ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ನಿರಂತರ ಮನವಿ ಹಾಗೂ ಸರಕಾರದೊಂದಿಗೆ ಸಂವಹನದಿಂದ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ ರಾಜ್ಯ ಸರಕಾರಿ ನೌಕರರಿಗೆ 7 ನೆಯ ವೇತನ ಆಯೋಗದ ಸೌಲಭ್ಯಗಳನ್ನು 01.07.2022 ರಿಂದ ಕಾಲ್ಪನಿಕ ವೇತನ ಪರಿಗಣಿಸುವುದು ಹಾಗೂ ದಿನಾಂಕ 01.08.2024 ರಿಂದ ಆರ್ಥಿಕ ಸೌಲಭ್ಯ ನೀಡುವುದಾಗಿ ದಿನಾಂಕ 15.07.2024 ರಂದು ನಡೆದ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿ ಸದನದಲ್ಲಿಯೂ ಕೂಡ ಸ್ಪಷ್ಟಪಡಿಸಿದ್ದು ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ ಸಂತೋಷವನ್ನುಂಟು ಮಾಡಿದೆ.
ಹಾಗೆ 7 ನೆಯ ವೇತನ ಜಾರಿ ಮಾಡಿದ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ ರವರಿಗೆ ಹಾಗೂ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ ಕೆ ಶಿವಕುಮಾರ ರವರಿಗೆ ಹಾಗೂ ನಮ್ಮ ತಾಲೂಕು ಶಾಖೆಯಿಂದ ಮನವಿ ಸ್ವೀಕರಿಸಿ ಸಂಪುಟ ಸಭೆಯಲ್ಲಿ 7 ನೆಯ ವೇತನ ಆಯೋಗದ ವರದಿಯನ್ನು ಜಾರಿ ಮಾಡಲು ಸಹಮತಿ ವ್ಯಕ್ತಪಡಿಸಿ ಮಾನ್ಯ ಮುಖ್ಯಮಂತ್ರಿಗಳ ಮನ ಒಲಿಸಿದ ನಮ್ಮ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಮಾನ್ಯ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸಂತೋಷ್ ಎಸ್ ಲಾಡ್ ಸಾಹೇಬರಿಗೆ ಹಾಗೂ ಸಂಪುಟ ಸಚಿವರುಗಳಿಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಪರವಾಗಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಕಲಘಟಗಿ ತಾಲೂಕು ಅಧ್ಯಕ್ಷರಾದ ಆರ್ ಎಂ ಹೊಲ್ತಿಕೋಟಿ ರವರು ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು ಸರಕಾರದ ನಿರ್ಧಾರವನ್ನು ಸ್ವಾಗತಿಸಿ 7ನೆಯ ವೇತನ ಜಾರಿ ಮಾಡಲು ನಿರಂತರ ಸರಕಾರದೊಂದಿಗೆ ಸಂವಹನ ಸಾಧಿಸಿ ನಿರಂತರ ಪ್ರಯತ್ನ ಮಾಡಿದ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಸಿ ಎಸ್ ಷಡಕ್ಷರಿ ಹಾಗೂ ಕೇಂದ್ರ ಸಂಘದ ಪದಾಧಿಕಾರಿಗಳಿಗೆ ಧನ್ಯವಾದಗಳನ್ನು ಸಲ್ಲಿಸಿದರು.
7ನೆಯ ವೇತನ ಜಾರಿ ಮಾಡಿದಂತೆ ನೌಕರ ಬೇಡಿಕೆಗಳಾದ nps ರದ್ದು ಪಡಿಸಿ ops ಮರು ಜಾರಿ ಮಾಡುವುದು ಹಾಗೂ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಶೀಘ್ರದಲ್ಲಿ ಅನುಷ್ಠಾನ ಮಾಡಿ ಸಮಸ್ತ ನೌಕರರ ಹಿತ ಕಾಪಾಡುವಂತೆ ಸರಕಾರಕ್ಕೆ ಮನವಿ ಮಾಡಿದರು ಈ ಸಂದರ್ಭದಲ್ಲಿ ಕಾರ್ಯದರ್ಶಿ ಆರ್ ಎಸ್ ಜಂಬಗಿ ಖಜಾಂಚಿಗಳಾದ ಶ್ರೀ ರಾಜು ಲಮಾಣಿ ರಾಜ್ಯ ಪರಿಷತ್ ಸದಸ್ಯರಾದ ಶ್ರೀ ನವೀನ ಗುಳೇರ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.