GOOD NEWS..Government Employees..
ಕೇಂದ್ರ ಸರ್ಕಾರಿ ನೌಕರರಿಗೆ 8 ನೇ ವೇತನ ಆಯೋಗ ಜಾರಿ!
7 ನೇ ವೇತನ ನಂತರ 8 ನೇ ವೇತನ ಆಯೋಗದಂತೆ ವೇತನ ಪಡೆದುಕೊಳ್ಳಲು ಸಿದ್ದರಾದ ಕೇಂದ್ರ ಸರ್ಕಾರಿ ನೌಕರರು..
ಆಗಸ್ಟ್ 05: ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 23ರ ಮಂಗಳವಾರ 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದರು. ಆದರೆ ಬಜೆಟ್ ಭಾಷಣದಲ್ಲಿ ಕೇಂದ್ರ ಸರ್ಕಾರಿ ನೌಕರರ ಪ್ರಮುಖ ಬೇಡಿಕೆ ಬಗ್ಗೆ ಯಾವುದೇ ಉಲ್ಲೇಖ ಮಾಡಲಿಲ್ಲ.
8ನೇ ವೇತನ ಆಯೋಗ ರಚನೆ ಕೇಂದ್ರ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾಗಿದೆ. ಈಗಾಗಲೇ ಕೇಂದ್ರ ಸರ್ಕಾರಿ ನೌಕರರು 7ನೇ ವೇತನ ಆಯೋಗದ ಶಿಫಾರಸು ಅನ್ವಯ ವೇತನವನ್ನು ಪಡೆಯುತ್ತಿದ್ದಾರೆ. ಜನವರಿ 1, 2026ರಿಂದ 8ನೇ ವೇತನ ಆಯೋಗದ ಅನ್ವಯ ವೇತನ ಪಡೆಯಬೇಕಿದೆ.
ಕೇಂದ್ರ ಸರ್ಕಾರಿ ನೌಕರರು, ನಿವೃತ್ತ ನೌಕರರು ನಿರ್ಮಲಾ ಸೀತಾರಾಮನ್ ಬಜೆಟ್ 2024-25ರಲ್ಲಿ ವೇತನ ಆಯೋಗ ರಚನೆ ಘೋಷಣೆ ನಿರೀಕ್ಷೆಯಲ್ಲಿದ್ದರು. ಆದರೆ ಅವರಿಗೆ ನಿರಾಸೆಯಾಗಿದೆ. ಈಗ ವೇತನ ಆಯೋಗ ರಚನೆ ಘೋಷಣೆ ಯಾವಾಗ ಆಗಲಿದೆ? ಎಂದು ನೌಕರರು ಕಾದು ಕುಳಿತಿದ್ದಾರೆ.
10 ವರ್ಷಕ್ಕೊಂದು ಆಯೋಗ ರಚನೆ: ಪ್ರತಿ ದಶಕಕ್ಕೆ ಒಮ್ಮೆ ಹೊಸ ವೇತನ ಆಯೋಗವನ್ನು ರಚನೆ ಮಾಡುವ ಸಂಪ್ರದಾಯವನ್ನು ಕೇಂದ್ರ ಸರ್ಕಾರ ಮುಂದುವರೆಸಬೇಕು. 7ನೇ ವೇತನ ಆಯೋಗವನ್ನು ಫೆಬ್ರವರಿ 2014ರಲ್ಲಿ ರಚನೆ ಮಾಡಲಾಗಿತ್ತು. ಅದರ ಶಿಫಾರಸ್ಸುಗಳನ್ನು ಜನವರಿ 1, 2016ರಿಂದ ಜಾರಿಗೆ ತರಲಾಯಿತು.
2024-25ರ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೂ ಮುನ್ನ, ಕೇಂದ್ರ 8ನೇ ವೇತನ ಆಯೋಗದ ರಚನೆ ಬಗ್ಗೆ ಘೋಷಣೆ ಮಾಡಬಹುದು ಎಂದು ಹಲವು ವರದಿಗಳು ನಿರೀಕ್ಷಿಸಿದ್ದವು. ಆದರೆ, ಈ ಕುರಿತು ಬಜೆಟ್ ಭಾಷಣದಲ್ಲಿ ಯಾವುದೇ ಘೋಷಣೆ ಮಾಡಿಲ್ಲ.
ಕೇಂದ್ರ ಸರ್ಕಾರಿ ನೌಕರರು ಎನ್ಪಿಎಸ್ ರದ್ದುಪಡಿಸಬೇಕು ಮತ್ತು ಹಳೆಯ ಪಿಂಚಣಿ ಯೋಜನೆ ಮರುಸ್ಥಾಪನೆ ಮಾಡಬೇಕು. 8ನೇ ವೇತನ ಆಯೋಗ ರಚನೆ ಮಾಡಬೇಕು ಎಂದು ಎರಡು ಪ್ರಮುಖ ಬೇಡಿಕೆಗಳನ್ನು ಬಜೆಟ್ ಪೂರ್ವ ಸಭೆಯಲ್ಲಿ ಮಂಡಿಸಿದ್ದರು. ಆದರೆ ಕೇಂದ್ರ ಬಜೆಟ್ನಲ್ಲಿ ಈ ಎರಡು ಅಂಶಗಳ ಕುರಿತು ಯಾವುದೇ ಉಲ್ಲೇಖ ಮಾಡಿಲ್ಲ.
ಕೇಂದ್ರ ಹಣಕಾಸು ಕಾರ್ಯದರ್ಶಿ ಟಿ. ವಿ. ಸೋಮನಾಥನ್ ಬಜೆಟ್ ನಂತರ ನೀಡಿದ ಸಂದರ್ಶನದಲ್ಲಿ 8ನೇ ವೇತನ ಆಯೋಗ ರಚನೆ ವಿಷಯದ ಬಗ್ಗೆ ಸರ್ಕಾರ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಬಹುದು ಎಂದು ಸುಳಿವು ನೀಡಿದ್ದಾರೆ. ಮುಂದಿನ ವೇತನ ಆಯೋಗವನ್ನು 2026ಕ್ಕೆ ನಿಗದಿಪಡಿಸಲಾಗಿದ್ದು, ಸಾಕಷ್ಟು ಸಮಯಾವಕಾಶವಿದೆ ಎಂದು ಅವರು ಪ್ರಸ್ತಾಪಿಸಿದ್ದಾರೆ.
ಈಗಾಗಲೇ 8ನೇ ಕೇಂದ್ರ ವೇತನ ಆಯೋಗ ರಚನೆ ಕುರಿತು ಸರ್ಕಾರಕ್ಕೆ ಎರಡು ಮನವಿಗಳು ಬಂದಿವೆ. ಆದರೆ, ಸದ್ಯಕ್ಕೆ ಯಾವುದೇ ಪ್ರಸ್ತಾವನೆ ಪರಿಶೀಲನೆಯಲ್ಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಸರ್ಕಾರ ಈ ಕುರಿತು ಯಾವಾಗ ತೀರ್ಮಾನ ಕೈಗೊಳ್ಳಲಿದೆ? ಎಂಬ ಬಗ್ಗೆ ಖಚಿತವಾದ ಮಾಹಿತಿ ಲಭ್ಯವಾಗಿಲ್ಲ.
ಸರ್ಕಾರ ಸಾಮಾನ್ಯವಾಗಿ ಸರ್ಕಾರಿ ನೌಕರರ ವೇತನ, ಭತ್ಯೆಗಳ ಒಟ್ಟಾರೆ ಪರಿಷ್ಕರಣೆಗಾಗಿ 10 ವರ್ಷಗಳಿಗೊಮ್ಮೆ ವೇತನ ಆಯೋಗ ರಚನೆ ಮಾಡುತ್ತದೆ. ಈಗಾಗಲೇ 7ನೇ ವೇತನ ಆಯೋಗದ ವರದಿ ಅನ್ವಯ ವೇತನ, ಭತ್ಯೆಯನ್ನು ಜನವರಿ 1, 2016ರಿಂದ ಜಾರಿಗೆ ತರಲಾಗಿದೆ.
ಫೆಬ್ರವರಿ 28, 2014ರಂದು ಆಗಿನ ಯುಪಿಎ ಮೈತ್ರಿಕೂಟದ ಸರ್ಕಾರ ಮಂಡಿಸಿದ ಮಧ್ಯಂತರ ಬಜೆಟ್ನಲ್ಲಿಯೇ 7ನೇ ವೇತನ ಆಯೋಗ ರಚನೆ ಘೋಷಣೆಯನ್ನು ಮಾಡಿತು. ಚುನಾವಣಾ ಪೂರ್ವ ಬಜೆಟ್ನಲ್ಲಿ ಈ ಘೋಷಣೆ ಮಾಡಲಾಗಿತ್ತು. ಆದರೆ ಈ ಬಾರಿ ಚುನಾವಣೆ ಮುಗಿದ ಬಳಿಕ ಮಂಡಿಸಿದ ಪೂರ್ಣ ಪ್ರಮಾಣದ ಬಜೆಟ್ನಲ್ಲಿ ಸರ್ಕಾರ ನೌಕರರಿಗೆ ನಿರಾಸೆ ಮೂಡಿಸಿದೆ.