ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ ಮುಖ್ಯವಾದ ಮಾಹಿತಿ..
ನಿವೃತ್ತಿ ವೇತನದ ಕುರಿತು ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ.
ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ ನಿವೃತ್ತಿ ವೇತನ ನಿಯಮಗಳ ಕುರಿತು ಕರ್ನಾಟಕ ನಾಗರೀಕ ಸೇವಾ ನಿಯಮಗಳು- 1958 ರ ಭಾಗ-4 ರಲ್ಲಿ ಪ್ರಸ್ತಾಪಿಸಿರುವ ಕೆಲವು ಮಾಹಿತಿಗಳು ನಮ್ಮ ಓದುಗಾರಿಗಾಗಿ ಇಲ್ಲಿದೆ ಮಾಹಿತಿ.
ನಿವೃತ್ತಿಯ ಅವಶ್ಯಕತೆ
ಸಾಮಾನ್ಯ ಜನರಂತೆ ಸರ್ಕಾರಿ ನೌಕರರು ಕೂಡ ಶಕ್ತಿಯಿರುವ ವರೆಗೆ ದುಡಿಯುತ್ತಾರೆ.
ವಯಸ್ಸು ಆದಂತೆ ಕರ್ತವ್ಯ ದಕ್ಷತೆ ಕಡಿಮೆಯಾಗುತ್ತದೆ..
ಆರಂಭದಲ್ಲಿ ಇದ್ದ ಹುರುಪು ಉತ್ಸಾಹ ಇರುವುದಿಲ್ಲ..
ಇದರಿಂದ ಸಾರ್ವಜನಿಕರ ಕೆಲಸಗಳು ವಿಳಂಬಿಸುತ್ತವೆ..
ಹೊಸತಲೆಮಾರಿಗೆ ಉದ್ಯೋಗದ ಅವಶ್ಯಕತೆ
ಅದಕ್ಕಾಗಿ ನಿವೃತ್ತಿ ಅನಿವಾರ್ಯವಾಗುತ್ತದೆ
ನಿವೃತ್ತಿ ವಯಸ್ಸು..
ಯಾವ ವಯಸ್ಸಿಗೆ ನಿವೃತ್ತಿಯಾಗಬೇಕು
* ನಿವೃತ್ತಿಯ ವಯಸ್ಸು ಆಯಾ ದೇಶಗಳ ವಾತವರಣವನ್ನು ಹಾಗೂ ಜೀವಿತಾವಧಿಯನ್ನು ಅವಲಂಬಿಸಿರುತ್ತದೆ
* ಯು ಎಸ್ ಎ ನಲ್ಲಿ ಜೀವಿತಾವಧಿ ವಯಸ್ಸು 65-70
* ಬ್ರಿಟನ್ ನಲ್ಲಿ ಜೀವಿತಾವಧಿ ವಯಸ್ಸು
60-65
* ಭಾರತದಲ್ಲಿ ಜೀವಿತಾವಧಿ ವಯಸ್ಸು 55-60
ನಿವೃತ್ತಿ ಸೌಲಭ್ಯಗಳ ಸಿದ್ದಾಂತಗಳು
* ಪ್ರತಿಯೊಂದು ದೇಶದಲ್ಲೂ ಕೂಡ ಸರ್ಕಾರಿ ಸೇವೆಯಿಂದ ನಿವೃತ್ತರಾದವರಿಗೆ ಅವರ ಇಳಿವಯಸ್ಸಿನಲ್ಲಿ ಪರಿಹಾರವಾಗಿ ಮಾಸಿಕ ಮೊಬಲಗು ಅಥವಾ ಹಿಡಿಗಂಟಾಗಿ ಹಣವನ್ನು ಪಾವತಿದಲಾಗುತ್ತಿದೆ
* ಇದಕ್ಕಾಗಿ ಅಯವ್ಯಯದಲ್ಲಿ ಸರ್ಕಾರ ಹಣವನ್ನು ಕಾಯ್ದಿರಿಸುತ್ತದೆ
* ಈ ರೀತಿಯ ಉಪಲಬ್ದಗಳು ಪಾವತಿಸದಿದ್ದರೆ ಏನಾಗುತ್ತಿತ್ತು
ಅ]ನೌಕರನು ಸಾಯುವತನಕ ವಿರಾಮವಿಲ್ಲದೆ ದುಡಿಯಬೇಕಿತ್ತು
ಆ]ವಯಸ್ಸಾದ ನೌಕರರ ಸಂಖ್ಯೆ ಹೆಚ್ಚಳವಾಗಿ ಆಡಳಿತ ದುರ್ಬಲವಾಗುತ್ತಿದೆ
ನಿವೃತ್ತಿ ಸೌಲಭ್ಯಗಳ ಸಿದ್ದಾಂತಗಳು
* ಉಪಲಬ್ದಗಳಿಲ್ಲದೆ ನಿವೃತ್ತಿಗೊಳಿಸಿದರೆ ನೌಕರನು ನಿರ್ಗತಿಕನಾಗುತ್ತಿದ್ದ
* ನೌಕರನ ಜೀವನ ಕಷ್ಟಕರವಾಗುತಿತ್ತು
*ಯಾರೂ ಸರ್ಕಾರಿ ನೌಕರಿಯನ್ನು ಬಯಸುತ್ತಿರಲಿಲ್ಲ ಸರ್ಕಾರಿ ನೌಕರಿಗೆ ಘನತೆ ಇರುತ್ತಿರಲಿಲ್ಲ ನೌಕರರು ಹತಾಷರಾಗಿ ಲಂಚಕೋರರಾಗುತಿದ್ದರು
* ಸೇವೆಯಲ್ಲಿ ಇರುವ ತನಕ ದೋಚುತ್ತಿದ್ದರು
ನಿವೃತ್ತಿ ವೇತನ ಸೌಲಭ್ಯಗಳನ್ನು ಎರಡು ಭಾಗಗಳನ್ನಾಗಿ ಮಾಡಿದೆ
1.ನಿವೃತ್ತಿಯಾದಾಗ ದೊರೆಯುವ ಉಪಲಬ್ದಗಳು
2.ಸೇವೆಯಲ್ಲಿ ಮರಣ ಹೊಂದಿದಾಗ ದೊರೆಯುವ ಉಪಲಬ್ದಗಳು
ನಿವೃತ್ತಿಯಾದಾಗ ದೊರೆಯುವ ಉಪಲಬ್ದಗಳು:
1.ನಿವೃತ್ತಿ ವೇತನ
2.ಸೇವಾ ಉಪದಾನ
3.ಪರಿವರ್ತಿತ ಪಿಂಚಣಿ
4.ಸೇವಾಂತ್ಯದಲ್ಲಿ ಉಳಿದಿರುವ ಗಳಿಕೆರಜೆ ನಗದೀಕರಣ ಸೌಲಭ್ಯ[118 ಎ]
5.ಸಾಮೂಹಿಕ ವಿಮಾ ಯೋಜನೆ ಉಳಿತಾಯ ನಿಧಿ ಮೊತ್ತ
6.ಸಾಮಾನ್ಯ ಭವಿಷ್ಯ ನಿಧಿ ಮೊತ್ತ
7.ನಿವೃತ್ತಿ ಸ್ಥಳಕ್ಕೆ ಪ್ರಯಾಣ ಮಾಡಿದಾಗ ಉಂಟಾಗುವ ವೆಚ್ಚಗಳು[548ಎ]
2.ಸೇವೆಯಲ್ಲಿ ಮರಣ ಹೊಂದಿದಾಗ ದೊರೆಯುವ ಉಪಲಬ್ದಗಳು
1.ಕುಟುಂಬ ನಿವೃತ್ತಿ ವೇತನ
2.ಮರಣ ಉಪದಾನ
3.ಮರಣ ಹೊಂದಿದ ದಿನದಂದು ಉಳಿದಿರುವ ಗಳಿಕೆರಜೆ ನಗದೀಕರಣ ಸೌಲಭ್ಯ
5.ಸಾಮೂಹಿಕ ವಿಮಾ ಯೋಜನೆ ವಿಮಾನಿಧಿ & ಉಳಿತಾಯ ಮೊತ್ತ
6.ಸಾಮಾನ್ಯ ಭವಿಷ್ಯ ನಿಧಿ ಮೊತ್ತ
7.ಸ್ವಗ್ರಾಮಕ್ಕೆ ಪ್ರಯಾಣ ಮಾಡಿದಾಗ ಉಂಟಾಗುವ ವೆಚ್ಚಗಳು
ಸಾಮಾನ್ಯ ನಿವೃತ್ತಿ ವೇತನ ನಿಯಮಗಳು:
* ನಿವೃತ್ತಿ ವೇತನ ಎಂದರೆ ನಿವೃತ್ತಿ ವೇತನ ಹಾಗೂ ಸೇವಾ ಉಪದಾನ ಸೇರಿರುತ್ತದೆ.[208]
* ನಿವೃತ್ತಿ ವೇತನವನ್ನು ಮಂಜೂರು ಮಾಡುವ ಸಕ್ಷಮ ಪ್ರಾಧಿಕಾರಿ ಕಚೇರಿ ಮುಖ್ಯಸ್ಥರಾಗಿರುತ್ತಾರೆ[209]
* ನಿವೃತ್ತಿ ವೇತನ ಪಡೆಯಲು ಸರ್ಕಾರಿ ನೌಕರ ಒಳ್ಳೆಯ ನಡತೆಯನ್ನು ಹೊಂದಿರಬೇಕು
* ನಿವೃತ್ತಿ ವೇತನ ಪಡೆಯುವ ನೌಕರನು ಅಪರಾಧಿ ಅಥವಾ ತಪ್ಪಿತಸ್ಥನೆಂದು ತಿಳಿದು ಬಂದರೆ ನಿವೃತ್ತಿ ವೇತನವನ್ನು ತಡೆಯಿಡಿಯಬಹುದು ಅಥವಾ ಭಾಗಶಃ ಅಥವಾ ಸಂಪೂರ್ಣ ಹಿಂತೆಗೆದುಕೊಳ್ಳಬಹುದು.[213]
* ದುರ್ವತ್ರನೆಗಾಗಿ ಅಥವಾ ನಿರ್ಲಕ್ಷ್ಯಕ್ಕಾಗಿ ನಿವೃತ್ತ ವೇತನವನ್ನು ತಡೆಯಿಡಿಯಬಹುದು[214]
* ಕಡ್ಡಾಯ ನಿವೃತ್ತಿ ವಯಸ್ಸನ್ನು ತಲುಪಿ ಅಥವ ನಿವೃತ್ತಿ ದಿನಾಂಕದಂದು ಅಮಾನತ್ತು ಆದರೆ ಅವರಿಗೆ ತಾರ್ತ್ತೂತಿಕ ಪಿಂಚಣಿ ಮಂಜೂರು ಮಾಡಬೇಕು
ನಿವೃತ್ತಿ ವೇತನ ಪಾವತಿ ಸಿದ್ದಾಂತ
•ಆದರೆ ಮೇಲೆ ಪ್ರಸ್ತಾಪಿಸಿದ ಸಿದ್ದಾಂತಗಳು ಆಯಾ ರಾಷ್ಟ್ರದ ಸಂವಿಧಾನದ ಆಧಾರದ ಮೇಲೆ • ಬಗೆಹರಿಸಲ್ಪಡುತ್ತವೆ.
* ಕೆಲವೊಂದು ರಾಷ್ಟ್ರಗಳಲ್ಲಿ ಪಿಂಚಣಿಯನ್ನು ಹಕ್ಕೆಂದು ನ್ಯಾಯಲಯಗಳಲ್ಲಿ ಪ್ರತಿಪಾದಿಸಲಾಗುತ್ತಿದ
* ನಮ್ಮ ದೇಶದಲ್ಲಿ ಅನುಮೋದಿತ ಸರ್ಕಾರಿ ಸೇವೆಗೆ ಪಿಂಚಣಿ ನೀಡುವ ಕುರಿತು ಸರ್ಕಾರ ತನ್ನ ಆಧಿಕಾರವನ್ನು ಕಾಯ್ದಿರಿಸಿಕೊಂಡಿದೆ
ಕುಟುಂಬ ಪಿಂಚಣಿ:
ಕುಟುಂಬ ಎಂದರೆ ಸರ್ಕಾರಿ ನೌಕರನ ಕೆಳಕಂಡ ಸಂಬಂಧಿಗಳು
* ಪತ್ನಿ ಅಥವಾ ಪತಿ
* 18 ವರ್ಷ ವಯಸ್ಸು ತುಂಬಿರದ ಮಗ
* 21 ವರ್ಷ ವಯಸ್ಸು ತುಂಬಿರದ ಮಗಳು
ನಿವೃತ್ತಿ ದಿನಾಂಕಕ್ಕೆ ಮುಂಚೆ ಕಾನೂನು ಪ್ರಕಾರ ದತ್ತು ತೆಗೆದುಕೊಂಡಿರುವ ಮಗ ಮತ್ತು ಮಗಳು
ಅರ್ಹತಾದಾಯಕ ಸೇವೆ:ನಿ-220-243
ಸರ್ಕಾರಿ ಸೇವೆಯನ್ನು ಸಲ್ಲಿಸಿರಬೇಕು
* ಖಾಯಂ ನೌಕರನಾಗಿರಬೇಕು
* ಸಲ್ಲಿಸಿದ ಸೇವೆಗೆ ಸರ್ಕಾರ ಹಣ ಪಾವತಿಸಿರಬೇಕು
* ವಿವಿಧ ರಜೆಗಳ ಮೇಲೆ ಸಂಬಳ ಪಡೆದು ಕಳೆದ ಕಾಲವನ್ನು ಸೇವೆಯೆಂದು ಪರಿಗಣಿಸಬೇಕು[244]
* ಇತ್ಯರ್ಥವಾಗದ ರಜೆ ಮೀರಿದ ಅವಧಿ, ಸೇರುವಿಕೆ ಕಾಲ, ಅಮಾನತ್ತಿನ ಅವಧಿ ಅನಧಿಕೃತ ಗೈರುಹಾಜರಿ ಇವುಗಳನ್ನು ಅಸಾಧಾರಣ ರಜೆಯೆಂದು ಪರಿಗಣಿಸಿ 3 ವರ್ಷ ಮೀರಿದ ಅವಧಿಯನ್ನು ಅರ್ಹತಾದಾಯಕ ಸೇವೆಯಿಂದ ಕಡಿತಮಾಡಬೇಕು
ನಿವೃತ್ತಿ ವೇತನ ಪಾವತಿ ಸಿದ್ದಾಂತ
* ಆದರೆ ಮೇಲೆ ಪ್ರಸ್ತಾಪಿಸಿದ ಸಿದ್ದಾಂತಗಳು ಆಯಾ ರಾಷ್ಟ್ರದ ಸಂವಿಧಾನದ ಆಧಾರದ ಮೇಲೆ ಬಗೆಹರಿಸಲ್ಪಡುತ್ತವೆ.
* ಕೆಲವೊಂದು ರಾಷ್ಟ್ರಗಳಲ್ಲಿ ಪಿಂಚಣಿಯನ್ನು ಹಕ್ಕೆಂದು ನ್ಯಾಯಲಯಗಳಲ್ಲಿ ಪ್ರತಿಪಾದಿಸಲಾಗುತ್ತಿದ
* ನಮ್ಮ ದೇಶದಲ್ಲಿ ಅನುಮೋದಿತ ಸರ್ಕಾರಿ ಸೇವೆಗೆ ಪಿಂಚಣಿ ನೀಡುವ ಕುರಿತು ಸರ್ಕಾರ ತನ್ನ ಆಧಿಕಾರವನ್ನು ಕಾಯ್ದಿರಿಸಿಕೊಂಡಿದೆ
ಅರ್ಹತಾದಾಯಕ ಸೇವೆಯಲ್ಲಿ ಕಡಿತ ಮತ್ತು ಸೇರ್ಪಡೆ
ವಿವಿಧ ತರಬೇತಿಗಳಲ್ಲಿ ಕಳೆದ ಅವಧಿಯನ್ನು ಅರ್ಹತಾದಾಯಕ ಸೇವೆಗೆ ಪರಿಗಣಿಸಬೇಕು[246]
ಅಮಾನತ್ತಿನ ಅವಧಿಯನ್ನು ಅಮಾನತ್ತು ಎಂದು ಪರಿಗಣಿಸಿದ್ದಲ್ಲಿ ಅದನ್ನು ಅರ್ಹತಾದಾಯಕ ಸೇವೆಯಿಂದ ಕಡಿತಗೊಳಿಸಬೇಕು[250]
* ರಾಜೀನಾಮೆ, ಸೇವೆಯಿಂದ ವಜಾ ಮತ್ತು ತೆಗೆದು ಹಾಕಿರುವ ಅವಧಿ ಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುತ್ತದೆ
* ಮುನ್ಸಿಫ್ ಹುದ್ದೆಗೆ ನೇಮಕಗೊಂಡಾಗ 25 ವರ್ಷ ವಯಸ್ಸು ಮೀರಿದ್ದಾಗ ನೇಮಕವಾಗಿದ್ದರೆ ಗರಿಷ್ಟ 5 ವರ್ಷವನ್ನು ಅರ್ಹತಾದಾಯಕ ಸೇವೆಗೆ ಸೇರಿಸಬೇಕು[247[1]
ಕುಟುಂಬ ಪಿಂಚಣಿ ಪಾವತಿ ಕಾರ್ಯವಿಧಾನ
* ಅವಳಿ ಮಕ್ಕಳಿಗೆ ಕುಟುಂಬ ಪಿಂಚಣಿ ಸಂದಾಯ ಮಾಡಬೇಕಾದಲ್ಲಿ ಅದನ್ನು ಸಮವಾಗಿ ಪ್ರತಿಯೊಂದು ಮಗುವಿಗೂ ಹಂಚಬೇಕು
* ಸರ್ಕಾರಿ ನೌಕರನು ಸರ್ಕಾರಿ ಸೇವೆಗೆ ಸೇರಿದ ತಕ್ಷಣ ತನ್ನ ಕುಟುಂಬದ ವಿವರಗಳನ್ನು ನಮೂನೆ -ಎ ನಲ್ಲಿ ನೀಡಬೇಕು
* ಸೇವೆಗೆ ಸೇರುವಾಗ ಕುಟುಂಬವಿಲ್ಲದಿದ್ದರೆ ಮದುವೆಯಾದ ತಕ್ಷಣ ವಿವರಗಳ ಸಲ್ಲಿಸಬೇಕು
* ಮಾನಸಿಕ, ದೈಹಿಕ, ವಿಕಲತೆಯ ಮಕ್ಕಳಿದ್ದರೆ ಅದರ ವಿವರವನ್ನು ವೈದ್ಯಾಧಿಕಾರಿಗಳ ದೃಢೀಕರಣವನ್ನು ನಮೂನೆ-ಇ ನಲ್ಲಿ ಪಡೆದು ಸೇವಾವಹಿಗೆ ಲಗತ್ತಿಸಬೇಕು
ನಿವೃತ್ತಿಯ ನಂತರ ವಿವಾಹ:
* ನಿವೃತ್ತಿ ನಂತರ ಮದುವೆ ಮತ್ತು ಜನಿಸಿದ ಮಕ್ಕಳ ಕುರಿತು ನಮೂನೆ- ಎಫ್ ನಲ್ಲಿ ಮಾಹಿತಿಯನ್ನು ಕಚೇರಿ ಮುಖ್ಯಸ್ಥರಿಗೆ ತಿಳಿಸಬೇಕು
* ಇದರ ಜೊತೆ ಮದುವೆಯಾದ ಪ್ರಮಾಣ ಪತ್ರಗಳು ಜೋಡಿ ಭಾವ ಚಿತ್ರಗಳನ್ನು ಲಗತ್ತಿಸಿರಬೇಕು
ಕಚೇರಿ ಮುಖ್ಯಸ್ಥರು ಈ ಕುರಿತು ಮಾಹಾಲೇಖಪಾಲರಿಗೆ ಮಾಹಿತಿ
ನೀಡಬೇಕು
* ನಿವೃತ್ತಿ ಸಂದಾಯ ಆದೇಶದಲ್ಲಿ ತಿದ್ದುಪಡಿಗಳನ್ನು ಮಹಾಲೇಖಪಾಲರು ನಮೂದು ಮಾಡಿಕೊಂಡು ಹೊಸ ಸಂದಾಯ ಆದೇಶ ನೀಡುತ್ತಾರೆ.