ಸ್ನೇಹ
ಸ್ನೇಹ ಇದು ಬರೀ ಪದವಲ್ಲ
ಜೀವನ ಮೌಲ್ಯ ಗಳ ಬೆಸುಗೆ
ಪರಸ್ಪರರ ನಡುವೆ ನಂಬಿಕೆ
ಮೂಡಿ ಬರಲು ಸ್ನೇಹ ಅಮರ
ಕೃಷ್ಣ ಸುಧಾಮರ ಸ್ನೇಹ ಅಜರಾಮರ
ನಿಷ್ಕಲ್ಮಶ ಮನಗಳ ಭಾವ
ಬಡವ ಬಲ್ಲಿದರೆನ್ನದ ಪ್ರೀತಿ
ಆತ್ಮ ಸಂಬಂಧ ಬೆರೆಸಿದ ಭಾವ
ಸ್ನೇಹ ವೆನಲು ಬಂದಿರುವ ಕಷ್ಟ ದೂರಾಗುವುದು
ಜಾತಿ ಮತ ಪಂಥಗಳ ಮೀರಿದ ಬಂಧ
ಬದುಕಿನ ಶ್ರೇಷ್ಠ ಉಡುಗೊರೆ ಸ್ನೇಹ
ಸ್ವಾರ್ಥವಿಲ್ಲದ ಪ್ರೀತಿ ಈ ಸ್ನೇಹ
ದೇಶ ಭಾಷೆ ಎಲ್ಲೆಯ ದಾಟಿ
ಬೆಳೆದ ಭಾವ ಮೀರಿದ ಬಂಧ
ಕಷ್ಟ ಸುಖಗಳ ಸಂಬಂಧ ಈ ಸ್ನೇಹ
ನೋವಿನಲಿ ನಲಿವು ತುಂಬಲು
ದುಃಖದ ಒಡಲಲಿ ಸಾಂತ್ವನ ನೀಡಲು
ನೋವ ಮರೆಸುತ ನಲಿವು
ಹರಸುತ ಜೊತೆಗೂಡುವ ಬಾಂಧವ್ಯ ಈ ಸ್ನೇಹ
ಶ್ರೀಮತಿ ಸುನೀತಾ ಸುರೇಶ ತೇಲಿ
ಚಿದಂಬರ ನಗರ
ಬೆಳಗಾವಿ