ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಶಾಖೆ ಶಿವಮೊಗ್ಗ..
ಇಂದು ಶಿವಮೊಗ್ಗ ಜಿಲ್ಲಾ ಶಾಖೆ ವತಿಯಿಂದ ಸನ್ಮಾನ್ಯ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಪಿಎಸ್ಟಿ ಶಿಕ್ಷಕರ ಸಮಸ್ಯೆಯ ಕುರಿತು ಸಿ ಅಂಡ್ ಆರ್ ತಿದ್ದುಪಡಿಯ ವಿಚಾರವಾಗಿ ಚರ್ಚಿಸಿ ಮನವಿ ಸಲ್ಲಿಸಲಾಯಿತು. ಸನ್ಮಾನ್ಯರು ಶೀಘ್ರದಲ್ಲಿಯೇ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದೊಡನೆ ಸಭೆಯನ್ನು ಏರ್ಪಡಿಸಿ ಚರ್ಚಿಸಿ, ಸಮಸ್ಯೆ ಪರಿಹರಿಸುತ್ತೇನೆ ಎಂದು ಭರವಸೆ ನೀಡಿದರು.
ಸನ್ಮಾನ್ಯರಿಗೆ ಧನ್ಯವಾದಗಳು,ಈ ಒಂದು ಮನವಿ ಕೊಡುವ ಕಾರ್ಯಕ್ರಮಕ್ಕೆ ಆಗಮಿಸಿದ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು, ಪದಾಧಿಕಾರಿ ಮಿತ್ರರು, ಜಿಲ್ಲೆಯ ಎಲ್ಲಾ ತಾಲೂಕಿನ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು,ಪದಾಧಿಕಾರಿ ಮಿತ್ರರು, ಗುರುಗಳು ಹಾಗೂ ಗುರುಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಘಕ್ಕೆ ಶಕ್ತಿ ನೀಡಿರುವುದಕ್ಕೆ ತುಂಬು ಹೃದಯದಧನ್ಯವಾದಗಳನ್ನು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ದಿಂದ ಸಲ್ಲಿಸುತ್ತೇವೆ.
ಇಂದ
ಅಧ್ಯಕ್ಷರು,ಪ್ರಧಾನ ಕಾರ್ಯದರ್ಶಿಗಳು,ಪದಾಧಿಕಾರಿ ಮಿತ್ರರು