ಅನುಭವ ಮಂಟಪದಲ್ಲಿ ಬಸವ ಪಂಚಮಿ ಅಂಗವಾಗಿ ಉರಗ ತಜ್ಞರಿಂದ ಜಾಗೃತಿ ಕಾರ್ಯಕ್ರಮ
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದಲ್ಲಿ ಪಂಚಮಿ ಹಬ್ಬದ ಪ್ರಯುಕ್ತ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮದಲ್ಲಿ ಬಸವ ಪಂಚಮಿಯನ್ನು ಆಚರಿಸಲಾಯಿತು ಈ ಕಾರ್ಯಕ್ರಮದಲ್ಲಿ ಭಾರತದಲ್ಲಿನ ಎಲ್ಲಾ ಜಾತಿಯ ಹಾವುಗಳ ಬಗ್ಗೆ ವಿಶೇಷ ಉಪನ್ಯಾಸವನ್ನು ರೈತರಿಗೆ, ವಿದ್ಯಾರ್ಥಿಗಳಿಗೆ, ಅಂಗನವಾಡಿ ಕಾರ್ಯಕರ್ತರಿಗೆ , ಶರಣರಿಗೆ ಅರಣ್ಯ ಅಧಿಕಾರಿಗಳಾದ ಯಲ್ಲಾನಾಯಕ್ ಹಮಾನಿ ಹಾವುಗಳ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಕಲಘಟಗಿ ತಾಲೂಕ ಅರಣ್ಯ ಅಧಿಕಾರಿ ಅರುಣ ಕುಮಾರ್ ಅಷ್ಟಗಿ, ರಮೇಶ್ ಕಡೆಮನಿ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಅಣ್ಣಪ್ಪ ಓಲೇಕಾರ, ಕರ್ಣಾಟಕ ವೈಲ್ಡ್ ವೇಲ್ಪೇರ ಸೋಸೈಟಿಯ ಕಲ್ಲಪ್ಪ.ಜೋಡಳ್ಳಿ ಹಾಗೂ ಸಿಬ್ಬಂದಿ , ಹಿರಿಯ ಶರಣರಾದ ಗುರುಲಿಂಗ ಉಣಕಲ್ಲ , ಬಸವರಾಜ ಮಾದಿ, ರಾಮಣ್ಣ ಕೋಟಿ , ದ್ಯಾಮಣ್ಣ ಬಡಿಗೇರ,ನೀಲಪ್ಪ ಹಿರೇಗುಂಜಾಳ , ನೀಲಪ್ಪ ಮುತ್ತಗಿ , ಸಂಕಪ್ಪ ಧನಿಗೊಂಡ , ಪ್ರಭುಲಿಂಗ ರಂಗಾಪುರ, ಶಿವಲಿಂಗಪ್ಪ ಕೆಳಗಿನಮನಿ , ದತ್ತಾತ್ರೇಯ ಭಟ್ ಮತ್ತಿತರು ಇದ್ದರು. ಜಾನಪದ ಕಲಾತಂಡದ ಪಾರಮ್ಮ ದೇಸೂರ , ಬಸವ್ವ ಉಳ್ಳಾಗಡ್ಡಿ ಸಂಗಡಿಗರಿಂದ ಡೋಳ್ಳಿನ ಕಲೆ ಪ್ರಸ್ತುತ ಪಡಿಸಲಾಯಿತು, ಸೇರಿದ ಶರಣರಿಗೆ ಮಹಾದಾಸೋಹ ಜರುಗಿತು.