ಕ್ಷೇತ್ರ ಶಿಕ್ಷಕಣಾಧಿಕಾರಿ ಎದುರೆ ಶಿಕ್ಷಕನ ಮೇಲೆ ಪೋಷಕರಿಂದ ಹಲ್ಲೆ!!
ಆರು ವಿದ್ಯಾರ್ಥಿಗಳ ಕೂದಲು ಕಟ್ ಮಾಡಿದ್ದ ಶಿಕ್ಷಕ….
ಶಿಕ್ಷಕರ ದುರ್ವತನೆಗೆ ಬೇಸೆತ್ತ ಪೋಷಕರು ಹಾಗೂ ಸಿಬ್ಬಂದಿ…
ಗದಗ: ಮಕ್ಕಳ ಕೂದಲು ಕಟ್ ಮಾಡಿದ್ದಕ್ಕೆ ಕಂಪ್ಯೂಟರ್ ಶಿಕ್ಷಕನಿಗೆ ಧರ್ಮದೇಟು ಬಿದ್ದಿದೆ. ಗದಗ ಬೆಟಗೇರಿ ಸೇಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೈಡ್ರಾಮಾವೇ ನಡೆದಿದೆ. ಶಿಕ್ಷಕ ಬೆನೋಯ್ ಎಂಬಾತ ಶಾಲೆಯ ಆರು ಮಕ್ಕಳಿಗೆ ಹೇರ್ ಕಟ್ ಮಾಡಿದ್ದಾರೆ.
ಕೂದಲು ಕಟ್ ಮಾಡುವ ವೇಳೆ ವಿದ್ಯಾರ್ಥಿ ಹಣೆಗೆ ಗಾಯವಾಗಿದೆ. ಏಳನೇ ತರಗತಿ ವಿದ್ಯಾರ್ಥಿಗೆ ಬೆನೋಯ್ ಕತ್ತರಿಯಿಂದ ಗಾಯ ಮಾಡಿದ್ದಾರೆ. ಶಿಕ್ಷಕ ಬೆನೋಯ್ ವರ್ತನೆಗೆ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಎಸ್ ಬುರಡಿ ಎದುರೇ ಪೋಷಕರು ಧರ್ಮದೇಟು ನೀಡಿದ್ದಾರೆ.
ಬಳಿಕ ಬೆನೋಯ್ನ್ನು ವಜಾಗೊಳಿಸುವಂತೆ ಪಾಲಕರು ಆಗ್ರಹಿಸಿದ್ದಾರೆ. ದುರ್ವರ್ತನೆ ತೋರಿದ ಶಿಕ್ಷಕನ ಬಗ್ಗೆ ಬಿಇಒ ಅಧಿಕಾರಿ ವರದಿ ಪಡೆದಿದ್ದಾರೆ. ಮೇಲಾಧಿಕಾರಿಗಳಿಗೆ ವರದಿ ನೀಡಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಗದಗ ಶಹರ ಬಿಇಒ ಆರ್ಎಸ್ ಬುರಡಿ ಮಾಹಿತಿ ನೀಡಿದ್ದಾರೆ.