PST ಶಿಕ್ಷಕರು& ಸಂಘಟನೆಗಳು ಒಗಟ್ಟಿನಿಂದ ಹೋರಾಡಿದರೆ ಮಾತ್ರ ಪರಿಹಾರ ಸಾಧ್ಯ…
ಇಂದು ಧಾರವಾಡ ಜಿಲ್ಲೆಯ ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ PST ಶಿಕ್ಷಕರು ಧಾರವಾಡದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಭವನದಲ್ಲಿ ಸಭೆ ಸೇರಿ ಸದ್ಯ ಜಾರಿಯಲ್ಲಿರುವ ವೃಂದ ಮತ್ತು ನೇಮಕಾತಿ ನಿಯಮಗಳಿಂದ 2016 ಕ್ಕಿಂತ ಪೂರ್ವದಲ್ಲಿ PST ಶಿಕ್ಷಕರಿಗೆ ಆದ ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ ಸಮಾನ ಮನಸ್ಕ PST ಶಿಕ್ಷಕರು ಸೇರಿಕೊಂಡು ಚಿಂತನ ಮಂಥನದ ನಡೆಸಲಾಯಿತು. ಈ ಸಭೆಯಲ್ಲಿ ಸೇರಿದ ಎಲ್ಲರ ಅಭಿಪ್ರಾಯದ ಮೇರೆಗೆ ಈ ಕೆಳಗಿನಂತೆ ತೀರ್ಮಾನ ಕೈಗೊಳ್ಳಲಾಯಿತು.
1. 2016 ಕ್ಕಿಂತ ಪೂರ್ವದಲ್ಲಿ ನೇಮಕವಾದ ಎಲ್ಲ pst ಶಿಕ್ಷಕರು ನಿವೃತ್ತಿಯಾಗುವವರೆಗೆ ಪ್ರೌಢ ಶಾಲಾ ಸಹ ಶಿಕ್ಷಕರ ಹುದ್ದೆಗಳಿಗೆ ಹಾಗೂ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಹಾಗೂ ಹಿರಿಯ ಮುಖ್ಯೋಪಾಧ್ಯಾಯರ ಹುದ್ದೆಗೆ ಸೇವಾ ಹಿರಿತನದೊಂದಿಗೆ ಪರಿಗಣಿಸಿ ಮುಂದುವರೆಸುವದು
2 ವರ್ಗಾವಣೆಯಲ್ಲಿ ಹಿಂದಿನಂತೆ ಖಾಲಿ ಇರುವ ಎಲ್ಲ ಹುದ್ದೆಗಳಿಗೆ PST ಶಿಕ್ಷಕರಿಗೆ ಅವಕಾಶ ನೀಡುವುದು.
3.ಸದ್ಯಕ್ಕೆ GPT ಹುದ್ದೆಗಳ ವೃಂದ ಬಲವನ್ನು ಸದ್ಯ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಗಳಿಗೆ ಸೀಮಿತಗೊಳಿಸಿ ಹಾಗೂ GPT ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳದೆ ಪ್ರಾಥಮಿಕ ಶಾಲಾ ಶಿಕ್ಷಕರ ಮರುಪದನಾಮಿಕರಣ ಮಾಡುವುದು.
ಮೇಲಿನ ವಿಷಯವನ್ನು PST ಶಿಕ್ಷಕರಿಗೆ ತಲುಪಿಸಲು ತಾಲೂಕು ಹಾಗೂ ಜಿಲ್ಲಾ ಹಂತಗಳಲ್ಲಿ ಜಾಗೃತಿ ಮಾಡಲು ಸಭೆಗಳನ್ನು ಆಯೋಜಿಸುವುದು ಹಾಗೂ ಜಿಲ್ಲಾ ಮಟ್ಟದಲ್ಲಿ ಸರಕಾರದ ಹಾಗೂ ಇಲಾಖೆಯ ಗಮನ ಸೆಳೆಯಲು ಒಂದು ದಿನ ಎಲ್ಲ PST ಶಿಕ್ಷಕರು ಸಾಮೂಹಿಕ ರಜೆ ಹಾಕಿ ಮನವಿಯನ್ನು ಕೊಡುವುದು ಹಾಗೂ ಈ ಸಭೆಗಳಿಗೆ ಎಲ್ಲ ಗ್ರೂಪ್ ಗಳಿಗೆ ಸಂದೇಶ ಹಾಕಿ ಬಂದಿರುವ ಎಲ್ಲರನ್ನೂ ಕರೆದುಕೊಂಡು ಸಭೆ ಮಾಡಿ PST ಶಿಕ್ಷಕರ ಪರವಾದ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಹಾಗೂ ಯಾವುದೇ ಸಂಘಟನೆಗಳ ನಾಯಕರನ್ನು ತೆಗಳದೆ ಮುಂದೆ ಆಗಬೇಕಿರುವ ಕೆಲಸಗಳನ್ನು ಮಾತ್ರ ಪರಿಗಣಿಸಲು ತೀರ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಶಾಸಕರಾದ ಶ್ರೀ ಎಸ್ ವಿ ಸಂಕನೂರ ಸಾಹೇಬರು ಆಕಸ್ಮಿಕವಾಗಿ ಭಾಗವಹಿಸಿ ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹಿತ ಕಾಪಾಡಲು ನಾನು ತಮ್ಮೊಂದಿಗೆ ಸದಾ ಇರುತ್ತೇವೆ ಹಾಗೂ 2016 ಕ್ಕಿಂತ ಪೂರ್ವದಲ್ಲಿ ನೇಮಕವಾದ ಶಿಕ್ಷಕರಿಗೆ ಸೇವಾ ಹಿರಿತನ ಉಳಿಸಿಕೊಂಡು ಎಲ್ಲ ಹಂತದ ಬಡ್ತಿಗಳಿಗೆ ಮೊದಲು ಪರಿಗಣಿಸಲು ಒತ್ತಾಯಿಸುತ್ತೇನೆ ಹಾಗೂ ಇದಕ್ಕಾಗಿ ಬೆಂಗಳೂರಿನಲ್ಲಿ ಮಾನ್ಯ ಶಿಕ್ಷಣ ಸಚಿವರು ಉನ್ನತ ಅಧಿಕಾರಿಗಳು ಆರ್ಥಿಕ ಇಲಾಖೆ ,ಆಡಳಿತ ಮತ್ತು ಸುಧಾರಣಾ ಇಲಾಖೆ ಕಾನೂನು ಇಲಾಖೆಯ ಅಧಿಕಾರಿಗಳು ಹಾಗೂ ನೌಕರ ಸಂಘ ಹಾಗೂ ಶಿಕ್ಷಕರ ಸಂಘದ ಪದಾಧಿಕಾರಿಗಳು ಮತ್ತು PST ಶಿಕ್ಷಕರ ಪ್ರಮುಖರನ್ನು ಕರೆದುಕೊಂಡು ಸಭೆ ಮಾಡಿ ಒಂದು ಒಳ್ಳೆಯ ನಿರ್ಧಾರ ಮಾಡಿ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ತರುವ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಅಲ್ಲದೇ ಮೊದಲು ನೀವೆಲ್ಲಾ ಶಿಕ್ಷಕರ& ನೌಕರ ಸಂಘಟನೆಗಳು ಒಂದಾಗಿ ಮುಂದುವರೆಯಿರಿ, ಸಮಸ್ಯೆ ಇಷ್ಟೊತ್ತಿಗಾಗಲೆ ಬಗೆಹರಿಯಬೇಕಾಗಿತ್ತು PST ಶಿಕ್ಷಕರಿಗೆ ಅನ್ಯಾಯವಾಗಿರೋದು ನಿಜ ಅದನ್ನು ಸರಿಪಡಿಸಲು ಹೋರಾಟದ ಅವಶ್ಯಕತೆ ನಾನು ನಿಮ್ಮೊಂದಿಗೆ ಇದ್ದೇನೆ ಎಂದರು
ಹಾಗೂ ಧಾರವಾಡ ಜಿಲ್ಲೆಯ ನೌಕರ ಸಂಘದ ಅಧ್ಯಕ್ಷರಾದ ಶ್ರೀ ಎಸ್ ಎಫ್ ಸಿದ್ಧನಗೌಡ್ರ ಮಾತನಾಡಿ PST ಶಿಕ್ಷಕರ ಸಮಸ್ಯ ಇತ್ಯರ್ಥ ಪಡಿಸಲು ರಾಜ್ಯ ಸಂಘ ಕೂಡ ಪ್ರಮುಖ ವಿಷಯವನ್ನಾಗಿ ತೆಗೆದುಕೊಂಡಿದ್ದು ನಾವು ಕೂಡ ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ನೌಕರ ಸಂಘದ ಪದಾಧಿಕಾರಿಗಳಾದ ಶ್ರೀ ರಾಜಶೇಖರ್ ಬಾಣದ ಶ್ರೀ ಮಂಜುನಾಥ ಯಡಹಳ್ಳಿ ಶ್ರೀ ಪಿರೋಜ್ ಗುಡೆನಕಟ್ಟಿ ಶ್ರೀ ಚಂದ್ರಶೇಖರ ತಿಗಡಿ ಕಲಘಟಗಿ ತಾಲೂಕಿನ ನೌಕರ ಸಂಘದ ಅಧ್ಯಕ್ಷ ಶ್ರೀ ಆರ್ ಎಂ ಹೊಲ್ತಿಕೋಟಿ ಸಂಘದ ಕಾರ್ಯದರ್ಶಿ ಶ್ರೀ ಆರ್ ಎಸ್ ಜಂಬಗಿ ಅಧ್ಯಕ್ಷ ಶ್ರೀ ಎಂ ವೈ ಅಂಚಟಗೇರಿ ಧಾರವಾಡ ಶಹರ ಶಿಕ್ಷಕರ ಸಂಘದ ಕಾರ್ಯದರ್ಶಿ ಶ್ರೀ ಎಂ ಆರ್ ಕಬ್ಬೇರ ಪದಾಧಿಕಾರಿಗಳಾದ ಶ್ರೀ ಎಸ್ ಎ ಚಿಕನರ್ತಿ ಶ್ರೀ ಬಸವರಾಜ್ ಕೇರಿ ಶಿಕ್ಷಕರ ಪತ್ತು ಬೆಳೆಸುವ ಸಹಕಾರಿ ಸಂಘಗಳ ಪದಾಧಿಕಾರಿಗಳಾದ ಶ್ರೀಮತಿ ಸುಮಿತ್ರಾ ಹಿರೇಮಠ ಶ್ರೀ ರಾಜು ಮಾಳವಾಡ ಶ್ರೀ ಪ್ರಕಾಶ ಹರ್ತಿ ಹಿರಿಯ PST ಶಿಕ್ಷಕರಾದ ಶ್ರೀ ಮಹಾಂತೇಶ ಸೊಪ್ಪಿಮಠ ಶ್ರೀ ಬಸವರಾಜ್ ದೇಸೂರ ಶ್ರೀ ಶಿವಾನಂದ ಕೆಲಗೇರಿ ಶ್ರೀ ಬುಡನಖಾನ ಶ್ರೀ ಕಾಲೇಖಾನ ಸರ್ ಶ್ರೀ ವಿ ಪಿ ಬಡಿಗೇರ ಸರ್, ಶ್ರೀಮತಿ ವಿ ಎಂ ಪಾಟೀಲ, ಶ್ರೀಮತಿ ವಿ ಪಿ ಕುಲಕರ್ಣಿ, ಶ್ರೀ ದಳವಾಯಿ, ಶ್ರೀ ಝಡ್ ಎಸ್ ಸುತಾರ್ ಸರ್,ಎಸ್ ಎನ್ ಇದಿಯಮ್ಮನವರ, ಶ್ರೀ ಝಡ್ ಐ ಮಲಿಕನವರ, ಶ್ರೀ ಮೋಹನ ಸಿದ್ಧಾಂತಿ ಸರ್, ಶ್ರೀಮತಿ ಎಸ್ ಬಿ ಅರಮನಿ , ಶ್ರೀ ಮಾರ್ತಾಂಡಪ್ಪ ಕತ್ತಿ ಮುಂತಾದವರು ಉಪಸ್ಥಿತರಿದ್ದರು..