ಗಂಡ ಹೆಂಡತಿ ಇಬ್ಬರು ಸರ್ಕಾರಿ ನೌಕರರು!!ಐದನೇ ತರಗತಿಯಲ್ಲಿ ಓದುತ್ತಿದ್ದ ಇವರ ಪುತ್ರ ನೆಣಿಗೆ ಶರಣು…
ಮೈಸೂರು: ಬಾಳಿ ಬದುಕಬೇಕಿದ್ದ ಬಾಲಕನ ದುರಂತ ಅಂತ್ಯ ಕಂಡಿದ್ದಾನೆ. ಹೌದು ನೇಣು ಬಿಗಿದುಕೊಂಡು ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಜಲಪುರಿ ವಸತಿ ಗೃಹದಲ್ಲಿ ನಡೆದಿದೆ. ಮೈಸೂರಿನ ಕುಶಾಲ್ (11) ವರ್ಷ ಮೃತ ಬಾಲಕನಾಗಿದ್ದು,
ಪೊಲೀಸ್ ಪಬ್ಲಿಲ್ ಶಾಲೆಯಲ್ಲಿ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಪೊಲೀಸ್ ಪೇದೆ ದೇಸಿಗೌಡ, ಲಕ್ಷ್ಮಿ ದಂಪತಿಗಳ ಪುತ್ರನಾಗಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನೂ ಈ ಘಟನೆ ಸಂಬಂಧ ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ