ಡಾ. ಲತಾ.ಎಸ್.ಮುಳ್ಳೂರ ರವರಿಗೆ ಶಿಕ್ಷಕ ರತ್ನ ರಾಜ್ಯ ಪ್ರಶಸ್ತಿ ಪ್ರಧಾನ. ಕನಕ ಅಧ್ಯಯನ ಪೀಠ,ಕರ್ನಾಟಕ ವಿಶ್ವವಿದ್ಯಾಲಯ , ಹಾಗೂ ಚೇತನ ಪೌಂಡೇಶನ್ ಧಾರವಾಡ ಸಂಯುಕ್ತಾಶ್ರಯದಲ್ಲಿ ನಡೆದ ಧಾರವಾಡ ನುಡಿ ಸಡಗರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾದ ಡಾ.ಲತಾ.ಎಸ್.ಮುಳ್ಳೂರ ಅವರ ಶೈಕ್ಷಣಿಕ ಸೇವೆ ಗುರುತಿಸಿ’ ಶಿಕ್ಷಕ ರತ್ನ ರಾಜ್ಯ ಪ್ರಶಸ್ತಿ
ಪ್ರಧಾನ ಮಾಡಲಾಯಿತು..
ದಿನಾಂಕ,26.27.28 ನೇ ಜುಲೈ, 2024 ರಂದು
ಕನ್ನಡ ನುಡಿ ಚಿಂತಕರು,ಬರಹಗಾರರು,
ಕಲಾವಿದರು,ಶಿಕ್ಷಣ ತಜ್ಞರ ನೆನಪುಗಳು,ಕಲೆ, ಸಾಹಿತ್ಯ ಶಿಕ್ಷಣ,ರಂಗಭೂಮಿ, ಸಿನಿಮಾಗೋಷ್ಠಿಗಳು ಚಲನಚಿತ್ರ ಮತ್ತು ಕಿರುಚಿತ್ರಗಳ ಪ್ರದರ್ಶನ, ಒಟ್ಟಾರೆಯಾಗಿ ಧಾರವಾಡ ನುಡಿಸಿರಿ ಸಡಗರ ಕಾರ್ಯಕ್ರಮವು ಕಾವ್ಯ ಸಮಾಗಮವಾಗಿತ್ತು.
ನುಡಿಸಿರಿ ಕಾರ್ಯಕ್ರಮದ 🏵️ಘನ ಅಧ್ಯಕ್ಷತೆ: ಡಾ. ಹನಮಗೌಡ. ಸಿ ಸಂಯೋಜಕರು. ಕನಕ ಅಧ್ಯಯನ ಪೀಠ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ವಹಿಸಿದ್ದರು
🏵️ನೇತೃತ್ವ: ಶ್ರೀ ಚಂದ್ರಶೇಖರ ಮಾಡಲಗೇರಿ.
ಸಂಯೋಜಕರು ಧಾರವಾಡ ನುಡಿ ಸಡಗರ
“`ಮುಖ್ಯ ಅತಿಥಿಗಳು“` ಶ್ರೀ.ಲಿಂಗರಾಜ.ಅಂಗಡಿ. ಜಿಲ್ಲಾ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಧಾರವಾಡ
🏵️ ಡಾ. ಲತಾ ಎಸ್ ಮುಳ್ಳೂರ
ರಾಷ್ಟ್ರೀಯ ಅಧ್ಯಕ್ಷ ರು ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ (ರಿ) ನವದೆಹಲಿ ಮತ್ತು ಸಂಸ್ಥಾಪಕ ರಾಜ್ಯಾಧ್ಯಕ್ಷರು,
ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ.
🏵️ಶ್ರೀ ಎಲ್. ಐ ಲಕ್ಕಮ್ಮ ನವರ ರಾಜ್ಯ ಸಮಿತಿ ಸದಸ್ಯರು, ಭಾರತ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು.
🏵️ ಶ್ರೀ ಹಾಲೇಶ ನವುಲೆ ಮಹಾಪ್ರಧಾನ ಕಾರ್ಯದರ್ಶಿ, ಕರ್ನಾಟಕ ಸರಕಾರಿ ಗ್ರಾಮೀಣ ಶಿಕ್ಷಕರ ಸಂಘ, ರಾಜ್ಯ ಘಟಕ ಹುಬ್ಬಳ್ಳಿ
🏵️ಶ್ರೀ ಮಂಜು ಪೂಜಾರ ಅಧ್ಯಕ್ಷರು, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಧಾರವಾಡ
ಈ ಮೇಲ್ಕಂಡ ಅಧ್ಯಕ್ಷರ ಹಾಗೂ ಮುಖ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.
ಅನಕ್ಷರತೆ, ಅಜ್ಞಾನ, ಮೂಢನಂಬಿಕೆ,ಜಾತಿ ಪದ್ಧತಿಗಳೇ ಮೈಲುಗಲ್ಲಾಗಿದ್ದ ದಿನಮಾನಗಳಲ್ಲಿ ಸಾಕ್ಷರತೆ,ಸಮನ್ವಯತೆ, ಸ್ವಾತಂತ್ರ್ಯತೆ,ಸಮಾನತೆ ಎನ್ನುವ ಜಗತ್ತಿಗೆ ಸಾರಿ, ಸೌಟು ಹಿಡಿಯುವ ಕೈಯಲ್ಲಿ ಲೇಖನಿಯನ್ನು ಹಿಡಿಸಿ ಸಾಕ್ಷಾರತೆಯನ್ನು ಮೊಳಗಿಸಿದ ಮಾತೆ ಸಾವಿತ್ರಿಬಾಯಿ ಹೆಸರಿನ ಸರ್ಕಾರಿ, ಅನುದಾನಿತ, ಪದವೀಧರ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕಿಯರ ಸಂಘವನ್ನು ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್ (ರಿ) ನವದೆಹಲಿ.
ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ) ಧಾರವಾಡ,ಎಂದು
ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದಲ್ಲಿ ಸ್ಥಾಪಿಸಿದ ಕೀರ್ತಿ ಡಾ.ಲತಾ S ಮುಳ್ಳೂರವರಿಗೆ ಸಲ್ಲುತ್ತದೆ.
ರಾಜ್ಯದ ಸಮಸ್ತ ಶಿಕ್ಷಕಿಯರ ಬೇಕು ಬೇಡಿಕೆಗಳಿಗೆ ನೆರವಾಗುವುದರ ಜೊತೆಗೆ, ನೆರೆಹಾವಳಿ,ಕೋವಿಡ್ ಸಾಂಕ್ರಾಮಿಕ ರೋಗಗಳು, ವಿಶೇಷ ಚೇತನವುಳ್ಳ ಮಕ್ಕಳು, ವೃದ್ಧಾಶ್ರಮಗಳು, ಅನಾಥಾಶ್ರಮಗಳಿಗೆ ನೆರವು,ಹತ್ತಾರು ರೂಪದಲ್ಲಿ ಸಾಮಾಜಿಕ ಹಿತಾಸಕ್ತಿಯುಳ್ಳ ಕೆಲಸಗಳನ್ನು ಮಾಡುತ್ತಾ, ಗುಣಮಟ್ಟದ ಶೈಕ್ಷಣಿಕ ನೀಡುವಲ್ಲಿ ಸಫಲರಾಗಲು, ರಾಜ್ಯಮಟ್ಟದ ನುರಿತ ಸಂಪನ್ಮೂಲ ಶಿಕ್ಷಕರೊಳಗೊಂಡ ವ್ಯಕ್ತಿಗಳೊಂದಿಗೆ ಕಾರ್ಯಾಗಾರಗಳನ್ನು ನಡೆಸುತ್ತಿದ್ದಾರೆ.
ಕರುನಾಡನ್ನು ಮೀರಿ ಹೊರ ರಾಜ್ಯದ ಶಿಕ್ಷಕಿಯರ ಧಮನಿಯಾಗಿರುವ ಡಾ. ಲತಾ S ಮುಳ್ಳೂರ್ ರವರಿಗೆ, ದಿನಾಂಕ,26.27.28 ನೇ ಜುಲೈ, 2024.ರಂದು ಧಾರವಾಡ ದ ಕನಕ ಅಧ್ಯಯನ ಪೀಠ ಕರ್ನಾಟಕ ವಿಶ್ವವಿದ್ಯಾಲಯ. ಧಾರವಾಡ ಚೇತನ್ ಫೌಂಡೇಶನ್ ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ನಡೆದ ‘ಧಾರವಾಡ ನುಡಿ ಸಡಗರ ‘ ಕಾರ್ಯಕ್ರಮದಲ್ಲಿ ಇವರ ಶೈಕ್ಷಣಿಕ ಸಾಧನೆಗಳನ್ನು ಗುರುತಿಸಿ ‘ಶಿಕ್ಷಕ ರತ್ನ ರಾಜ್ಯ ಪ್ರಶಸ್ತಿ ‘ಪ್ರಧಾನ ಮಾಡಲಾಗಿದೆ.
ಕರುನಾಡಿನ ಹೆಮ್ಮೆಯ ಈ ಕನ್ನಡತಿಗೆ ರಾಜ್ಯದ ಸಮಸ್ತ ಶಿಕ್ಷಕರು ಅಭಿನಂದನೆಗಳನ್ನು ಹಾರೈಸಿದ್ದಾರೆ.