ಮುಖ್ಯ ಶಿಕ್ಷಕ ಅಮಾನತು
ಮುಳಬಾಗಲು: ನಗರದ ಡಿವಿಜಿ ಸರಕಾರಿ ಹಿರಿಯ
ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಿ.ಸೊಣ್ಣಪ್ಪ ಅವರನ್ನು ಕರ್ತವ್ಯ ಲೋಪದ ಅಡಿಯಲ್ಲಿ ಸೋಮವಾರ ಅಮಾನತುಗೊಳಿಸಲಾಗಿದೆ. .
ನಗರದ ಡಿವಿಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಿ. ಸೊಣ್ಣಪ್ಪ ಅವರು ಮಹಿಳಾ ಶಿಕ್ಷಕಿಯರನ್ನು ಕೆಟ್ಟದಾಗಿ ದೂಷಿಸುತ್ತಾ, ಅವಾಚ್ಯವಾಗಿ ನಿಂದಿಸುತ್ತಿದ್ದರು. ಸಹ ಶಿಕ್ಷಕ ಬಿ.ಎಂ.ಚೌಡರೆಡ್ಡಿ ಎನ್ನುವವರು ಬೇರೆಡೆಯಿಂದ ಶಾಲೆಗೆ ನಿಯೋಜನೆ ಗೊಂಡಿದ್ದರೂ ಕರ್ತವ್ಯಕ್ಕೆ ಹಾಜರು ಪಡಿಸಿಕೊಳ್ಳದೆ ಹೀಯಾಳಿಸಿದ್ದರು ಎಂದು ಶಾಸಕ ಸಮೃದ್ಧಿ ಮಂಜುನಾಥ್ ಅವರಿಗೆ ಎಲ್ಲಾ ನೊಂದ ಶಿಕ್ಷಕರು ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿಶಾಸಕರು ಕ್ಷೇತ್ರ ಶಿಕ್ಷಣಾಧಿ ಕಾರಿ ಹಾಗೂ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೃಷ್ಣಮೂರ್ತಿ ಅವರಿಗೆ ಕ್ರಮಕ್ಕಾಗಿ ಸೂಚಿಸಿದ್ದರು.ಉಪ ನಿರ್ದೇಶಕ ಕೃಷ್ಣಮೂರ್ತಿ ದೂರನ್ನು ಪರಿಶೀಲಿಸಿ ಸಿ. ಸೊಣ್ಣಪ್ಪ ಅವರನ್ನು ಕರ್ತವ್ಯ ಲೋಪದ ಆಧಾರದ ಮೇಲೆ ಸೋಮವಾರ ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.