ಏಳನೇ ವೇತನ ಆಯೋಗ ಜಾರಿ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸರ್ಕಾರಿ ನೌಕರರ ಮನವಿ ಪತ್ರ ನೀಡುವುದು ಮುಕ್ತಾಯ!!!
ಇನ್ನೆನಿದ್ದರು ಕರ್ತವ್ಯಕ್ಕೆ ಗೈರಾಗುವ ಮೂಲಕ ಪ್ರತಿಭಟನೆ ಆರಂಭ!!
ವಿಜಯಪುರ, ಧಾರವಾಡ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ನೌಕರರ ಹೋರಾಟಕ್ಕೆ ಕೈ ಜೊಡಿಸಿದ್ದಾರೆ..
ವಿಜಯಪುರ,ಜು.14: ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ಶಿಫಾರಸ್ಸು ಜಾರಿ ಮಾಡದೇ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ. ವೇತನ ಆಯೋಗ ಜಾರಿಗೆ ತರದಿದ್ದರೆ ರಾಜ್ಯಾದ್ಯಂತ ಶಾಲಾ, ಕಾಲೇಜು, ಸರ್ಕಾರಿ ಕಛೇರಿಗಳನ್ನು ಬಂದ್ ಮಾಡಿ ಗೈರು ಹಾಜರಾಗುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೇಡಶ್ಯಾಳ ಹೇಳಿದರು.
ನಗರದಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಏಳನೇ ವೇತನ ಜಾರಿ ಸೇರಿದಂತೆ ಎನ್ಪಿಎಸ್ ರದ್ದು, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಕುರಿತು ಮನವಿ ಸಲ್ಲಿಸಿ ಮಾತನಾಡಿದರು.
ಏಳನೇ ವೇತನ ಕೊಡುವಲ್ಲಿ ರಾಜ್ಯ ಸರ್ಕಾರ ಎರಡು ವರ್ಷದಿಂದ ಮೀನಾಮೇಷ ಮಾಡುತ್ತಿದೆ. ನಾಲ್ಕು ರಾಜ್ಯಗಳಲ್ಲಿ ಎನ್ಪಿಎಸ್ (ನೂತನ ಪಿಂಚಣಿ ಯೋಜನೆ) ರದ್ದು ಮಾಡಿ ಓಪಿಎಸ್ (ಹಳೆಯ ಪಿಂಚಣಿ ಯೋಜನೆ) ಜಾರಿ ಮಾಡಿದ್ದಾರೆ. ನಮ್ಮ ರಾಜ್ಯದಲ್ಲೂ ಜಾರಿ ಆಗಬೇಕು. ನೌಕರರು ಮಾರಣಾಂತಿಕ ಕಾಯಿಲೆಗೆ ಬಲಿಯಾಗುತ್ತಿದ್ದು, ಪ್ರತಿ ಕಾಯಿಲೆ ಚಿಕಿತ್ಸೆಗೆ ಒಳಪಡುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಬೇಕು. ಬರುವ ಅಧಿವೇಶನದಲ್ಲಿ ನಮ್ಮ ಬೇಡಿಕೆಯನ್ನು ಇಡೇರಿಸಬೇಕು. ನಮ್ಮ ನ್ಯಾಯಯುತ ಬೇಡಿಕೆ ಇಡೇರದಿದ್ದರೆ ಜುಲೈ 29 ರಿಂದ ರಾಜ್ಯಾದ್ಯಂತ ಶಾಲಾ ಕಾಲೇಜು ಹಾಗೂ ಕಛೇರಿಗಳಲ್ಲಿ ಗೈರು ಹಾಜರಾಗುವ ಮೂಲಕ ಮುಷ್ಕರ ಕೈಗೊಳ್ಳುವ ಕುರಿತು ಕೇಂದ್ರ ಸಂಘ ನಿರ್ಧಾರದಂತೆ ಹೋರಾಟ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ ದೈವಾಡಿ, ಖಜಾಂಚಿ ಜುಬೇರ ಕೆರೂರ, ಗಂಗಾಧರಮಜೇವೂರ, ವಿಜಯಕುಮಾರ ಹತ್ತಿ, ವಿಶ್ವನಾಥ ಬೆಳೆನ್ನವರ, ನೀಜು ಮೇಲಿನಕೇರಿ, ಜಗದೀಶ ಬೋಳಸೂರ, ಬಸೀರ್ ನದಾಫ, ಚನ್ನಯ್ಯ ಮಠಪತಿ, ರವೀಂದ್ರ ಉಗಾರ, ಮುತ್ತಪ್ಪ ಪೂಜಾರಿ, ಉದಯ ಕೊಟ್ಯಾಳ, ರಾಮಣ್ಣಾ ಬೋಳೆಗಾರ, ಅಜೀಜ್ ಅರಳಿಮಟ್ಟಿ, ಬಸವರಾಜ ಗಿರಿನಿವಾಸ, ಎಂ.ಎಚ್. ಚಿತ್ತರಗಿ, ಫಯಾಜ್ ತಮದಡ್ಡಿ, ಎಸ್.ಎಚ್. ಪಿಂಜಾರ್, ಎಸ್.ಎಸ್. ತೇರದಾಳ ಇದ್ದರು