ಶಾಲೆಗೆ ಹೋಗುವುದನ್ನು ತಪ್ಪಿಸಲು ಈ ವಿದ್ಯಾರ್ಥಿ ಮಾಡಿದ ಉಪಾಯ ನೋಡಿ ಹೇಗಿದೆ??
ಮೂರು ಶಾಲೆಯ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ನೆಮ್ಮದಿ ಕಸಿದುಕೊಂಡ ವಿದ್ಯಾರ್ಥಿ…!!
ಇಂಥಹ ವಿದ್ಯಾರ್ಥಿಗಳು ಇರುತ್ತಾರೆಯೆ???
ನವದೆಹಲಿ: ದಕ್ಷಿಣ ದೆಹಲಿಯ ಕೈಲಾಶ ಕಾಲೋನಿಯಲ್ಲಿರುವ ಸಮ್ಮರ್ ಫೀಲ್ಡ್ ಶಾಲೆಗೆ ಶುಕ್ರವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಆದರೆ, ತನಿಖೆಯ ನಂತರ ಅದು ಸುಳ್ಳು ಎಂಬುದು ಎಂದು ಕಂಡುಬಂದಿದೆ. ಈ ಪ್ರಕರಣದಲ್ಲಿ 14 ವರ್ಷದ ವಿದ್ಯಾರ್ಥಿಯನ್ನು ಶಂಕಿತ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, 14 ವರ್ಷದ ಬಾಲಕ ಶಾಲೆಗೆ ಹೋಗಲು ಮನಸ್ಸಿಲ್ಲ ಕಾರಣ ಹಲವಾರು ಶಾಲೆಗಳಿಗೆ ಇಮೇಲ್ ಕಳುಹಿಸಿದ್ದಾನೆ.
ವಿಚಾರಣೆ ವೇಳೆ, ತಾನು ಶಾಲೆಗೆ ಹೋಗಲು ಇಷ್ಟಪಡದ ಕಾರಣ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಿರುವುದಾಗಿ ಬಾಲಕ ಬಹಿರಂಗಪಡಿಸಿದ್ದಾನೆ. ಇಮೇಲ್ ಅನ್ನು ಹೆಚ್ಚು ವಿಶ್ವಾಸಾರ್ಹವಾಗಿ ಕಾಣುವಂತೆ ಮಾಡಲು, ಆತ ಸಂದೇಶದಲ್ಲಿ ಎರಡು ಹೆಚ್ಚುವರಿ ಶಾಲೆಗಳನ್ನು ಉಲ್ಲೇಖಿಸಿದ್ದಾನೆ. ದೆಹಲಿ ಪೊಲೀಸರು ಪ್ರಕರಣವನ್ನು ಸಕ್ರಿಯವಾಗಿ ತನಿಖೆ ನಡೆಸುತ್ತಿದ್ದಾರೆ.
ದೆಹಲಿಯ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ
ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್ ಪ್ರದೇಶದ ಖಾಸಗಿ ಶಾಲೆಗೆ ಇ ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಶುಕ್ರವಾರ, ಇಮೇಲ್ ಸ್ವೀಕರಿಸಿದ ತಕ್ಷಣ, ದೆಹಲಿಯ ಸಮ್ಮರ್ ಫೀಲ್ಡ್ ಶಾಲೆಯ ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ವಿವರಗಳ ಪ್ರಕಾರ, ಶುಕ್ರವಾರ ರಾತ್ರಿ 12:30 ಕ್ಕೆ ಇಮೇಲ್ ಬಂದಿದೆ. ಆದರೆ, ಬೆಳಗ್ಗೆ ಶಾಲೆ ತೆರೆದ ನಂತರವೇ ಅಧಿಕಾರಿಗಳು ಇಮೇಲ್ ಅನ್ನು ಗಮನಿಸಿದ್ದಾರೆ.ಇಮೇಲ್ ಕುರಿತು ಮಾತನಾಡಿದ ಶಾಲೆಯ ಪ್ರಾಂಶುಪಾಲರಾದ ಶಾಲಿನಿ ಅಗರ್ವಾಲ್, ಅಧಿಕಾರಿಗಳು ಇಮೇಲ್ ನೋಡಿದ 10 ನಿಮಿಷಗಳಲ್ಲಿ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಯಿತು.
ಬಾಂಬ್ ಸ್ಕ್ವಾಡ್ನಿಂದ ಶಾಲೆಯ ಆವರಣವನ್ನು ಪರಿಶೀಲಿಸಲಾಯಿತು ಎಂದು ಅವರು ಹೇಳಿದರು. ಮತ್ತು ಸಂಪೂರ್ಣ ತಪಾಸಣೆಯ ನಂತರ ಅನುಮಾನಾಸ್ಪದವಾಗಿ ಏನೂ ಪತ್ತೆಯಾಗದ ಕಾರಣ ಅದು ಹುಸಿ ಬೆದರಿಕೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಮಧ್ಯರಾತ್ರಿಯ ಹೊತ್ತಿಗೆ ಶಾಲೆಗೆ ಇ-ಮೇಲ್ ಬಂದಿತ್ತು. ಶಾಲೆಯ ಆವರಣದಲ್ಲಿ ಬಾಂಬ್ ಇಡಲಾಗಿದೆ ಎಂದು ಇಮೇಲ್ನಲ್ಲಿ ತಿಳಿಸಲಾಗಿತ್ತು ಎಂದು ಅವರು ಹೇಳಿದರು.