ನವೀಕೃತ ಗದಗ ಜಿಲ್ಲೆಯ. ಲಕ್ಷ್ಮೇಶ್ವರ ದಕ್ಷಿಣ ಸಂಪನ್ಮೂಲ ಕೇಂದ್ರದ ಉದ್ಘಾಟನೆ.
ಶೈಕ್ಷಣಿಕ ಮಟ್ಟ ಸುಧಾರಣೆ, ಶಿಕ್ಷಕರ ಜ್ಞಾನ ಹೆಚ್ಚಳ, ಇಲಾಖೆ ಕಾರ್ಯಕ್ರಮ ಸಮಾಲೋಚನೆ ಮತ್ತಿತರ ಮಹತ್ವದ ಉದ್ದೇಶ ಸಾಧನೆಯಲ್ಲಿ ಸಮೂಹ ಸಂಪನ್ಮೂಲ ಕೇಂದ್ರಗಳ ಪಾತ್ರ ಮಹತ್ವದ್ದು ಹಾಗಾಗಿ ದಕ್ಷಿಣ ಕ್ಲಸ್ಟರ್ನ ಸಮೂಹ ಸಂಪನ್ಮೂಲ ಕೇಂದ್ರದ ನವೀಕೃತಗೊಂಡ ಕೇಂದ್ರ ಈಗ ಕಂಗೊಳಿಸುತ್ತಿದೆ ಎಂದು ಪುರಸಭೆ ಸದಸ್ಯರಾದ ರಾಜು ಕುಂಬಿರವರು ಲಕ್ಷ್ಮೇಶ್ವರ ಪಟ್ಟಣದ ಸರ್ಕಾರಿ ಮಾದರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ನವೀಕೃತಗೊಂಡ ಲಕ್ಷ್ಮೇಶ್ವರ ದಕ್ಷಿಣ ಸಿ ಆರ್ ಸಿ ಕೇಂದ್ರದ ಮಕ್ಕಳ ಸ್ನೇಹಿ ಗ್ರಂಥಾಲಯ ಉದ್ಘಾಟಸಿ ಮಾತನಾಡಿದರು.
ಇದು ಶಿಕ್ಷಣ ಇಲಾಖೆಯ ಪ್ರತಿ ಕ್ಲಸ್ಟರ್ಗೆ ಒಂದು ಸಮೂಹ ಸಂಪನ್ಮೂಲ ಕೇಂದ್ರ ಸ್ಥಾಪಿಸಲಾಗಿದೆ ಹಾಗೂ ಇವು ಶಿಕ್ಷಕರ ತರಗತಿ ಪ್ರಕ್ರಿಯೆಯ ಸವಾಲುಗಳನ್ನು, ತರಗತಿ ಪ್ರಕ್ರಿಯೆಯ ನಾವೀನ್ಯತೆ ಕಲಿಯುವ ಸ್ಥಳವಾಗಿದೆ ಎಂದು ನೊಡಲ್ ಅಧಿಕಾರಿಯಾದ ಎಚ್ ಬಿ ರಡ್ಢೇರರವರು ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಹರ್ಷ ವ್ಯಕ್ತಪಡಿಸಿದರು.
ಲಕ್ಷ್ಮೇಶ್ವರ ಕ್ಲಸ್ಟರ್ ಸಂಪನ್ಮೂಲ ಕೇಂದ್ರವನ್ನು ಇಲ್ಲಿನ ಸಂಪನ್ಮೂಲ ವ್ಯಕ್ತಿ ಸತೀಶ್ ಬೋಮಲೆ ಅವರು ಕ್ಲಸ್ಟರಿನ ಎಲ್ಲಾ ಶಿಕ್ಷಕರ ಸಹಕಾರದಿಂದ ಹಾಗೂ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಆರ್ಥಿಕ ನೆರವಿನಿಂದಾಗಿ ಪುನಶ್ಚೇತನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹಾನಗಲ್ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿ ವಿ ಸಾಲಿಮಠರವರು ಮಾತನಾಡಿ ಸಂತಸ ವ್ಯಕ್ತಪಡಿಸಿದರು.
ಈ ಕೇಂದ್ರವು ಸರ್ಕಾರದ ಸುತ್ತೋಲೆಗಳು, ಗ್ರಂಥಾಲಯ ಪುಸ್ತಕಗಳು, ಶಿಕ್ಷಕರ ಕೈಪಿಡಿ, ಮಕ್ಕಳ ಕೈಪಿಡಿ, ಸರ್ಕಾರದ ನಿಯಮಾವಳಿಗಳು, ಜ್ಞಾನವನ್ನು ಹೆಚ್ಚಿಸುವ ಆಟಗಳು, ಶಿಕ್ಷಕರ ತರಗತಿ ಪ್ರಕ್ರಿಯೆ ಸರಳಗೊಳಿಸುವ ಪುಸ್ತಕಗಳು,ಸುಸಜ್ಜಿತ ಟೇಬಲ್, ಕುರ್ಚಿ, ಸ್ಮಾರ್ಟ್ ಟಿವಿ/ಕ್ಲಾಸ್, ಟ್ರಜುರಿ, ಕಂಪ್ಯೂಟರ್, ಪ್ರಿಂಟರ್, ಶಿಕ್ಷಕರ ಆನ್ಲೈನ್ ಸೇವೆಗಳ ಮಾಹಿತಿ, ಕ್ಲಸ್ಟರ್ ನಕ್ಷೆ, ಕ್ಲಸ್ಟರ್ ನ ಎಲ್ಲಾ ಶಾಲೆಗಳ ಸಂಪೂರ್ಣವಾದ ಮಾಹಿತಿಯನ್ನು ಒಳಗೊಂಡಿದೆ ಎಂದು
ನವೀಕೃತ ಲಕ್ಷ್ಮೇಶ್ವರ ದಕ್ಷಿಣ ಸಮೂಹ ಸಂಪನ್ಮೂಲ ಕೇಂದ್ರದ ಸವಿನೆನಪಿನ ಸಸಿ ನೆಟ್ಟು ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್ ಎನ್ ನಾಯಕ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷರು ಕರಾಪ್ರಾಶಾಶಿಸಂಘ ಬಿ ಎಸ್ ಹರಲಾಪುರ, ಕಾರ್ಯದರ್ಶಿ ಚಂದ್ರು ನೇಕಾರ, ಗೀತಾ ಹಳ್ಯಾಳ ಹಾಗೂ ಸದಸ್ಯರು, ಎಮ್ ಎ ನದಾಫ್, ಎಸ್ ಕೆ ಹವಾಲ್ದಾರ, ಪುರಸಭೆ ಸದಸ್ಯರಾದ ರಾಜಣ್ಣ ಕುಂಬಿ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಲ್ಲೇಶಪ್ಪ ಬಸಾಪೂರ, ಪೂರ್ಣಾಜೆ ಕರಾಟೆ, ಎ ಎಮ್ ಮಠದ, ಎನ್ ಆರ್ ಸಾತಪುತೆ, ಎನ್ ಎಚ್ ಗುಂಜಳ, ನಿಖಿತಾ ಶೇರಖಾನೆ , ಆರ್ ಎಮ್ ಶಿರಹಟ್ಟಿ, ಎಸ್ ವಿ ಅಂಗಡಿ, ಹರೀಶ್ ಸೇಂದ್ರಗಯಾ, ಉಮೇಶ್ ಹುಚ್ಚಯ್ಯಮಠ, ಎಮ್ ಎಮ್ ಹವಳದ, ಈಶ್ವರ ಮೆಡ್ಲೇರಿ, ಬಿ ಎಮ್ ಕುಂಬಾರ, ಬಸವರಾಜ ಯರಗುಪ್ಪಿ, ಆರ್ ಮಹಾಂತೇಶ, ಸತೀಶ ಬೋಮಲೆ, ಉಮೇಶ ನೇಕಾರ, ಎನ್ ಎ ಮುಲ್ಲಾ,ಎಮ್ ಎಸ್ ಹಿರೇಮಠ ಹಾಗೂ ತಾಲ್ಲೂಕಿನ ಎಲ್ಲಾ ಇಸಿಓ, ಬಿ ಆರ್ ಪಿ, ಸಿ ಆರ್ ಪಿ ಮತ್ತು ಎಲ್ಲಾ ಶೈಕ್ಷಣಿಕ ಸಂಘಗಳ ಪದಾಧಿಕಾರಿಗಳು, ಲಕ್ಷ್ಮೇಶ್ವರ ಉತ್ತರ ದಕ್ಷಿಣ ಕ್ಲಸ್ಟರನ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಉಪಸ್ಥಿತರಿದ್ದರು.
ಸತೀಶ್ ಬೋಮಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಚ್ ಡಿ ನಿಂಗರೆಡ್ಡಿ, ಸ್ವಪ್ನಾ ಕಾಳೆ, ಲಕ್ಷ್ಮಿ ಹತ್ತಿಕಟ್ಟಿ, ಅಕ್ಷತಾ ಕಾಟೆಗಾರ, ಆರ್ ಕೆ ಉಪನಾಳ ನಿರೂಪಿಸಿದರು. ಉಮೇಶ ನೇಕಾರ ವಂದಿಸಿದರು.