‘ಉತ್ತರ ಪರ್ವ’ಕ್ಕೆ ಧಾರವಾಡ ಜಿಲ್ಲೆಯ 3 ಕೃತಿ ಆಯ್ಕೆ
ಧಾರವಾಡ : ಬೆಂಗಳೂರಿನ ವೀರಲೋಕ ಪ್ರಕಾಶನವು ‘ಉತ್ತರ ಪರ್ವ’ ಪ್ರಧಾನ ಶೀರ್ಷೀಕೆಯಡಿ ವಿಶೇಷವಾಗಿ ಉತ್ತರ ಕರ್ನಾಟಕ ಲೇಖಕರನ್ನೇ ಕೇಂದ್ರೀಕರಿಸಿ ಮೊದಲ ಹಂತದಲ್ಲಿ ಪ್ರಕಟಣೆಗೆ ಆಯ್ಕೆಯಾದ 10 ಲೇಖಕರ ಕೃತಿಗಳಲ್ಲಿ ಜಿಲ್ಲೆಯ 3 ಕೃತಿಗಳು ಆಯ್ಕೆಯಾಗಿವೆ.
ಧಾರವಾಡದ ಶ್ರೀಧರ ಗಸ್ತಿ ಅವರ ‘ಚಂದ್ರಾ ಲೇ-ಔಟ್’, ಹುಬ್ಬಳ್ಳಿಯ ಕವಿತಾ ಹೆಗಡೆ ಅಭಯಂ ಅವರ ‘ಇತ್ತ ಹಾಯಲಿ ಚಿತ್ತ’ ಹಾಗೂ ಕುಂದಗೋಳದ ಸಿ. ವ್ಹಿ. ವಿರೂಪಾಕ್ಷ ಅವರ ‘ಖದೀಜಾ’ ಕೃತಿಗಳು ಆಯ್ಕೆಯಾಗಿವೆ. ಉ.ಕ. ಭಾಗದ ಇತರೇ ಜಿಲ್ಲೆಗಳ ಕೃತಿಗಳು : ಶೇಕ್ಷಾವಲಿ ಮಣಿಗಾರ (ಕೃತಿ-‘ಆ ವದನ’), ಡಾ.ಸದಾಶಿವ ದೊಡಮನಿ(ಇರುಳ ಬಾಗಿಲಿಗೆ ಕಣ್ಣ ದೀಪ), ನವ್ಯ ಆರ್ ಕತ್ತಿ (ಮಾಯಾ ಗುಹೆ), ಪ್ರಕಾಶ ಗಿರಿಮಲ್ಲನವರ (ಜನನಾಯಕ), ಮರ್ತುಜಾಬೇಗಂ ಕೊಡಗಲಿ (ಪರಸ್ಪರ ಮತ್ತಿತರ ಕೃತಿಗಳು), ಬಿ.ಜೆ. ಪಾರ್ವತಿ ವಿ. ಸೋನಾರೆ (ಓಡಿ ಹೋದಾಕಿ), ರವೀಂದ್ರ ಮುದ್ದಿ (ವರದಾ ತೀರದ ಕಥೆಗಳು). ಈ ಹತ್ತೂ ಕೃತಿಗಳು ಈಗ ಮುದ್ರಣಗೊಂಡಿವೆ. ಆಯ್ಕೆ ಬಯಸಿ ಬಂದಿದ್ದ ನೂರಕ್ಕೂ ಹೆಚ್ಚು ಕೃತಿಗಳಲ್ಲಿ ರಾಜಶೇಖರ ಮಠಪತಿ(ರಾಗಂ) ನೇತೃತ್ವದ ಆಯ್ಕೆ ಸಮಿತಿ ಈ 10 ಕೃತಿಗಳನ್ನು ಅಖೈರುಗೊಳಿಸಿತು.
*ಲೋಕಾರ್ಪಣೆ* : ‘ಉತ್ತರ ಪರ್ವ’ ಯೋಜನೆಯ ಮೊದಲ ಹಂತದ 10 ಕೃತಿಗಳು ಭಾನುವಾರ (ಆಗಷ್ಟ-4 ರಂದು) ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಭವನದಲ್ಲಿ ಲೋಕಾರ್ಪಣೆಗೊಳ್ಳಲಿವೆ. ಅತಿಥಿಗಳಾಗಿ ಖ್ಯಾತ ಚಲನ ಚಿತ್ರ ನಿರ್ದೇಶಕ ಬಿ.ಸುರೇಶ, ಹಿರಿಯ ಸಾಹಿತಿ ರಾಜಶೇಖರ ಮಠಪತಿ(ರಾಗಂ), ಕರ್ಕಿ ಕೃಷ್ಣಮೂರ್ತಿ, ಮಧು ವೈ.ಎನ್, ಪ್ರಕಾಶಕ ವೀರಕಪುತ್ರ ಶ್ರೀನಿವಾಸ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ಇದೇ ಸಂಧರ್ಭದಲ್ಲಿ ಈ ಕೃತಿಗಳ ಲೇಖಕರನ್ನು ಗೌರವಿಸಲಾಗುವುದೆಂದು ವ್ಯವಸ್ಥಾಪಕ ಅನಂತ ಕುಣಿಗಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.