ನಿವೃತ್ತ ನೌಕರರಿಂದ ತಮ್ಮ ಬೇಡಿಕೆ ಕುರಿತು ರಾಜ್ಯಾದ್ಯಂತ ಮುಖ್ಯ ಮಂತ್ರಿಗಳಿಗೆ ಮನವಿ ಅರ್ಪಣಾ ಆಂದೋಲನ..
ದಿನಾಂಕ.1-7-2022 ರಿಂದ 31-7-2024 ರ ಅವಧಿಯಲ್ಲಿ ನಿವೃತ್ತರಾದ ಸರ್ಕಾರಿ/ಅನುದಾನಿತ ಏಳನೇ ವೇತನ ಆಯೋಗ ಅನ್ವಯಿತ ನಿವೃತ್ತ ಅಧಿಕಾರಿ್ಗಳು /ನೌಕರರರು ಸರ್ಕಾರ ಘೋಷಿಸಿದ ಏಳನೇ ವೇತನ ಆಯೋಗದಲ್ಲಿ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತಿ ಸೌಲಭ್ಯ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ರಾಜ್ಯದ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಎಲ್ಲಾ ವಿಧಾನಸಭೆ ಹಾಗೂ ವಿಧಾನ ಪರಿಷತ್ ಶಾಸಕರುಗಳಿಗೆ ರಾಜ್ಯ ಮಟ್ಟದ ಉನ್ನತ ಅಧಿಕಾರಿಗಳಿಗ ಹಾಗೂ ಜಿಲ್ಲಾಧಿಕಾರಿಗಳವರಿಗೆ ಹಾಗೂ ತಹಶೀಲ್ದಾರ ರವರಿಗೆ ಮತ್ತು ಸೇವಾ ನಿರತ/ ನಿವೃತ್ತ ಎಲ್ಲ ವೃಂದ ಸಂಘಗಳಿಗೆ ಬೇಡಿಕೆ ಕುರಿತು ದಿ.18-8-2024 ರಿಂದ 20-8-2024 ರವರೆಗೆ ಈ ಮೂರು ದಿನಗಳಲ್ಲಿ ರಾಜ್ಯಾದ್ಯಂತ ಮನವಿ ಅರ್ಪಣಾ ಆಂದೋಲನ ನಡೆಯಲಿದೆ.
ಸದರಿ ಆಂದೋಲನದಲ್ಲಿ ಎಲ್ಲ ಸಂಘಟನೆಗಳ ಬೆಂಬಲದೊಂದಿಗೆ ನಡೆಯಲಿದ್ದು, ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ರಾಜ್ಯದ ಎಲ್ಲ ಸಂಚಾಲಕರು ಎಲ್ಲರೊಡಗೂಡಿ ಮನವಿ ಸಲ್ಲಿಸಲಿದ್ದಾರೆ ಎಂದು ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಸಂಸ್ಥಾಪಕ ರಾಜ್ಯ ಮಹಾ ಪ್ರಧಾನ ಸಂಚಾಲಕ ಎಮ್.ಪಿ.ಎಮ್.ಷಣುಖಯ್ಯ ಸಂಸ್ಥಾಪಕ ರಾಜ್ಯ ಸಂಚಾಲಕರಾದ ಅಶೋಕ.ಎಮ್.ಸಜ್ಜನ.ಗುರು ತಿಗಡಿ.ಶಂಕ್ರಪ್ಪ ಲಮಾಣಿ ಎಸ್.ಜಿ.ಬಿಸೆರೊಟ್ಟಿ ಮುಂತಾದವರು ಕೋರಿದ್ದಾರೆ.ಹೆಚ್ವಿನ ಮಾಹಿತಿಗಾಗಿ 9036124574 ಸಂಪರ್ಕಿಸಬಹುದು.