ಯಾರಿಗೆ ಬೇಕಿತ್ತು ರಜೆ
ಇದು ರಜೆಯೋ ಸಜೆಯೋ
ನೀವೇ ಹೇಳಿ…..
ನಿದ್ರೆಗೆ ಜಾರಿರುವ ಸಂಘಗಳು
ಧಾರವಾಡ: ನಿರಂತರವಾಗಿ ಸುರಿಯುತ್ತಿರುವ ಮಳೆ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳಿಗೆ ಈ ಮೋದಲು ಮೂರು ದಿನಗಳ ಕಾಲ ರಜೆ ಘೋಷಣೆ ಮಾಡಲಾಗಿತ್ತು… ರಜೆ ಸರಿದೂಗಿಸಲು ಆರು ಶನಿವಾರಗಳಂದು ಪೂರ್ಣ ಅವಧಿ ಶಾಲೆ ನಡೆಸಲು ಸೂಚಿಸಲಾಗಿದೆ…
ವಿಷಯ: ಧಾರವಾಡ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ನೀಡಿರುವ ಅವಧಿಯನ್ನು ಸರಿದೂಗಿಸುವ ಕುರಿತು.
ಉಲ್ಲೇಖ: ಮಾನ್ಯ ಜಿಲ್ಲಾಧಿಕಾರಿಗಳು ಧಾರವಾಡ ರವರ ಪತ್ರ ಸಂಖ್ಯೆ: ಸಿಎಲ್/ವಹಿ 28/2024-25 2:24-07-2024.
ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ನಿರಂತರ ಮಳೆಯ ಹಿನ್ನೆಲೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಧಾರವಾಡ ಜಿಲ್ಲೆಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ದಿನಾಂಕ:25-07-2024, 26-07-2024 ಮತ್ತು 27-07-2024 ರಂದು ರಜೆ ಘೋಷಿಸಿ ಆದೇಶಿಸಿಸಲಾಗಿರುತ್ತದೆ.
ಶಾಲಾ ಮಕ್ಕಳ ಶೈಕ್ಷಣಿಕ ಹಿತದೃಷ್ಠಿಯಿಂದ ಸದರಿ 3 ದಿನಗಳ ಅವಧಿಯನ್ನು ಅಗಸ್ಟ ತಿಂಗಳಲ್ಲಿ ದಿನಾಂಕ 03-08-2024, 10-08-2024, 17-08-2024, 24-08-2024 2 31-08-2024 ಸೆಪ್ಟೆಂಬರ್ ತಿಂಗಳು 14-09-2024 ರಂದು ಒಟ್ಟೂ 6 ಶನಿವಾರಗಳ ಅವಧಿಯನ್ನು ಬೆಳಿಗ್ಗೆ 10:30 ರಿಂದ ಸಂಜೆ 5:00 ಗಂಟೆಯವರೆಗೆ ಕಡ್ಡಾಯವಾಗಿ ಪೂರ್ಣ ದಿವಸ ಶಾಲೆ ನಡೆಸುವುದರ ಮೂಲಕ ಸರಿದೂಗಿಸಲು ಸೂಚಿಸಲಾಗಿದೆ.