ರಾಜ್ಯ ಸರ್ಕಾರಿ ನೌಕರರ ಮುಖ್ಯವಾದ ಮಾಹಿತಿ..ಗಮಿನಿಸಿ..
ಸೇರಿಕೆ ಕಾಲ, ರಜೆ, ವೇತನ ಬಡ್ತಿ ನಿಯಮಗಳು ಇಲ್ಲಿವೆ ನೋಡಿ..
ಬೆಂಗಳೂರು, ಆಗಸ್ಟ್ 13: ಕರ್ನಾಟಕ ರಾಜ್ಯ ಸರ್ಕಾರಿ ನೌಕರ ವರ್ಗಾವಣೆಗೊಂಡಾಗ ನೌಕರನಿಗೆ ಸೇರಿಕೆ ಕಾಲ (Joining Time) ಸಿಗುತ್ತದೆ. ಆದರೆ ಇದಕ್ಕೆ ಹಲವು ನಿಯಮಗಳಿವೆ. ಕರ್ನಾಟಕ ರಾಜ್ಯ ಸರ್ಕಾರಿ ಸೇವಾ ನಿಯಮಗಳು 1958 ನಿಯಮ 8(24) ರಲ್ಲಿ ಈ ಕುರಿತು ವಿವರಣೆ ಇದೆ..
ಯಾವಾಗ ಎಷ್ಟು ಸೇರಿಕೆ ಕಾಲ ಸಿಗುತ್ತದೆ?, ಯಾವಾಗ ಸಿಗುವುದಿಲ್ಲ? ಎಂಬ ಮಾಹಿತಿಯನ್ನು ನೌಕರರ ಮಾಹಿತಿಗಾಗಿ ನೀಡಲಾಗಿದೆ.
ಈ ಕುರಿತು ಮಂಜುನಾಥ ಅರ್ಜುನ ಲಿಂಗಾರೆಡ್ಡಿ, ಪೊಲೀಸ್ ಇನ್ಸ್ಪೆಕ್ಟರ್ ನೀಡಿರುವ ಬರೆದಿರುವ ಲೇಖನ ಸಾಮಾಜಿಕ ಜಾಲತಾಣದಲ್ಲಿದೆ. ಯಾವುದೇ ಸರ್ಕಾರಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರನನ್ನು ಕೇಂದ್ರ ಸರ್ಕಾರ ಅಥವಾ ಇತರ ರಾಜ್ಯ ಸರ್ಕಾರ ಅಥವಾ ಸಂಸ್ಥೆಯೊಂದಕ್ಕೆ ಪ್ರತಿನಿಯೋಜನೆಯ ಮೇಲೆ ವರ್ಗಾವಣೆ ಹೊಂದಿದಾಗ ಆತನಿಗೆ ಸೇರಿಕೆ ಕಾಲವು ಯಾವ ನಿಯಮಗಳಿಗೆ ಅನುಗುಣವಾಗಿ ಲಭಿಸುತ್ತವೆ?.
ಸರ್ಕಾರಿ ನೌಕರನನ್ನು ಕೇಂದ್ರ ಸರ್ಕಾರ ಅಥವಾ ಇತರ ರಾಜ್ಯ ಸರ್ಕಾರ ಅಥವಾ ಸಂಸ್ಥೆಯೊಂದಕ್ಕೆ ಪ್ರತಿನಿಯೋಜನೆ ಮಾಡಿದಾಗ ಆ ಸರ್ಕಾರದ ನೌಕರರಿಗೆ ಅನ್ವಯಿಸುವ ನಿಯಮಗಳ ಅಡಿಯಲ್ಲಿ ಸೇರಿಕೆ ಕಾಲವು ಲಭಿಸುತ್ತದೆಯೇ? ಎಂದು ಪ್ರಶ್ನೆ ಇದೆ.
ಕೇಂದ್ರ ಸರ್ಕಾರಿ ನೌಕರನನ್ನು ಅಥವಾ ಇತರ ರಾಜ್ಯ ಸರ್ಕಾರದ ನೌಕರನನ್ನು ಅದರಲ್ಲಿನ ಯಾವುದೇ ಇತರ ಸಂಸ್ಥೆಯ ನೌಕರನನ್ನು ಕರ್ನಾಟಕ ರಾಜ್ಯ ಸರ್ಕಾರದ ಹುದ್ದೆಗೆ ಪ್ರತಿನಿಯೋಜನೆ ಮೇಲೆ ನೇಮಕ ಮಾಡಿದಾಗ ಆತನಿಗೆ ಸೇರಿಕೆ ಕಾಲವು ಯಾವ ನಿಯಮಗಳ ಅಡಿಯಲ್ಲಿ ಲಭಿಸುತ್ತದೆ? ಎಂಬ ಪ್ರಶ್ನೆಯೂ ಇದ್ದು. ಕರ್ನಾಟಕ ರಾಜ್ಯ ಸರ್ಕಾರಿ ಸೇವಾ ನಿಯಮಗಳ ಅಡಿಯಲ್ಲಿ ಅಂತಹ ಸರ್ಕಾರಿ ನೌಕರನಿಗೆ ಸೇರಿಕೆ ಕಾಲವು ಲಭಿಸುತ್ತದೆ ಎಂದು ಮಾಹಿತಿ ನೀಡಲಾಗಿದೆ.
ಸಾಂದರ್ಭಿಕ ರಜೆ, ಸೇರಿಕೆ ಕಾಲ: ಸರ್ಕಾರಿ ನೌಕರನಿಗೆ ಸರ್ಕಾರಿ ಹಿತಾಸಕ್ತಿಯಲ್ಲಿ ವರ್ಗಾವಣೆಯಾದಾಗ ಆತನಿಗೆ ಲಭಿಸುವ ಸೇರಿಕೆ ಕಾಲದೊಂದಿಗೆ ಸಾಂದರ್ಭಿಕ ರಜೆಯನ್ನು ಸೇರಿಸಲು ಅಥವಾ ಮುಂದುವರೆಸಲು ಅವಕಾಶ ಇದೆಯಾ?. ಸೇರಿಕೆ ಕಾಲದೊಂದಿಗೆ ಸಾಂದರ್ಭಿಕ ರಜೆಯನ್ನು ಸೇರಿಸಲು ಅಥವಾ ಮುಂದುವರೆಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಸರ್ಕಾರಿ ನೌಕರನು ಸಾರ್ವಜನಿಕ ಹಿತಾಸಕ್ತಿಯಿಂದ ವರ್ಗಾವಣೆ ಮಾಡಿದ್ದರೆ ಅಂಥ ಸರ್ಕಾರಿ ನೌಕರನ ಕೋರಿಕೆಯ ಮೇರೆಗೆ ಅಂಥ ವರ್ಗಾವಣೆಯಾದ ದಿನಾಂಕದಂದು ಅವನಿಗೆ ರಜೆ ನೀಡಬಹುದೇ? ಎಂಬ ಪ್ರಶ್ನೆಗೆ ವರ್ಗಾವಣೆಯಾದ ದಿನಾಂಕದಂದು ಅವನು ಹೊಂದಿರುವ ಮತ್ತು ಪಡೆಯಬಹುದಾದ ಯಾವುದೇ ಬಗೆಯ ರಜೆಯನ್ನು ಅವನಿಗೆ ನೀಡಬಹುದು. ಆದರೆ, ಅವನಿಗೆ ನೀಡುವ ರಜೆಯು ಆತನಿಗೆ ಲಭಿಸುವ ಸೇರಿಕೆ ಕಾಲವನ್ನು ಮೀರಬಾರದು ಎಂದು ತಿಳಿಸಲಾಗಿದೆ.
ಸೇರಿಕೆ ಕಾಲವನ್ನು ಯಾವ ರಜೆಯೊಂದಿಗೆ ಸಂಯೋಜಿಸಿ ನೀಡಬಹುದು? ಎಂಬ ಪ್ರಶ್ನೆ ಇದೆ. ಸೇರಿಕೆ ಕಾಲವನ್ನು ಸಾಂದರ್ಭಿಕ ರಜೆಯನ್ನು ಹೊರತುಪಡಿಸಿ ಇತರ ಯಾವುದೇ ಬಗೆಯ ರಜೆಯೊಂದಿಗೆ ಸೇರಿಸಬಹುದು ಎಂದು ನಿಯಮ ಹೇಳುತ್ತದೆ. ವರ್ಗಾವಣೆಯಾದ ಸರ್ಕಾರಿ ನೌಕರನಿಗೆ ರಜೆ ನೀಡಬಹುದೇ?. ಸರ್ಕಾರಿ ನೌಕರನಿಗೆ ವರ್ಗಾವಣೆ ಹೊಂದಿ ರಜೆ ಕೋರಿದರೆ, ವೈದ್ಯಕೀಯ ಕಾರಣದ ಹೊರತು ಬೇರಾವುದೇ ಕಾರಣಕ್ಕೆ ಅವನಿಗೆ ರಜೆಯನ್ನು ನೀಡತಕ್ಕದ್ದಲ್ಲ. (ದೀರ್ಘಕಾಲದ ರಜೆ).
ರಾಜ್ಯ ಸರ್ಕಾರಿ ನೌಕರನು ವಿದೇಶದಲ್ಲಿ ವ್ಯಾಸಂಗ ಅಥವಾ ತರಬೇತಿಗಾಗಿ ರಜೆಯನ್ನು ಪಡೆದು ಹಿಂತಿರುಗುವ ಸರ್ಕಾರಿ ನೌಕರನು ಅವನ ನೇಮಕಾತಿಯ ಸ್ಥಳ ಯಾವುದೇ ಇರಲಿ ಅಥವಾ ರಜಾವಧಿಯ ಎಷ್ಟೇ ಆಗಿರಲಿ ಆ ಸರ್ಕಾರಿ ನೌಕರನಿಗೆ 7 ದಿವಸಗಳ ಕಾಲ ಸೇರಿಕೆ ಕಾಲ ಲಭಿಸುತ್ತದೆ.
ರಜೆಗಳನ್ನು ಸೇರಿಕೆ ಕಾಲದ ಮುಂಚೆನೇ ನೀಡಬಹುದೇ?. ರಜೆಗಳನ್ನು ಸೇರಿಕೆ ಕಾಲದ ನಂತರ ಸೇರಿಸಬಹುದು ಹೊರತು ಸೇರಿಕೆ ಕಾಲದ ಮೊದಲಲ್ಲಿ ಅಲ್ಲ. ಸರ್ಕಾರಿ ನೌಕರನಿಗೆ ಆತನ ವರ್ಗಾವಣೆಯಿಂದ ಲಭಿಸುವ ಸೇರಿಕೆ ಕಾಲವನ್ನು ಕಡಿತಗೊಳಿಸಲೂ ಅವಕಾಶವಿದೆ. ಸೇರಿಕೆ ಕಾಲವನ್ನು ಸರ್ಕಾರಿ ನೌಕರನ ವರ್ಗಾವಣೆ ಪ್ರಾಧಿಕಾರವು ಕಡಿತಗೊಳಿಸಬಹುದು.
ಸೇರಿಕೆ ಕಾಲ ವಿಸ್ತರಿಸುವ ಅಧಿಕಾರ ಇಲಾಖಾ ಮುಖ್ಯಸ್ಥರು, ರಾಜ್ಯ ಸರ್ಕಾರಕ್ಕೆ ಇದೆ.ಇಲಾಖಾ ಮುಖ್ಯಸ್ಥರು ಸೇರಿಕೆ ಕಾಲವನ್ನು 15 ದಿನಗಳವರೆಗೆ ವಿಸ್ತರಿಸಬಹುದು. ರಾಜ್ಯ ಸರ್ಕಾರ 15 ದಿನಗಳಿಗಿಂತ ಹೆಚ್ಚಿಗೆ ವಿಸ್ತರಿಸಬಹುದು.
ಸರ್ಕಾರಿ ನೌಕರನಿಗೆ ವರ್ಗಾವಣೆಯಿಂದ ಲಭಿಸುವ ತನ್ನ ಸೇರಿಕೆ ಕಾಲವನ್ನು ಬಳಸದೇ ಇದ್ದಾಗ ಆ ಸೇರಿಕೆ ಕಾಲವನ್ನು ಗಳಿಕೆ ರಜೆಯಾಗಿ ಪರಿವರ್ತಿಸಿ ಆತನ ಗಳಿಕೆ ರಜದ ಲೆಕ್ಕಕ್ಕೆ ಸೇರಿಸಬಹುದು. ಸೇರಿಕೆ ಕಾಲದ ಮೇಲೆ ಇರುವ ಸರ್ಕಾರಿ ನೌಕರನನ್ನು ಕರ್ತವ್ಯದ ಮೇಲೆ ಇದ್ದಾನೆಂದು ಪರಿಗಣಿಸಲಾಗುತ್ತದೆ.
ಸೇರಿಕೆ ಕಾಲವನ್ನು ಸರ್ಕಾರಿ ನೌಕರನ ವೇತನ ಬಡ್ತಿಗೆ ಪರಿಗಣಿಸಬೇಕು. ಸೇರಿಕೆ ಕಾಲವನ್ನು ಬಳಸಿಕೊಂಡ ನಂತರ ಸರ್ಕಾರಿ ನೌಕರನು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೇ ಇದ್ದಾಗ ಅದು ಕೆ.ಸಿ.ಎಸ್.ಆರ್.ನಿಯಮ 106 ಎ ಅಡಿಯಲ್ಲಿ ಅನಧಿಕೃತ ಗೈರು ಹಾಜರಿ ಆಗುತ್ತದೆ. ಸೇರಿಕೆ ಕಾಲದ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರಿ ಸೇವಾ ನಿಯಮಗಳು 1958ರ ನಿಯಮ 16 ರಿಂದ 90 ರವರೆಗೆ ವಿವರಗಳಿವೆ. ಈ ನಿಯಮಗಳಲ್ಲಿ ಸೇರಿಕೆ ಕಾಲವನ್ನು ವ್ಯಾಖ್ಯಾನಿಸಲಾಗಿದೆ.