ಲಿ ತನ್ನ ಮಗಳೊಂದಿಗೆ ಇದ್ದಾಗ ಕೊಲೆಯಾಗಿದ್ದು, ಈ ವೇಳೇ ಮಗಳನ್ನು ಕೊಲೆ ಮಾಡಲು ಯತ್ನ ನಡೆದಿದ್ದು, ಅದೃಷ್ಟವಶತ್ ಮಗಳು ಬಚಾವ್ ಆಗಿದ್ದಾಳೆ.
ಮೃತ ಶಿಕ್ಷಕಿ ಮುಳಬಾಗಿಲು ತಾಲ್ಲೂಕು ಮುಡಿಯನೂರು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದು, ಪತಿ ಪದ್ಮನಾಭ್ ಉದ್ಯಮಿಯಾಗಿದ್ದಾರೆ. ಸ್ಥಳಕ್ಕೆ ಕೋಲಾರ ಎಸ್ಪಿ ನಿಖಿಲ್, ಎಫ್.ಎಸ್.ಎಲ್ ಹಾಗೂ ಶ್ವಾನ ದಳದ ಸಿಬ್ಬಂದಿ ಭೇಟಿ ನೀಡಿದ್ದು, ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್ ಸಹ ಭೇಟಿ ನೀಡಿದ್ದಾರೆ. ಸದ್ಯ ಶಿಕ್ಷಕಿ ಕೊಲೆಗೆ ಕಾರಣ ತಿಳಿದುಬಂದಿಲ್ಲ. ಆದರೆ ಶಿಕ್ಷಕಿ ಕೊಲೆಯಿಂದ ಮುಳಬಾಗಿಲು ನಗರದ ಜನ ಬೆಚ್ಚಿ ಬಿದ್ದಿದ್ದಾರೆ.