ಶಿಕ್ಷಕನಿಂದ ಶಿಕ್ಷಕಿಗೆ ಲೈಂಗಿಕ ಕಿರುಕುಳ!! ಸಾರ್ವಜನಿಕರಿಂದ ಶಿಕ್ಷಕನಿಗೆ ಥಳಿತ,..
ಶಿಕ್ಷಕಿಯ ಕಾಲು ಮುಗಿದ ಶಿಕ್ಷಕ…
ರಾಯಚೂರು: ರಾಯಚೂರು ನಗರ (Raichur news) ಸಮೀಪದ ಯರಮರಸ್ ಬಳಿಯ ಆದರ್ಶ ವಿದ್ಯಾಲಯದ ಪ್ರಭಾರಿ ಪ್ರಾಚಾರ್ಯನೊಬ್ಬ (Principal in charge) ತರಬೇತಿಗೆ ಬಂದಿದ್ದ ಶಿಕ್ಷಕಿ ಜತೆ ಅನುಚಿತವಾಗಿ (Misbehave) ವರ್ತಿಸಿದ್ದರಿಂದ ಥಳಿತಕ್ಕೊಳಗಾದ (Beaten) ಘಟನೆ ಸೋಮವಾರ ನಡೆದಿದೆ.
ಮೆಹಬೂಬ್ ಅಲಿ ಎಂಬಾತನೇ ಏಟು ತಿಂದ ಪ್ರಭಾರಿ ಪ್ರಾಚಾರ್ಯ. ಈತ ಶಿಕ್ಷಕಿಯ ಮೊಬೈಲ್ಗೆ ಅಶ್ಲೀಲ ಮೆಸೇಜ್ಗಳನ್ನು ಕಳಿಸುತ್ತಿದ್ದನಲ್ಲದೆ, ರಾತ್ರಿ ಮಲಗಲು ಬಾ ಎಂದೂ ಕರೆದಿದ್ದ. ಇದರಿಂದ ನೊಂದ ಶಿಕ್ಷಕಿ ತಮ್ಮವರಿಗೆ ಮಾಹಿತಿ ತಿಳಿಸಿದ್ದರು. ಶಾಲೆಗೆ ಬಂದ ಶಿಕ್ಷಕಿಯ ಬಂಧುಗಳು, ಸಾರ್ವಜನಿಕರು ಪ್ರಭಾರ ಪ್ರಾಚಾರ್ಯನಿಗೆ ಚೆನ್ನಾಗಿ ಥಳಿಸಿ ಬುದ್ಧಿ ಕಲಿಸಿದ್ದಾರೆ.
ಪ್ರಭಾರಿ ಪ್ರಾಚಾರ್ಯ ಮೆಹಬೂಬ್ ಅಲಿ, ತಾನು ಮಾಡಿದ್ದು ತಪ್ಪಾಗಿದೆ. ಇನ್ನು ಮುಂದೆ ಹಾಗೆ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದಾನೆ. ಶಿಕ್ಷಕಿಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ. ಈ ಕುರಿತು ಗ್ರಾಮೀಣ ಠಾಣೆ ಅಥವಾ ಮಹಿಳಾ ಠಾಣೆಯಲ್ಲಾಗಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.