ಮಳೆಯ ಹನಿಗಳು
ಬಿಸಿಲಿನ ಬೀಜದಲಿ ಅಂಕುರಿಸಿವೆ
ಮಳೆಯ ಮೊಳಕೆಗಳು,
ಹನಿಗಳು ಬೇರು ಬಿಟ್ಟು,
ಬೆಳೆಯುತಿದೆ ಮಿಂಚಿನ ಬಳ್ಳಿ,
ಮೋಡಗಳ ಎಲೆಗಳ ಮೇಲೆ ಚೆಲ್ಲಿದೆ ಕಾಮನಬಿಲ್ಲು,
ಸೂಜಿಮಲ್ಲಿಗೆಯ ಹನಿಗಳು ಬಿರಿದು ಹರಡಿವೆ ಪರಿಮಳವ,
ಆಲೀಕಲ್ಲಿನ ಕಾಯಿಗಳು ಸುರಿದಿವೆ ಬಳ್ಳಿಯತುಂಬ,
ಬಳ್ಳಿ ಬಳುಕಲು ಶಿಳ್ಳೆಹಾಕುತಿವೆ ಪಡ್ಡೆ ಗುಡುಗುಗಳು,
ಸಿಡಿಲಿನ ಕೋಪಕೆ ಅಂಜಿ,
ಮೋಡದ ಎಲೆಗಳ ಹಿಂದೆ ಅಡಗಿವೆ
ತಟಪಟ ಮರಿ ಹನಿಗಳು …
ನದಿ ತಾಯಿಯ ಮಡಿಲು ಸೇರಿ,
ಸಾಗರ ಅಜ್ಜಿಯ ಮನೆಗೆ ಸಾಗುತಿವೆ ಮಳೆ ಹನಿಗಳು
ಪ್ರಸನ್ನ ಜಾಲವಾದಿ
ವಾಸ್ತುಶಿಲ್ಪಿ(architecture)ಬೆಂಗಳೂರು