ಇದು ಪದವೀಧರ ಶಿಕ್ಷಕರ ಸಂಘದ ( 6ರಿಂದ 8 ) ಉದ್ಧಟತನದ ಪರಮಾವಧಿಯಾಗಿದೆ..
1ರಿಂದ 7 ನೇ ತರಗತಿಯ ವೃಂದದಲ್ಲಿದ್ದು ನೇಮಕಾತಿಯಾದ ನಮ್ಮನ್ನು ಹಾಗೂ ನಮ್ಮ ಸೇವಾ ಜೇಷ್ಠತೆಯನ್ನು ಮೊದಲು ಗೌರವಿಸುವ ಸೌಜನ್ಯತೆ ಇಲ್ಲದೆ ಕಾನೂನು ಕುರಿತು ಮಾತನಾಡುವ ಈ ಸಂಘಟನೆ 1ರಿಂದ 7 ಕ್ಕೆ ನೇಮಕಾತಿಯಾದವರನ್ನು ಅದೇ ಕಾನೂನು ರಚನೆಕಾರರರು 1 ರಿಂದ 5 ವೃಂದದ PST ಗಳೆಂದು ನಮ್ಮನ್ನು ಪದನಾಮೀಕರಿಸಿ ಹಿಂಬಡ್ತಿಗೆ ತಳ್ಳಿದ್ದು ಅದು ಯಾವ ನ್ಯಾಯದ ಕಾನೂನು ? ಈ ಕುರಿತು ಗುರುಬಳಗದವರಿಗೆ ಆದ ಅನ್ಯಾಯದ ಬಗ್ಗೆ ಚಕಾರವೆತ್ತದ GPT ಸಂಘಟನೆ ನಮ್ಮ ಸಂಘದ ಬೇಡಿಕೆಯ ಕುರಿತು ಆಕ್ಷೇಪಿಸುವ ಕನಿಷ್ಠ ನೈತಿಕತೆಯೂ ಇವರಿಗಿಲ್ಲ. “ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ” equality before law ಎಂಬುದು ಎಷ್ಟು ಸತ್ಯವೋ ಅದೇ ಕಾನೂನುಗಳು ಬಹುಜನರಿಗೆ ಅನ್ಯಾಯಗಳಿಗೆ, ಸೇವಾಜೇಷ್ಠತೆಗಳಿಗೆ ತೊಂದರೆಯನ್ನು ತರುವುದಾದರೆ ಅಂತಹ ಕಾನೂನುಗಳನ್ನು ( ಅಂದರೆ 2017 ರ C& R ಕಾನೂನುಗಳನ್ನು ) ತಿದ್ದುಪಡಿ ಮಾಡುವ ಸಂಪೂರ್ಣ ಪರಮಾಧಿಕಾರ ಶಾಸಕಾಂಗಕ್ಕಿದೆ ಎಂಬ ಕನಿಷ್ಠ ಜ್ಞಾನವಿಲ್ಲದ GPT ಸಂಘಟನೆ ನಮ್ಮ ಬೇಡಿಕೆಗಳನ್ನು ಆಕ್ಷೇಪಿಸುವುದು ಕ್ಷಮಾರಹಿತ ವರ್ತನೆಯಾಗಿದೆ
“ಪವಿತ್ರಾ ಪ್ರಕರಣ”ದಲ್ಲಿ ಸರ್ವೋಚ್ಛ ನ್ಯಾಯಾಲಯದ ತೀರ್ಪಿನಂತೆ ಬಹಳಷ್ಟು ನೌಕರರು ಹಿಂಬಡ್ತಿ ಹೊಂದಬೇಕಾದ ಪರಿಸ್ಥಿತಿ ಇದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಸುಗ್ರಿವಾಜ್ಞೆಯ ಮೂಲಕ ತಿದ್ದುಪಡಿ ಮಾಡಿದ್ದು ಎಲ್ಲರಿಗೂ ತಿಳಿದಿದೆ
ನ್ಯಾಯಾಲಯ ಕಾನೂನನ್ನು ರಕ್ಷಿಸಿ ಎತ್ತಿಹಿಡಿಯುತ್ತದೆ ಆದರೆ ಕಾನೂನನ್ನು ರಚಿಸಿ ಎತ್ತಿಹಿಡಿಯುವುದು ಹಾಗೂ ಬಹುಸಂಖ್ಯಾತರಿಗೆ ಮಾರಕವಾಗುವ ಕಾನೂನುಗಳನ್ನು ತಿದ್ದುಪಡಿಮಾಡುವ ಅಧಿಕಾರ ಶಾಸಕಾಂಗಕ್ಕಿದೆ / ಸರ್ಕಾರಕ್ಕಿದೆ
1ರಿಂದ 7 ಕ್ಕೆ ನೇಮಕಾತಿಯಾದ PST ಶಿಕ್ಷಕರ ಪಾಲಿಗೆ ಮರಣ ಶಾಸನವಾಗಿರುವ 2017 ರ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಘನ ಸರ್ಕಾರವು ಸಮಗ್ರವಾಗಿ ತಿದ್ದುಪಡಿ ಮಾಡಿ ನ್ಯಾಯ ಒದಗಿಸದಿದ್ದಲ್ಲಿ ,ನಮ್ಮ ರಾಜ್ಯ ಸಂಘಟನೆಯು 6 ಮತ್ತು 7/ 8 ನೇ ತರಗತಿ ಬಹಿಷ್ಕಾರಕ್ಕೆ ತಕ್ಷಣದಲ್ಲಿ ಕರೆ ನೀಡಬೇಕು ಹಾಗೂ ಅನ್ಯಾಯದ ವಿರುದ್ಧದ ಹೋರಾಟವನ್ನು ಮೊಟಕುಗೊಳಿಸಿದೆ ಮುಂದಡಿ ಇಡಬೇಕಾಗಿದೆ.
ಎಲ್ಲಾ 1-7 PST ಶಿಕ್ಷಕರು GPT ಶಿಕ್ಷಕರ ಈ ನಿರ್ಧಾರವನ್ನು ಖಂಡಿಸಬೇಕಾಗಿದೆ..
ಲಕ್ಕಮ್ಮನವರ ರಾಜ್ಯಾದ್ಯಕ್ಷರು
ಕೆ ನಾಗರಾಜು ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಭಾಷಾ ಅಲ್ಪಸಂಖ್ಯಾತ ಪ್ರಾಥಮಿಕ ಶಾಲಾ ಕನ್ನಡ ಶಿಕ್ಷಕರ ಸಂಘ, ಬೆಂಗಳೂರು