ರಾಯಚೂರು:
ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನಿಂದ ಇಂದು ದಿನಾಂಕ 15/8/2024 ರಂದು ಮಾನ್ವಿ ತಾಲೂಕಿನ ನಿವೃತ್ತ ನೌಕರರೆಲ್ಲರೂ ಸೇರಿಕೊಂಡು ಶಂಕ್ರಪ್ಪ ಲಮಾಣಿ ನಿವೃತ್ತ ನೌಕರರ ರಾಜ್ಯ ಸಂಚಾಲಕರ ನೇತೃತ್ವದಲ್ಲಿ ಜನಪ್ರಿಯ ಶಾಸಕರಾದ ಹಂಪಯ್ಯ ನಾಯಕ್ ಇವರಿಗೆ ಮತ್ತು ಮಾನ್ಯ ತಹಸಿಲ್ದಾರ್ ಮಾನ್ವಿ ಇವರಿಗೆ ಇಂದು ನಿವೃತ್ತ ನೌಕರರಿಗೆ ಏಳನೇ ವೇತನ ಆಯೋಗದಲ್ಲಿ ಆಗಿರುವ ಆರ್ಥಿಕ ನಷ್ಟ ಸರಿದೂಗಿಸಬೇಕೆಂದು ಮುಖ್ಯ ಮಂತ್ರಿಗಳಿಗೆ ಶಾಸಕರ ಮೂಲಕ ಹಾಗೂ ತಾಲೂಕಾ ತಹಶೀಲ್ದಾರ್ ಮೂಲಕ ಮನವಿಯನ್ನ ಸಲ್ಲಿಸಲಾಯಿತು .
ಈ ಸಂದರ್ಭದಲ್ಲಿ ಶಾಸಕರು ಸಕಾರಾತ್ಮಕವಾಗಿ ಸ್ಪಂದಿಸಿ ಇಂದೇ ಸಿ.ಎಮ್.ರವರಿಗೆ ಪತ್ರ ಕಳುಹಿಸುತ್ತೇನೆ ಎಂದರು. ಶ್ರೀ ಶ್ರೀಶೈಲ್ ಗೌಡ್ರು ಮಾಜಿ ತಾಲೂಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಮಾದೇವಪ್ಪ ಮೂಕಪ್ಪ ಕಟ್ಟಿಮನಿ ಮುತ್ತಣ್ಣ ವಿದ್ಯಾರಣ್ಯ ಶ್ರೀಶೈಲ್ ಪತ್ತಾರ್ ಶಿವಗಂಗಮ್ಮ ಜ್ಯಾನೇಶ ಇವರೆಲ್ಲರೂ ಹಾಜರಿದ್ದರು