PST ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ 12-8-2024 ರಂದು ಫ್ರೀಡಂ ಪಾರ್ಕ ಬೆಂಗಳೂರಿನಲ್ಲಿ ನಡೆಯುವ ಬೃಹತ್ ಹೋರಾಟ ಹಮ್ಮಿಕೊಂಡಿರುವ ಕುರಿತು ಧಾರವಾಡ ತಹಶೀಲ್ದಾರ ಅವರಿಗೆ ಇವತ್ತು ( ದಿನಾಂಕ 6-8-2024) ಮಂಗಳವಾರ ರಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಧಾರವಾಡ ಶಹರ ಹಾಗೂ ಧಾರವಾಡ ಗ್ರಾಮೀಣ ಘಟಕದ ವತಿಯಿಂದ ಮಾನ್ಯ ತಹಶೀಲ್ದಾರವರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಮನವಿಯನ್ನು ಸ್ವೀಕರಿಸಿದ ಮಾನ್ಯ ತಹಶಿಲ್ದರಾರರವರು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ತಲುಪಿಸುತ್ತೇನೆಂದು ಹೇಳಿದರು. ಜೊತೆಗೆ ಧಾರವಾಡ ಶಹರ ವಲಯದ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಹಾಗೂ ತಾಲೂಕಾ ಪದಾಧಿಕಾರಿಗಳು ಹಾಗೂ ಪ್ರಧಾನ ಗುರುಗಳು ಮತ್ತು ಶಿಕ್ಷಕ- ಶಿಕ್ಷಕಿಯರು ಉಪಸ್ಥಿತರಿದ್ದರೆಂದು ಶ್ರೀ ಎಂ ಆರ್ ಕಬ್ಬೇರ ಪ್ರಧಾನ ಕಾರ್ಯದರ್ಶಿಗಳು KSPSTA ಧಾರವಾಡ ಶಹರ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..