PST ಪದವೀಧರ ಶಿಕ್ಷಕರ C & R ತಿದ್ದುಪಡಿ,ನೌಕಕರಿಗೆ ಓಪಿಎಸ್ ಜಾರಿ ಮಾಡುವಂತೆ ಸೇರಿದಂತೆ ಪ್ರಮುಖ ಬೇಡಿಕೆ ಈಡೆರಿಸುವಂತೆ ಆಗ್ರಹಿಸಿ ನೌಕರರ ಬೃಹತ್ ಮನವಿ ಸಮರ್ಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ..
ನಮ್ಮ ಅಭಿಮಾನದ ಅಭಿನಂದನಾ ಸಮಾರಂಭಕ್ಕೆ ಸಿದ್ದವಾದ ನೌಕರರ ಸಂಘ…
ಅಗಸ್ಟ್ ಒಂದರಿಂದ ಏಳನೇ ವೇತನ ಆಯೋಗ ಜಾರಿ..
ಬೆಂಗಳೂರು: ರಾಜ್ಯ ಸರ್ಕಾರ ಇದೇ ಅಗಸ್ಟ್ 1 ರಿಂದ ಏಳನೇ ವೇತನ ಆಯೋಗ ಜಾರಿ ಮಾಡಿವುದಾಗಿ ಈಗಾಗಲೇ ಘೋಷಿಸಿದೆ..ಇದು ಸಂತಸದ ವಿಷಯ, ಆದ್ರೆ ಇದರ ಜೊತೆಗೆ ನೌಕರರ ಪ್ರಮುಖ ಬೇಡಿಕೆಯಾಗಿರುವ ಓಪಿಎಸ್ ಮರು ಜಾರಿ, ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಮಾಡಬೇಕು, ಸೇರಿದಂತೆ ಪ್ರಸ್ತುತ ಶಿಕ್ಷಕರಿಗೆ ಹಿಂಬಡ್ತಿ ಯಾಗಿರುವ ಬಗ್ಗೆ ಸರ್ಕಾರದ ಗಮನ ಸೆಳೆಯಲು ನೌಕರರ ಸಂಘ ಸಿದ್ದವಾಗಿದೆ.
ಹೌದು.ದಿನಾಂಕ: 17-08-2024ನೇ ಶನಿವಾರ ಬೆಳಗ್ಗೆ: 10.00ಕ್ಕೆ ಸ್ಥಳ: ತ್ರಿಪುರವಾಸಿನಿ, ಮೇಕ್ರಿ ಸರ್ಕಲ್ ಹತ್ತಿರ, ಅರಮನೆ ಮೈದಾನ, ಬೆಂಗಳೂರಿನಲ್ಲಿ
ಕಾರ್ಯಾಗಾರ ಮತ್ತು ಸರ್ಕಾರಕ್ಕೆ ಮನವಿ ಸಮರ್ಪಣೆ ಕಾರ್ಯದವನ್ನು ಹಮ್ಮಿಕೊಳ್ಳಲಾಗಿದೆ.
ವಿಷಯ: ಒಪಿಎಸ್ ಯೋಜನೆಯನ್ನು ಮರು ಸ್ಥಾಪಿಸುವಲ್ಲಿ ರಾಷ್ಟ್ರ ಮಟ್ಟದ ಬೆಳವಣಿಗೆಗಳು
ಹಳೇ ಪಿಂಚಣಿ ಯೋಜನೆ ಮರು ಜಾರಿ
ಆರೋಗ್ಯ ಸಂಜೀವಿನಿ ಯೋಜನೆ ಜಾರಿ
PST ಪದವೀಧರ ಶಿಕ್ಷಕರ C & R ತಿದ್ದುಪಡ
PST ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ C & R ನಿಯಮಗಳ ತಿದ್ದುಪಡಿ ಬಗ್ಗೆ
ಸಮಸ್ತ ನೌಕರರಿಗೆ ಆತ್ಮೀಯ ಸ್ವಾಗತ ಬನ್ನಿ… ಭಾಗವಹಿಸಿ… ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ನೌಕರರ ಸಂಘದ ರಾಜ್ಯಾದ್ಯಕ್ಷರಾದ ಸಿ.ಎಸ್.ಷಡಕ್ಷರಿ ತಿಳಿಸಿದ್ದಾರೆ..
ವಿಶೇಷ ಸೂಚನೆ..
ಕಾರ್ಯಾಗಾರದಲ್ಲಿ ಭಾಗವಹಿಸುವ ನೌಕರರಿಗೆ
ಓ.ಓ.ಡಿ. ಸೌಲಭ್ಯವಿದೆ..
ರಾಜ್ಯಾಧ್ಯಕ್ಷರು, ರಾಜ್ಯ ಸಂಘದ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರು, ಜಿಲ್ಲೆಯ ಕಾರ್ಯದರ್ಶಿ, ಖಜಾಂಚಿ, ರಾಜ್ಯ ಪರಿಷತ್ ಸದಸ್ಯರು, ತಾಲ್ಲೂಕು/ಯೋಜನಾ ಶಾಖೆಯ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ, ರಾಜ್ಯ ಪರಿಷತ್ ಸದಸ್ಯರು, ಜಿಲ್ಲಾ-ತಾಲ್ಲೂಕು-ಯೋಜನಾ ಶಾಖೆಯ ಎಲ್ಲಾ ಪದಾಧಿಕಾರಿಗಳು ಮತ್ತು ನಿರ್ದೇಶಕರು, ರಾಜ್ಯದ ಎಲ್ಲಾ ಇಲಾಖೆಗಳ ವೃಂದ ಸಂಘಗಳ ಅಧ್ಯಕ್ಷರು-ಪದಾಧಿಕಾರಿಗಳು. ನೌಕರರನ್ನು ಸ್ವಾಗತಿಸಿದ್ದಾರೆ..