ಶಿಗ್ಲಿ ಗ್ರೂಪ್ ಮಟ್ಟದ ಕ್ರೀಡಾಕೂಟ ಉದ್ಘಾಟನೆ
2024 -25 ನೇ ಸಾಲಿನ ಶಿಗ್ಲಿ ಗ್ರೂಪ್ ಮಟ್ಟದ ಕ್ರೀಡಾಕೂಟವನ್ನು ಸರಕಾರಿ ಮಾದರಿ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆ ಶಿಗ್ಲಿ ಯವರು ಆಯೋಜನೆ ಮಾಡಿದ್ದು, ಈ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು SDMC ಅಧ್ಯಕ್ಷರಾದ ಶ್ರೀ ವೀರಣ್ಣ ಅಳ್ಳಳ್ಳಿಯವರು ವಹಿಸಿದ್ದರು, ಕ್ರೀಡಾಕೂಟದ ಧ್ವಜಾರೋಹಣವನ್ನು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ದುಂಡವ್ವ ಹಾದಿಮನಿಯವರು, ಕ್ರೀಡಾ ಜ್ಯೋತಿಯನ್ನು ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಶ್ರೀ ಎಸ್ ಪಿ ಬಳಿಗಾರ ರವರು, ಕ್ರೀಡಾಕೂಟದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಯಲ್ಲಪ್ಪ ತಳವಾರ್ ರವರು ಗುಂಡು ಎಸೆಯುವದರ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಬಿ ವೈ ಹುನಗುಂದ್ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರು, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಎಚ್ ಎನ್ ನಾಯಕ್ ರವರು, ದೈಹಿಕ ಶಿಕ್ಷಣಾಧಿಕಾರಿಗಳಾದ ಶ್ರೀ ಎಂ ಎಂ ಹವಳದರವರು, ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶ್ರೀಮತಿ ಶೈಲಾ ಜನಿವಾರದರವರು ಗ್ರಾಮ ಪಂಚಾಯತ್ ಸದಸ್ಯನಿಯರಾದ ಶ್ರೀಮತಿ ಮಹಾದೇವಕ್ಕ ತಳವಾರ್, ಶ್ರೀಮತಿ ಜಯಶ್ರೀ ಬ ಕರ್ಜಗಿ, ಶ್ರೀಮತಿ ಲಲಿತಾ ಮಂ ತವರಿ, ಶ್ರೀಮತಿ ರೇಣುಕಾ ಲ ಆತಡಕರ ರವರು , ಶ್ರೀ ಎಸ್ ಎಸ್ ಕೂಡ್ಲಮಠ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಸಿ ಬಿ ಮೊಗಲಿ ಅವರು, ನಿವೃತ್ತ ಪ್ರಧಾನ ಗುರುಮಾತೆಯರಾದ ಶ್ರೀಮತಿ ಡಿ ಎಫ್ ಪಾಟೀಲ್, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಜ್ಯೋತಿ ಗಾಯಕ್ವಾಡ್, ದೈಹಿಕ ಶಿಕ್ಷಕರಾದ ಶ್ರೀ ದ್ಯಾಮನಗೌಡ್ರು, ಶ್ರೀ ವೀರಣ್ಣ ಅಕ್ಕೂರ, ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನು ಶಾಲೆಯ ಪ್ರಧಾನ ಗುರುಗಳಾದ ಶ್ರೀ A D ಸೋಮನಕಟ್ಟಿ ಯವರು ಸ್ವಾಗತಿಸಿದರು, ಶಾಲೆಯ ದೈಹಿಕ ಶಿಕ್ಷಕರಾದ ಶ್ರೀ ಪಿಎ ಕೊರವರ್ ರವರು ಕ್ರೀಡಾಪಟುಗಳಿಗೆ ಬೋಧಿಸಿದರು, ಕಾರ್ಯಕ್ರಮವನ್ನು ಶ್ರೀ ಜಿಪಿ ನಾವಿ ಶಿಕ್ಷಕರು ಹಾಗೂ ಶ್ರೀಮತಿ ಶೋಭಾ ಲಮಾಣಿ ಗುರುಮಾತಿಯರು ನಿರೂಪಿಸಿದರು, ಶಾಲೆಯ ಎಲ್ಲಾ ಗುರು ಮಾತಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.