ಹಾಲಿ ಸೇವಾ ನಿರತ ಪದವೀಧರ PST ಶಿಕ್ಷಕರನ್ನು GPT ಶಿಕ್ಷಕರೆಂದು ಪರಿಗಣಿಸಿ, PST ಮತ್ತು GPT ಕ್ಯಾಡರ್ ಗಳನ್ನು ಸಮಾನಂತರ ಕ್ಯಾಡರ್ ಗಳಾಗಿ ಪರಿಗಣಿಸಿ, ಮು.ಶಿ.ಬಡ್ತಿ ನೀಡುವುದು ವೈಜ್ಞಾನಿಕವಾಗಿ, ಶೈಕ್ಷಣಿಕ ಗುಣಾತ್ಮಕತೆಯ ದೃಷ್ಟಿಯಿಂದ ಅತ್ಯಂತ ಉತ್ತಮ ತೀರ್ಮಾನವಾಗುವುದಕ್ಕೆ ಕಾರಣಗಳು👇🏿👇🏿👇🏿👇🏿👇🏿👇🏿👇🏿👇🏿
KAT ಸದ್ಯ ನಿರೂಪಿತಗೊಂಡ, ಚಾಲ್ತಿಯಲ್ಲಿರುವ ವೃಂದ ಮತ್ತು ಬಡ್ತಿ ನಯಮಗಳನ್ನು ಅನುಸರಿಸಿಯೇ ತೀರ್ಪು ನೀಡೋದು ಸಹಜ. ಮುಖ್ಯವಾಗಿ ಸರಕಾರಕ್ಕೆ ಈ ಕೆಳಗಿನ ಅಂಶಗಳನು ಮನವರಿಕೆ ಮಾಡಿ, ಈ ಕೂಡಲೇ c and r ಗೆ ಮಾರ್ಪಾಡು ತರುವುದೇ ಇದಕ್ಕೆ ಪರಿಹಾರ:
ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ, ‘ಸಮಗ್ರ ಶಾಲಾ ಶಿಕ್ಷಣ ದೃಷ್ಟಿಕೋನ’ ದ ಅಗತ್ಯತೆಯನ್ನು ಪ್ರತಿಪಾದಿಸುತ್ತಾ, ಸದ್ಯ ಬಿಡಿ ಬಿಡಿಯಾಗಿ ನಿರೂಪಿತಗೊಂಡಿರುವ, ಹಾಗೂ ಸದ್ಯದ ವಾಸ್ತವ ಸ್ಥಿತಿಗತಿಗಳೊಂದಿಗೆ ಸಮನ್ವಯ ಸಾಧ್ಯವಾಗದ ಪ್ರಸ್ತುತ ವೃಂದ ಮತ್ತು ನೇಮಕಾತಿ ನಿಯಮಾವಳಿಗಳನ್ನು, ನೂತನ ರಾಷ್ಟ್ರೀಯ ಶಿಕ್ಷಣ ನೀತಿಗಳೊಂದಿಗೆ ಸಂಯೋಜಿಸಿ ಸಮಗ್ರವಾಗಿ ಮರು ಪರಿಷ್ಕರಣೆಗೊಳಪಡಿಸಿ, 5+3+3+4 ವ್ಯವಸ್ಥೆಗೆ ಹೊಂದಿಸಬೇಕೆಂಬ ಮನವಿಯನ್ನು ಈ ಕೆಳಕಂಡ ಪೂರಕ ಅಂಶಗಳೊಂದಿಗೆ ಸಾದರ ಪಡಿಸುತ್ತೇನೆ…..
ಹಾಲಿ ಸೇವಾ ನಿರತ ಪದವೀಧರ ಪಿ.ಎಸ್.ಟಿ. ಶಿಕ್ಷಕರನ್ನು ಜಿ.ಪಿ.ಟಿ. ಶಿಕ್ಷಕ ವೃಂದದಲ್ಲ್ಲಿ ವಿಲೀನಗೊಳಿಸುವ ವಿಚಾರ:
1. ಕೇಂದ್ರ ಅಧಿಸೂಚಿತ *‘ಶಿಕ್ಷಣ ಹಕ್ಕು ಕಾಯಿದೆ-2019’ ರ ಅನುಷ್ಠಾನಕ್ಕೆ, ಹಂತ ಹಂತವಾಗಿ ಗುಣಾತ್ಮಕದೆಡೆ ಸಾಗಲು ಅದು ನಿಗದಿಪಡಿಸಿದ ಕಾಲ ಸೂಚಿಗಳನ್ನು ಸರಕಾರ ಕಾಣಬೇಕಿದೆ. 2010, 2012 ರಲ್ಲಿ ಶಿಕ್ಷಣ ಹಕ್ಕು ನಿಯಮ ರಚಿಸಿಕೊಂಡ ನಮ್ಮ ರಾಜ್ಯದಲ್ಲೂ ವರ್ತಮಾನದ ವ್ಯವಸೆ ಅನುಲಕ್ಷಿಸಿ ವೃಂದ ಮತ್ತು ನೇಮಕಾತಿ, ಶಾಲೆಗಳ ಉನ್ನತೀಕರಣ ಹಾಗೂ ಪುನರಚನೆ ಮುಂತಾದ ಸೂತ್ರಗಳನ್ನು ರಚಿಸಬೇಕಾಗಿದೆ. ಜಾರಿಗೆ ತಂದ ಸದರಿ ಕಾನೂನುಗಳ ಪ್ರಕಾರ 3-4 ವರುಷಗಳಲ್ಲಿ ಇವುಗಳನ್ನು ಸಂರಚಿಸಬೇಕಿತ್ತು. ಮುಂದುವರೆದು ಅದೇ ಕಾನೂನುಗಳು ಸೂಚಿಸುವಂತೆ, ಸದ್ಯ ಶಾಲೆಗಳಲ್ಲಿ *ಸೇವಾ ನಿರತ ಶಿಕ್ಷಕರಿಗೆ ಎನ್.ಸಿ.ಟಿ.ಇ. ನಿಗದಿಪಡಿಸಿದ ಅಗತ್ಯ ಅರ್ಹತೆ ಲಭಿಸಲು 3-4 ವರುಷಗಳ ಕಾಲಮಿತಿ ನೀಡಿ ಪಿ.ಎಸ್.ಟಿ ಹಾಗೂ ಜಿ.ಪಿ.ಟಿ. ಹುದ್ದೆಗಳಲ್ಲಿ ಸಮನ್ವಯತೆ ಸಾಧಿಸಬಹುದಿತ್ತು. ವೃಂದ ಮತ್ತು ನೇಮಕಾತಿ ಸಮಗ್ರ ನಿಯಮ ರೂಪಿಸದೆ, ಜಿ.ಪಿ.ಟಿ. , ಟಿ.ಜಿ.ಟಿ., ಹುದ್ದೆಗಳನ್ನು ಸೃಜಿಸಿ , ಕನಿಷ್ಠ ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಸಲು ಸಮರ್ಥ ಯೋಜನೆ ಇರಲಾರದ್ದು ಶೈಕ್ಷಣಿಕ ಗುಣಾತ್ಮಕತೆಗೆ*ಹಿನ್ನಡೆಯನ್ನುಂಟು ಮಾಡಿದೆ. ಜಿ.ಪಿ.ಟಿ. ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ಕನಿಷ್ಠ ಅಧಿಸೂಚಿದಷ್ಟೂ ಅಭ್ಯರ್ಥಿಗಳು ಲಭ್ಯವಾಗದ್ದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಒಂದೊಂದು ನೇಮಕಾತಿಗಳು ಪ್ರಕ್ರಿಯೆಗೊಂಡು ಪೂರ್ಣಗೊಳ್ಳಲು ತೆಗೆದುಕೊಳ್ಳುವ ಸಮಯ, ತೀವ್ರ ಗತಿಯಲ್ಲಿ ಮಾರ್ಪಾಡಾಗುತ್ತಿರುವ ನೀತಿ ನಿಯಮಗಳ ನಡುವೆ ವ್ಯತ್ಯಾಸಗಳ ದೊಡ್ಡ ಕಂದಕಗಳನ್ನು ಕಾಣಬಹುದಾಗಿದೆ. ಹಾಗಾಗಿ ಈಗ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ , ಬದಲಾವಣೆ ಕ್ರಿಯೆಯಲ್ಲಿ ಕ್ರಿಯಾಶೀಲ ಪಾಲುದಾರರಾದ ಸೇವಾ ನಿರತ ಶಿಕ್ಷಕರನ್ನು ಸಬಲೀಕರಣಗೊಳಿಸಿ, ಟಿ.ಇ.ಟಿ., ಸ್ಕ್ರೀನ್ ಟೆಸ್ಟ್ ಮುಖೇನ ಎನ್.ಸಿ.ಟಿ.ಇ. ನಿಗದಿಪಡಿಸಿದ ಅರ್ಹ ಪದವೀದರ ಪಿ.ಎಸ್.ಟಿ. ಶಿಕ್ಷಕರನ್ನು ಜಿ.ಪಿ.ಟಿ. ಅಂತಾ ಪರಿಗಣಿಸಿ ಸಮನ್ವಯತೆ ಸಾಧಿಸಿ ಗುಣಾತ್ಮಕ ಶಿಕ್ಷಣದೆಡೆಗಿನ ಪಯಣ ಚುರುಕುಗೊಳಿಸಬಹುದಾಗಿದೆ. ಅನುಭವಿಕ ಅರ್ಹ ಶಿಕ್ಷಕರ ಲಭ್ಯತೆಯಿಂದ ಇದು ಸಾಧ್ಯವಾಗಬಹುದಾಗಿದೆ. ಹೊಸದಾಗಿ ರಚಿತವಾದ ಇಡೀ ಒಂದು ವೃಂದವನ್ನೇ ವಿಲೀನಗೊಳಿಸುವುದೆಂದು ಭಾವಿಸದೆ, ಇದು ಈ ಪೂರ್ವ ಸೇವಾ ನಿರತರ ವೃಂದವೆಂದೇ ಪರಿಗಣಿಸಬೇಕು. ಹಾಗೇ ನಿರುದ್ಯೋಗ ಸೃಷ್ಟಿಯಾಗುವುದೆಂಬ ಮಾತೇ ಇಲ್ಲಿ ಬರದು. ಯಾಕೆಂದರೆ ಇಲ್ಲಿ ಯಾವ ಹುದ್ದೆಯನ್ನೂ ಕಸಿಯುತ್ತಿಲ್ಲ ಬದಲಾಗಿ ರಚನಾತ್ಮಕವಾಗಿ ಬದಲಾಯಿಸಲಾಗುತ್ತಿದೆ. *ನೂತನ ರಾಷ್ಟ್ರೀಯ ನೀತಿಯೂ 5+3+3+4 ಈ ಹಂತಗಳ ಸಂರಚನೆಯಲ್ಲೂ ಯಾವ ಹಂತದ ಶಿಕ್ಷಕ ವೃತ್ತಿಯೂ ಮೇಲು ಕೀಳಲ್ಲ ಎಂದು ಉಲ್ಲೇಖಿಸುವುದಲ್ಲದೇ, ಬುನಾದಿ ಹಂತದ ಕಲಿಕೆಯಿಂದ ಹಿಡಿದು ಪ್ರೌಢ ಹಂತದ ಕಲಿಕೆಗೆ ಅನುಕೂಲಿಸಲು ಉನ್ನತ ಶಿಕ್ಷಣ ಪಡೆದ ಶಿಕ್ಷಕರ ಅಗತ್ಯತೆಯನ್ನು ಒತ್ತಿ ಹೇಳುವುದು.
2. ಈಗಾಗಲೇ ಹಲವಾರು ಸಂದರ್ಭಗಳಲ್ಲಿ ವೃಂದ ಮತ್ತು ನೇಮಕಾತಿ ನಿಯಮ ಪರಿಷ್ಕರಣೆಗೊಂಡ ಸಂದರ್ಭದಲ್ಲಿ (ಉದಾಹರಣೆ ಪಿಯು ಕಾಲೇಜು ಉಪನ್ಯಾಸಕರಿಗೆ ಬಿ.ಇಡಿ. ಕಡ್ಡಾಯ, ಪದವಿ ಕಾಲೇಜು ಪ್ರಾಧ್ಯಾಪಕರಿಗೆ ಪಿ.ಎಚ್.ಡಿ. ವ್ಯಾಸಂಗ ಕಡ್ಡಾಯ) *ಹಾಲಿ ಸೇವಾ ನಿರತ ಸರಕಾರಿ ನೌಕರರಿಗೆ ಸಂವಾದಿ ಪದವಿ ಹಾಗೂ ಅರ್ಹತೆ ಗಳಿಸಲು ಅವಕಾಶ ನೀಡಿರುವುದನ್ನು* ಗಮನಿಸಬಹುದಾಗಿದೆ. ಇದರಂತೆ ಈಗಾಗಲೇ *15-20 ವರುಷಗಳಿಂದಲೂ 1 ರಿಂದ 8 ನೇ ತರಗತಿಗಳಿಗೆ ಅವ್ಯಾಹತವಾಗಿ ಕಲಿಕಾ ಮಾರ್ಗದರ್ಶನ* ಗೈಯ್ಯುತ್ತಿರುವ ಅರ್ಹ ಪದವೀಧರ ಪಿ.ಎಸ್.ಟಿ. ಶಿಕ್ಷಕರಿಗೆ ಅವಕಾಶ ನೀಡಿ. ಜಿ.ಪಿ.ಟಿ. ಶಿಕ್ಷಕರಾಗಿ ಅವರನ್ನು ವಿಲೀನಗೊಳಿಸಿ, ಮಿಕ್ಕುಳಿದ ಅಥವಾ ಮುಂದಿನ ನೇಮಕಾತಿಗಳಿಗೆ ಮಾತ್ರ ಪ್ರಸ್ತುತ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಅನ್ವಯಿಸಬಹುದಾಗಿದೆ. ಇಲ್ಲದಿದ್ದರೆ, ನೈತಿಕತೆ ಮತ್ತು ಮಾನವೀಯತೆಗೆ ಹಿನ್ನಡೆಯಾಗಿ ಶ್ರಮ ಗೌರವಕ್ಕೆ ಧಕ್ಕೆಯಾದಂತಾಗುತ್ತದೆ. ಮೇಲಾಗಿ ಸೆಂಟ್ರಲ್ *RTE act 35 of 2009 CHAPTER-IV 23 ನೇ* ಅಂಶದಲ್ಲಿ ಈಗಾಗಲೇ ಹಾಲಿ ಸೇವಾ ನಿರತ ಶಿಕ್ಷಕರಿಗೆ ಸಬ್ ಸೆಕ್ಷನ್ (1) ರಂತೆ ಅರ್ಹತೆ ಇರದೇ ಇದ್ದಲ್ಲಿ ಅಂತವರಿಗೆ ಅರ್ಹತೆ ಗಳಿಸಲು 5 ವರ್ಷ ಸಮಯಾವಕಾಶ ನೀಡಿ, ಅವರನ್ನು ಜಿ.ಪಿ.ಟಿ. ಶಿಕ್ಷಕರಾಗಿ ಪರಿಗಣಿಸಬಹುದೆಂದು ತಿಳಿಸಿರುವುದು ಉಲ್ಲೇಖಾರ್ಹವಾಗಿದೆ.
3. ಗುಣಾತ್ಮಕ ಶಿಕ್ಷಣಕ್ಕಾಗಿ, *ಎನ.ಸಿ.ಟಿ.ಇ.* ಸೂಚಿಸಿರುವ ಶಿಕ್ಷಕರ ಕನಿಷ್ಠ ಅರ್ಹತೆ ಸೂಕ್ತವಾಗಿದೆ. ಮತ್ತು ಅದು *ಶಿಕ್ಷಕರ ಕನಿಷ್ಠ ಅರ್ಹತೆಯನ್ನು ನಿಗದಿಪಡಿಸುವ ದೇಶದ ಅಧಿಕೃತವಾದ ಸಂಸ್ಥೆಯಾಗಿದೆ.* ಆದರೆ ಅಷ್ಟು ಕಠಿಣತಮ ಅಧ್ಯಯನಪೇಕ್ಷೆಯ ಪರೀಕ್ಷೆ ಎದುರಿಸಿ ಯಶಸ್ವಿಯಾಗಲು, ನಂತರ ಲಭ್ಯವಾಗುವ ಸಾಮಾಜಿಕ ಗೌರವ, ಹಾಗೂ ಆಕರ್ಷಕ ವೇತನ ನೀಡಿಕೆಯ ಅಂಶಗಳೂ ಮುಖ್ಯವೆನಿಸುತ್ತವೆ. ಇಲ್ಲದಿದ್ದರೆ, ಪ್ರತಿಭೆಗಳು *ಆಕರ್ಷಕ ವೇತನ, ಅಧಿಕಾರದ ಹುದ್ದೆಗಳತ್ತ* ಮುಖ ಮಾಡುವುದು ಸಹಜವಾಗಿದೆ. ಈ ಅಂಶವನ್ನು ಕಳೆದ ಎರಡು ಮೂರು ಬಾರಿಯ *ಜಿ.ಪಿ.ಟಿ. ನೇಮಕಾತಿ ಸಂದರ್ಭದಲ್ಲಿ ಅಧಿಸೂಚಿಸಿದಷ್ಟೂ ಅರ್ಹ ಅಭ್ಯರ್ಥಿಗಳು ಲಭ್ಯವಾಗದಿರುವುದರಲ್ಲಿ* ಕಾಣಬಹುದಾಗಿದೆ. KAS/IAS ನೇಮಕಾತಿ ನಿಯಮಗಳಿಗಿಂತಲೂ ಹೆಚ್ಚಿನ ಫಿಲ್ಟರ್ ಗಳು *(ಶಿಕ್ಷಕ ಕೋರ್ಸ್ ಸಿ.ಇ.ಟಿ.,ಟಿ.ಇ.ಟಿ., ಮತ್ತೆ ನೇಮಕಾತಿ ಸಿ.ಇ.ಟಿ., ಕನಿಷ್ಠ ಅಂಕ ನಿಗದಿ..)* ಶಿಕ್ಷಕ ನೇಮಕಾತಿಗಳಿಗೆ ಇರುವುದರಿಂದ ಹುದ್ದೆ ತನ್ನ *ಆಕರ್ಷಕ ಗುಣ ಕಳೆದುಕೊಳ್ಳುತ್ತದೆ.* ಸಹಜವಾಗಿಯೆ ಇದು *ಶೈಕ್ಷಣಿಕ ಗುಣಮಟ್ಟವನ್ನು ಕಸಿಯುತ್ತದೆ.* ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಶಿಕ್ಷಕರಿಗೆ ಆಕರ್ಷಕ ವೇತನ ನಿಗದಿಪಡಿಸಲು ಸಾಧ್ಯವಾಗದ ಸ್ಥಿತಿಯಿರುವುದರಿಂದ ಹಾಲಿ *ಸೇವಾ ನಿರತ ಅರ್ಹ ಪದವೀಧರ ಪಿ.ಎಸ್.ಟಿ. ಶಿಕ್ಷಕರನ್ನು ಜಿ.ಪಿ.ಟಿ. ಶಿಕ್ಷಕರಾಗಿ ವಿಲೀನಗೊಳಿಸುವುದು* ಇದಕ್ಕೆ ಸೂಕ್ತ ಪರಿಹಾರವಾಗಿದೆ.
4. ಯಾವುದೇ ಸ್ಥಾನಮಾನ, ಅಂತಸ್ತಿಗೆ ಆಸೆ ಪಡದೆ, ಮುಂಚೆ ಮತ್ತು ಈಗಲೂ ಶಾಲೆಗಳಲ್ಲಿ ಅಹರ್ನಿಶಿ 1 ರಿಂದ 8 ನೇ ತರಗತಿಗಳಿಗೆ ಕಲಿಕಾ ಮಾರ್ಗದರ್ಶನ ಗೈಯ್ಯುತ್ತಾ ದೇಶದಲ್ಲಿಯೇ ನಮ್ಮ ರಾಜ್ಯದ ಶಿಕ್ಷಣದ ಗುಣಮಟ್ಟವನ್ನು ಕಾಪಿಟ್ಟುಕೊಂಡಿರುವದರಲ್ಲಿ ಸೇವಾ ನಿರತ ಪದವೀಧರ ಪಿ.ಎಸ್.ಟಿ. ಶಿಕ್ಷಕರ ಪಾತ್ರ ಪ್ರಮುಖವಾಗಿದೆ. *ಅವರು ಬೋಧಿಸುತ್ತಿರುವುದು 1 ರಿಂದ 8 ನೇ ತರಗತಿಗಳಿಗೆ; ಪಡೆಯುತ್ತಿರುವ ವೇತನ ಶ್ರೇಣಿ ಪಿ.ಎಸ್.ಟಿ. ದು. ಇತ್ತೀಚೆಗಷ್ಟೇ ನೇಮಕವಾದ 6-7, ಅಥವಾ 6-8 ಬೋಧಿಸುತ್ತಿರುವ ಜಿ.ಪಿ.ಟಿ. ಶಿಕ್ಷಕರು ಪಡೆಯುತ್ತಿರುವುದು ಎಫ್.ಡಿ.ಎ. ವೇತನ ಶ್ರೇಣಿ. 6-8 ನೇ ತರಗತಿಗಳಿಗೆ ಬೋಧಿಸುತ್ತಿರುವ ಟಿ.ಜಿ.ಟಿ. ಶಿಕ್ಷಕರಿಗೆ ಪ್ರೌಢಶಾಲಾ ಶಿಕ್ಷಕರ ವೇತನ ಶ್ರೇಣಿ.* ಇದು ಪಿ.ಎಸ್.ಟಿ. ಪದವೀಧರ ಶಿಕ್ಷಕರ *ಆತ್ಮ ಮತ್ತು ವೃತ್ತಿ ಗೌರವಕ್ಕೆ ಪೆಟ್ಟು ನೀಡದೇ?* ಹಾಗಾಗಿ ಪದವೀಧರ ಪಿ.ಎಸ್.ಟಿ. ಶಿಕ್ಷಕರ ಆತ್ಮ ಗೌರವ ಮತ್ತು ವೃತ್ತಿ ಪ್ರೇಮ ಕಾಪಾಡಲು, ಅವರನ್ನು *ಸೇವಾ ಜೇಷ್ಠತೆಯೊಂದಿಗೆ ಜಿ.ಪಿ.ಟಿ. ವೃಂದಕ್ಕೆ ವಿಲೀನಗೊಳಿಸುವುದು* ಸೂಕ್ತವೆನಿಸುತ್ತದೆ.
5. ವೃಂದ ಮತ್ತು ನೇಮಕಾತಿ ನಿಯಮಗಳ ಪರಿಷ್ಕರಣೆ ಸಂದರ್ಭಗಳಲ್ಲಿ ನ್ಯಾಯಲಯಗಳು, ಅನೇಕ ಬಾರಿ ಕೆ.ಸಿ.ಎಸ್,ಆರ್. ನಿಯಮಗಳನ್ನು ಉಲ್ಲೇಖಿಸಿ *ಸೇವಾ ನಿರತ ನೌಕರರ ವೃತ್ತಿ ಗೌರವ* ಕಾಪಾಡಲು ಸಲಹೆ ನೀಡಿರುವುದನ್ನು ಸರಕಾರ ಗಮನಿಸಬೆಕಾಗಿದೆ.
6. ಮೇಲಿನ ಅಂಶಕ್ಕೆ ಸಂಬಂಧಿಸಿದಂತೆ, ಹಾಲಿ ಸೇವಾ ನಿರತ ಪದವೀಧರ ಶಿಕ್ಷಕರು, *ನೂತನ ವೃಂದ ಮತ್ತು ನೇಮಕಾತಿ ನಿಯಮಗಳ ನಿಬಂಧನೆಗಳನ್ನು ಪ್ರಶ್ನಿಸಿ ನ್ಯಾಯಲಯಗಳ ಮೊರೆ ಹೋಗಿರುವುದು ತಿಳಿದಿದೆ. ಕಾನೂನು ಹೋರಾಟದ ವೃಥಾ ಶ್ರಮದಿಂದಾಗಿ ಸರಕಾರ ಮತ್ತು ಶಿಕ್ಷಕ ಸಮುದಾಯ ನಲುಗುವುದನ್ನು ತಡೆಯಬೇಕಾಗಿದೆ.* ಕಾರಣ 2017 ರಲ್ಲಿ ಜಾರಿಗೆ ಆದೇಶಿಸಿದ ವೃಂದ ಮತ್ತು ನೇಮಕಾತಿ ನಿಯಮಗಳ ಪರಿಷ್ಕರಣೆ ಆದೇಶವನ್ನು, ತದನಂತರದ ನೇಮಕಾತಿಗಳಿಗೆ ಅನ್ವಯಿಸಿ, ಆ ಮೊದಲೇ ಸೇವಾ ನಿರತರಾಗಿರುವ ಪದವೀಧರ ಪಿ.ಎಸ್.ಟಿ. ಶಿಕ್ಷಕರಿಗೆ ಎನ್.ಸಿ.ಟಿ.ಇ. ನಿಯಮಾವಳಿಯಂತೆ ಟಿ.ಇ.ಟಿ., ಸ್ಕಿçÃನ್ ಟೆಸ್ಟ್ ಮುಖೇನ ಜಿ.ಪಿ.ಟಿ. ಹುದ್ದೆ ಹೊಂದಲು ಅವಕಾಶ ಕಲ್ಪಿಸುವುದು ಯೋಗ್ಯವೆನಿಸುತ್ತದೆ.
7. *ತ್ವರಿತಗತಿಯಲ್ಲಿ ಮಾರ್ಪಾಡಾಗುತ್ತಿರುವ ಶಾಲಾ ಶಿಕ್ಷಣ ನೀತಿಯು, ‘ಸಮಗ್ರ ಶಾಲಾ ಶಿಕ್ಷಣದ ವೃಂದ ಮತ್ತು ನೇಮಕಾತಿ ನಿಯಮಗಳ ಪರಿಷ್ಕರಣೆ’ ಅಪೇಕ್ಷಿಸುತ್ತದೆ.* ಹಾಗಾಗಿ ಬಿಡಿ ಬಿಡಿಯಾಗಿ ಸಿ ಆಂಡ್ ಆರ್. ರೂಪಿತಗೊಳ್ಳದೆ, ಇನ್ನೇನು ಜಾರಿ ಆಗಲಿರುವ ನೂತನ ರಾಷ್ಟಿçÃಯ ಶಿಕ್ಷಣ ನೀತಿ 5+3+3+4 ವಿಧಾನಕ್ಕೂ ಸಮನ್ವಯಗೊಳಿಸಿ ರೂಪಿತಗೊಳ್ಳಬೇಕು. ಆ ಕಾರಣ ಸಮಗ್ರ ಶಾಲಾ ಶಿಕ್ಷಣದ ವೃಂದ ಮತ್ತು ನೇಮಕಾತಿ ನಿಯಮಗಳ ರೂಪಿಸಲು ಸಮಿತಿ ರಚಿಸಿ, ಅದು ವರದಿ ಕೊಡುವವರೆಗೆ ಮೇಲಿನ ಅಂಶಗಳನ್ನು ಪರಿಗಣಿಸಬಹುದಾಗಿದೆ.
8. *ಜಿ.ಪಿ.ಟಿ. ಸಂಬಂಧಿತ ಸಿ ಆಂಡ್ ಆರ್ 2017 ರಲ್ಲಿ ಪ್ರಕಟಗೊಳ್ಳುವ ಪೂರ್ವದಲ್ಲೇ ಎ.ಜಿ.ಟಿ. ಶಿಕ್ಷಕರ ನೇಮಕಾತಿ ನಡೆಯಿತು. ನಂತರ ಜಾರಿಗೆ ಬಂದ ಜಿ.ಪಿ.ಟಿ. ನೇಮಕಾತಿ ಅರ್ಹತೆಯಲ್ಲಿ ಬದಲಾವಣೆ ಆದರೂ ಎ.ಜಿ.ಟಿ. ಶಿಕ್ಷಕರನ್ನು ಜಿ.ಪಿ.ಟಿ. ಅಂತಾ ಪರಿಗಣನೆ ಮಾಡಿದಂತೆ, ಹಾಲಿ ಸೇವಾ ನಿರತ 1 ರಿಂದ 8 ನೇ ತರಗತಿಗಳ ಕಲಿಕಾ ಕಾರ್ಯ ನಿರ್ವಹಿಸುತಿರುವ ಪದವೀಧರ ಪಿ.ಎಸ್.ಟಿ. ಶಿಕ್ಷಕರನ್ನು ಜಿ.ಪಿ.ಟಿ. ಶಿಕ್ಷಕರೆಂದು ಪರಿಗಣಿಸುವುದು ಸೂಕ್ತವಾಗಿದೆ.* ನೂತನ ಸಿ ಆಂಡ್ ಆರ್ ಕಾರ್ಯರೂಪಕ್ಕೆ ಬರುವಾಗ, ಸೇವಾ ನಿರತರ ಅರ್ಹತೆಗೆ ಅನುಗುಣವಾಗಿ ವ್ಯಾಪ್ತಿ ವಿಸ್ತರಿಸಲು ಸಾಧ್ಯವಿದೆ. ಪ್ರತ್ಯೇಕ ಸಿ ಆಂಡ್ ಆರ್ ಇಲ್ಲದೇ ಟಿ.ಜಿ.ಟಿ. ಶಿಕ್ಷಕರ ನೇಮಕಾತಿ ನಡೆದಿರುವುದು. ಈ ಎಲ್ಲ ಗೊಂದಲಗಳು ಇಲ್ಲಿಗೆ ಮುಕ್ತಾಯವಾಗದೆ, ಮುಂದೆ *ಪ್ರೌಢಶಾಲಾ ಶಿಕ್ಷಕರನ್ನೂ, ಅವರು ಸ್ನಾತಕ ಪದವಿ ಪಡೆದವರಾಗಿದ್ದರೂ ಅವರನ್ನು 9 ನೇ ತರಗತಿಗಳಿಗೆ ಸೀಮಿತಗೊಳಿಸಬೇಕಾಗುತ್ತದೆ.* ಹಾಗಾಗಿ ಸಮಗ್ರ ಶಾಲಾ ಶಿಕ್ಷಣದ ಬಗೆಗಿನ ದೃಷ್ಟಿಕೋನದಿಂದ ಸಿ ಆಂಡ್ ಆರ್ ರೂಪಿತಗೊಳಿಸುವುದು ತುರ್ತು ಅಗತ್ಯವಾಗಿದೆ. ನೂತನ ವೃಂದ ಮತ್ತು ನೇಮಕಾತಿ ನಿಯಮಗಳು ರೂಪಿಸುವ ಮೊದಲು ಹಾಲಿ ವ್ಯವಸ್ಥೆ, ನೌಕರರ *ವೃತ್ತಿ ಗೌರವ, ಶ್ರಮ ಸಹಕಾರಗಳನ್ನೂ ಪರಿಗಣಿಸುವುದು ಅಗತ್ಯ.*
9. *ಮುಖ್ಯ ಶಿಕ್ಷಕರ ಹುದ್ದೆ ಅರ್ಹತೆ ಮತ್ತು ಸೃಜನೆಯಲ್ಲೂ ರಚನಾತ್ಮಕ ಬದಲಾವಣೆ ಸದ್ಯ ಪ್ರಸ್ತಾವಿತ ಸಿ ಆಂಡ್ ಆರ್ ಅಪೇಕ್ಷಿಸುತ್ತದೆ. ಹಾಗಾಗಿ ಪಿ.ಎಸ್.ಟಿ. ಮತ್ತು ಜಿ.ಪಿ.ಟಿ. ಒಂದು ಸಂಸ್ಥೆಯಾಗಿ ಪರಿಗಣಿತವಾದಾಗ ಮುಖ್ಯ ಶಿಕ್ಷಕರ ನೇಮಕದಲ್ಲಾಗುವ ಶೈಕ್ಷಣಿಕ ಅರ್ಹತೆ ವ್ಯತ್ಯಾಸವು ಅಭಾಸವೆನಿಸುತ್ತದೆ.* ಮುಂದುವರೆದು ಹಿಂದಿ ಶಿಕ್ಷಕರಾಗಿ ಆಯ್ಕೆಯಾದ ಪಿ.ಎಸ್.ಟಿ. ಶಿಕ್ಷಕರಿಗೆ ಸಾಮಾನ್ಯ ಕನ್ನಡ ಶಿಕ್ಷಕನ ಬೋಧನಾ ವಿಷಯ ನೀಡುವುದು ಎಷ್ಟು ಸಮಂಜಸ? ಅವರನ್ನೂ ಜಿ.ಪಿ.ಟಿ. ಶಿಕ್ಷಕರಾಗಿ ಪರಿಗಣಿಸಿ ಹಿಂದಿ ಬೋಧನೆಗೆ ಅಗತ್ಯ ಅರ್ಹತೆ ಪಡೆಯಲು ಸೂಚಿಸುವುದು ಸೂಕ್ತವೆನಿಸುತ್ತದೆ.
10. *ಶಿಕ್ಷಕರ ವರ್ಗಾವಣೆ ಸಮಸ್ಯೆ, ಪ್ರೌಢ ಶಾಲಾ ಶಿಕ್ಷಕರ ಬಡ್ತಿ ಗೊಂದಲ ಸಮಸ್ಯೆಗಳಿಗೆ ಅರ್ಹ ಪಿ.ಎಸ್.ಟಿ. ಶಿಕ್ಷಕರನ್ನು ಜಿ.ಪಿ.ಟಿ. ಹುದ್ದೆಗಳಲ್ಲಿ ವಿಲೀನಗೊಳಿಸಿ ಪರಿಹಾರ ಕಾಣಬಹುದಾಗಿದೆ.*
11. *ಆರ್ಥಿಕತೆಯ ದೃಷ್ಟಿಯಿಂದಲೂ, ಗುಣಾತ್ಮಕತೆ ದೆಸೆಯಿಂದಲೂ, ವ್ಯವಸ್ಥೆಯನ್ನು ಕ್ರಮಾನುಗತವಾಗಿ ಸುಧಾರಿಸುವ ನಿಟ್ಟಿನಲ್ಲಿಯೂ ಹಾಲಿ ಸೇವಾ ನಿರತ ಪದವೀಧರ ಪಿ.ಎಸ್.ಟಿ. ಶಿಕ್ಷಕರನ್ನು ಜಿ.ಪಿ.ಟಿ. ಶಿಕ್ಷಕರಾಗಿ ವಿಲೀನಗೊಳಿಸುವುದು ಲಾಭದಾಯಕವೆನಿಸುತ್ತದೆ.*
*ಹಾಗೇನೇ ಬಡ್ತಿ ಕ್ರಿಯೆಗಳು, ಹೆಚ್ಚುವರಿ ವೇತನ, ಇವೆಲ್ಲವೂ ಹೊರೆಯಾಗುತ್ತವೆ. ಈಗಾಗಲೇ ಪ್ರಾಥಮಿಕ ಶಾಲೆಯಲ್ಲಿ 20- 30 ವರುಷ ಅಹರ್ನಿಶಿ ದುಡಿದು ಸಾಕಷ್ಡು ಅನುಭವ ಹೊಂದಿರುವ ಶಿಕ್ಷಕರನ್ನು ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಿದರೆ, ಉತ್ತಮ ಸಮನ್ವಯದ ಆಡಳಿತ ಕಾಣಬಹುದು. ಮುಂದುವರೆದು ವ್ಯತಿರಿಕ್ತ ನಿರ್ಣಯ ತೆಗೆದುಕೊಂಡು ಈಗಷ್ಟೇ ಇಲಾಖೆಗೆ ಸೇರ್ಪಡೆಗೊಂಡಿರುವ GPT ಶಿಕ್ಷಕರನ್ನು HM ಆಗಿ ನೋಡುವುದಾದರೆ, ಹಿರಿಯ ಶಿಕ್ಷಕರು ತೀವ್ರ ಅವಮಾನದಿಂದ ಬಳಲಬೇಕಾಗುತ್ತದೆ.*
ಈ ಮೇಲಿನ ಅಂಶಗಳನ್ನು ಪರಾಮರ್ಶಿಸಿ, ಉದ್ದೇಶಿತ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪರಿಷ್ಕರಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ.
ಗೌರವಗಳೊಂದಿಗೆ,
ತಮ್ಮ ವಿಶ್ವಾಸಿಕರು,
ಶ್ರೀ ಮರಿಗೌಡ ಮುದ್ದನಗೌಡ್ರ ಸ.ಶಿ.
ಸ.ಮಾ.ಪ್ರಾ. ಶಾಲೆ, ಶಿರಸಂಗಿ ತಾ-ಸವದತ್ತಿ
ಜಿ-ಬೆಳಗಾವಿ ಪಿನ್- 591126
ಸೆಲ್- *9008962684*