ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರ ಹುದ್ದೆಗೆ ನಡೆದ ಚುನಾವಣೆಯಲ್ಲಿ ಸಾಹಿತಿ ನಾರಾಯಣ ಭಜಂತ್ರಿ ಭರ್ಜರಿ ವಿಜಯ..
ಧಾರವಾಡ: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕುಂದಗೋಳ ತಾಲೂಕಿನ ಯಲಿವಾಳ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಸಹಶಿಕ್ಷಕ ನಾರಾಯಣ ಭಜಂತ್ರಿ ವಿಜಯಶಾಲಿಯಾಗಿದ್ದಾರೆ.
ಜುಲೈ 14 ರಂದು ನೌಕರರ ಭವನದಲ್ಲಿ ನಡೆದ ಚುನಾವಣೆಯಲ್ಲಿ ಸಮೀಪದ ಪ್ರತಿಸ್ಪರ್ಧಿ ಹುಬ್ಬಳ್ಳಿಯ ಗೋಪನಕೊಪ್ಪ ಪ್ರೌಢಶಾಲೆಯ ಶಿಕ್ಷಕ ಆರ್ ಎಸ್ ಗೊಳೇರ ಅವರನ್ನು 13 ಮತಗಳ ಅಂತರದಿಂದ ಪರಾಭವಗೊಳಿಸಿದರು. ಒಟ್ಟು ಚಲಾವಣೆಯಾದ 29 ಮತಗಳಲ್ಲಿ ನಾರಾಯಣ ಭಜಂತ್ರಿ 21 ಮತಗಳನ್ನು ಪಡೆದರೆ, ಆರ್ ಎಸ್ ಗೂಳೇರ ಅವರು 8 ಮತಗಳನ್ನು ಪಡೆದರು. ಚುನಾವಣಾಧಿಕಾರಿಗಳಾಗಿ ಎಸ್ ರೇವಣಸಿದ್ದಪ್ಪ ಹನಮಂತ ಬಡಿಗೇರ ಕಾರ್ಯನಿರ್ವಹಿಸಿದರು.
ಅಬಿನಂಧನೆಗಳು: ಶಿಕ್ಷಕರ ಮತ ಕ್ಷೇತ್ರದ ಶಾಸಕರು ಮತ್ತು ವಿಧಾನಪರಿಷತ್ತಿನ ಪೂಜ್ಯ ಸಭಾಪತಿಗಳಾದ ಬಸವರಾಜ ಹೊರಟ್ಟಿ ಪದವೀಧರ ಮತ ಕ್ಷೇತ್ರದ ಶಾಸಕರಾದ ಎಸ್ ವಿ ಸಂಕನೂರ, ಎ ಆಯ್ ಟಿ ಎಫ್ ನ ರಾಷ್ಟ್ರೀಯ ಕಾರ್ಯಧ್ಯಕ್ಷರಾದ ಬಸವರಾಜ ಗುರಿಕಾರ, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾ ಅಧ್ಯಕ್ಷ ಡಾ. ಪ್ರಭಾಕರ ಲಗಮಣ್ಣವರ, ರಾಜ್ಯಾಧ್ಯಕ್ಷರಾದ ಶಿಶ್ನಬಸಪ್ಪ ಬಿ, ರಾಜ್ಯ ಉಪಾಧ್ಯಕ್ಷ ಎಂ ಕೆ ಬಿರಾದಾರ, ರಾಜ್ಯ ಪ್ರಧಾನಕಾರ್ಯದರ್ಶಿ ರಾಮು ಗೂಗವಾಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀಧರ ಗಸ್ತಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಎನ್ ಎಫ್ ಶಿದ್ಧನಗೌಡರ, ದೈಹಿಕ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಸುರೇಶ ಜಟ್ಟಣವರ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಲಿಂಗರಾಜ ಅಂಗಡಿ, ಸಾಕ ಮಾರ್ತಂಡಪ್ಪ ಕತ್ತಿ ಜಾನಪದ ಸಾಹಿತಿ ರಾಮು ಮೂಲಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ವಿ ಎಫ್ ಚುಳಕಿ, ಕಾರ್ಯದರ್ಶಿ ರಾಜಶೇಖರ ಹೊಣ್ಣಪ್ಪನವರ, ಕಲಘಟಗಿ ತಾಲೂಕ ನೌಕರರ ಸಂಘದ ಅಧ್ಯಕ್ಷ ಆರ್ ಎಮ್ ಹೊಲ್ಲಿಕೋಟಿ, ನಾಗರಾಜ ಬಾಗೂನವರ, ಆರ್ ಆರ್ ತಳವಾರ, ಜಗದೀಶ ಎಲ್ ಎಂ. ಆರ್ ವಿ ಸಂಕಣ್ಣವರ, ಆರ್ ಎಸ್ ರೂಗಿ, ಮಲಕಾರಿಸಿದ್ದ ಒಡೆಯರ, ವಿ ಆರ್ ಕೊಡ್ಲಿ ಎಲ್ ಎಂ ಆರ್ಕಸಾಲಿ, ಎಮ್ ಕೆ ಕುರಕುರಿ, ಪ್ರಮೋದ ವಾದಿರಾಜ, ಐ ಜಿ ಉದಮೇಶಿ, ಆರ್ ಎಚ್ ದಾಸರ, ಇಂದಿರಾ ಬಿ. ಆರ್ ವಿ ಪುಲ್ಲಿ ಎಸ್ ಕೋಷ್ಟಿ ಸಬಿನಾಬೇಗಮ್ ಕೊಪ್ಪದ ವಿ ಜಿ ಗಲಬಿ, ಸಿ ಪಿ ಪಾಟೀಲ, ಅಂಜನೆಯಪ್ಪ ವಿ ಲಿಂಗರೆಡ್ಡಿ ಹುಲಿಕಟ್ಟಿ ಪ್ರಮೋದ ಬಿರಾದರ ಪಾಟೀಲ, ಪಿ ಕೆ ಹಿರೇಗೌಡರ, ಎಂ ಜಿ ಜುಲ್ಲೂರ, ಫರಹತ್ ಜಲಗೇರಿ, ಎಮ್ ಎಚ್ ರಟಗೇರಿ, ಡಿ, ತಿಪ್ಪೆಸ್ವಾಮಿ ಮುಂತಾದವರು ವಿಜೇತ ಅಭ್ಯರ್ಥಿ ನಾರಾಯಣ ಭಜಂತ್ರಿಯವರನ್ನು ಅಭಿನಂದಿಸಿ ಗೌರವಿಸಿದರು.